»   » 'ಬಾಯ್' ಫ್ರೆಂಡ್ ಗಳ ಜೊತೆ ಹೊರಗೆ ಸುತ್ತಾಡಿದರೆ ಹುಷಾರ್.!

'ಬಾಯ್' ಫ್ರೆಂಡ್ ಗಳ ಜೊತೆ ಹೊರಗೆ ಸುತ್ತಾಡಿದರೆ ಹುಷಾರ್.!

Posted By:
Subscribe to Filmibeat Kannada

ಇನ್ನು ಕೆಲವೇ ದಿನಗಳಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಅಮೃತ ಸಿಂಗ್ ರವರ ಪುತ್ರಿ ಸಾರಾ ಅಲಿ ಖಾನ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಬಿಟೌನ್ ತುಂಬೆಲ್ಲ ಹರಿದಾಡುತ್ತಿದೆ.

ಮಗಳ ಚೊಚ್ಚಲ ಚಿತ್ರದ ಬಗ್ಗೆ ಅಮೃತ ಸಿಂಗ್ ತುಂಬಾ ಚ್ಯೂಸಿ ಕೂಡ ಆಗಿದ್ದಾರೆ. ಅಲ್ಲದೇ, ಮಗಳ ಮೊದಲ ಸಿನಿಮಾ ಶುರು ಆಗುವ ಮುನ್ನ ಬೇಡದ ವಿವಾದಗಳಿಗೂ ಫುಲ್ ಸ್ಟಾಪ್ ಇಡುವತ್ತ ಅಮೃತ ಸಿಂಗ್ ಯೋಚಿಸಿದ್ದಾರೆ.

Sara Ali Khan is not allowed to hang out with her 'Male' Friends

ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳು ನಿಂತರೂ... ಕುಂತರೂ... ಅದು ಸುದ್ದಿನೇ.! ಹೀಗಿರುವಾಗ, ಸೆಲೆಬ್ರಿಟಿಗಳ ಜೊತೆ ಅಪರಿಚಿತರು ಕಾಣಿಸಿಕೊಂಡು ಬಿಟ್ಟರಂತೂ, ಸಂಬಂಧ ಕಲ್ಪಿಸುವುದು ಅನೇಕರ ಚಾಳಿ ಆಗಿಬಿಟ್ಟಿದೆ. ಇದನ್ನೆಲ್ಲ ಗಮನಿಸಿರುವ ಅಮೃತ ಸಿಂಗ್, ತಮ್ಮ ಮಗಳ ಬಗ್ಗೆ ಯಾವುದೇ ಗುಸು ಗುಸು ಕೇಳಿ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ.

ತಮ್ಮ ಸ್ನೇಹಿತರ ಜೊತೆ.. ಅದರಲ್ಲಿಯೂ ಹುಡುಗರ ಜೊತೆ ಹೊರಗಡೆ ಎಲ್ಲೂ ಸುತ್ತಾಡದಂತೆ ಮಗಳು ಸಾರಾ ಅಲಿ ಖಾನ್ ಗೆ ಆಜ್ಞೆ ಮಾಡಿದ್ದಾರೆ ತಾಯಿ ಅಮೃತ ಸಿಂಗ್.

ಸಾರಾ ಅಲಿ ಖಾನ್ ರ ಬಾಲಿವುಡ್ ಪದಾರ್ಪಣೆಗೆ ವೇದಿಕೆ ಸಜ್ಜಾಗುತ್ತಿರುವಾಗ, ಇಂತಹ ಲಿಂಕಪ್ ಸುದ್ದಿಗಳು ವರದಿ ಆಗಬಾರದು ಎಂಬುದು ತಾಯಿ ಅಮೃತ ಸಿಂಗ್ ರವರ ಕಾಳಜಿ.

English summary
Sara Ali Khan is not allowed to hang out with her 'Male' Friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada