For Quick Alerts
  ALLOW NOTIFICATIONS  
  For Daily Alerts

  ಕೇದರನಾಥದಲ್ಲಿ ಸಾರಾ ಹಾಗೂ ಜಾಹ್ನವಿ ಕಪೂರ್‌ಗೆ ಸಾವಿನ ಅನುಭವ ಆಗಿತ್ತಂತೆ!

  |

  ಬಾಲಿವುಡ್‌ನ ಉದಯೋನ್ಮುಖ ನಟಿಯರಲ್ಲಿ ಸಾರಾ ಅಲಿಖಾನ್ ಹಾಗೂ ಜಾಹ್ನವಿ ಕಪೂರ್ ಮುಂಚೂಣಿಯಲ್ಲಿದ್ದಾರೆ. ಇವರ ಸಿನಿಮಾಗಳು ಒಂದರ ಹಿಂದೊಂದು ಸೆಟ್ಟೇರುತ್ತಿವೆ. ಕೆಲವು ಥಿಯೇಟರ್‌ಗೆ ಲಗ್ಗೆ ಇಟ್ಟರೆ, ಇನ್ನು ಕೆಲವು ಓಟಿಟಿಯಲ್ಲಿ ರಿಲೀಸ್ ಆಗುತ್ತಿವೆ.

  ಸಾರಾ ಅಲಿಖಾನ್ ಹಾಗೂ ಜಾಹ್ನವಿ ಕಪೂರ್ ಇಬ್ಬರೂ ಬಾಲಿವುಡ್‌ನಲ್ಲಿ ಸದ್ಯ ಬ್ಯುಸಿ ಇರುವ ನಟಿಯರು. ಅಲ್ಲದೆ ಇವರಿಬ್ಬರು ಬಾಲಿವುಡ್‌ನ ಬೆಸ್ಟ್ ಫ್ರೆಂಡ್ಸ್. ಸಿನಿಮಾ ಇಲ್ಲದೆ ಇದ್ದಾಗ, ಇಬ್ಬರೂ ಒಟ್ಟಿಗೆ ಸೇರುತ್ತಾರೆ. ಪ್ರವಾಸಕ್ಕೆ ಹೋಗುತ್ತಾರೆ.

  ಸೈಮಾ 2022: ಪ್ರಶಸ್ತಿ ಪಡೆಯಲು ಬಂದ ಬಾಲಿವುಡ್‌ನ ರಣ್ವೀರ್ ಸಿಂಗ್‌ ಕೆನ್ನೆಗೆ ಬಿತ್ತು ಏಟು! ಸೈಮಾ 2022: ಪ್ರಶಸ್ತಿ ಪಡೆಯಲು ಬಂದ ಬಾಲಿವುಡ್‌ನ ರಣ್ವೀರ್ ಸಿಂಗ್‌ ಕೆನ್ನೆಗೆ ಬಿತ್ತು ಏಟು!

  ಇತ್ತೀಚೆಗೆ ಬಾಲಿವುಡ್ ಯಂಗ್ ನಟಿಯರು ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಇಬ್ಬರೂ ನಟಿಯರೂ ತಮಗಾದ ಸಾವಿನ ಅನುಭವದ ಬಗ್ಗೆ ಮನಬಿಚ್ಚಿ ಮಾತಾಡಿದ್ದರು.

  ಇತ್ತೀಚೆಗೆ ಸಾರಾ ಹಾಗೂ ಜಾಹ್ನವಿ ಇಬ್ಬರೂ ಕೇದರನಾಥಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಇಬ್ಬರ ನಡುವೆ ನಡೆದ ಘಟನೆಯನ್ನು 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ. ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

  ಸಾರಾ ಅಲಿಖಾನ್ ಹಾಗೂ ಜಾಹ್ನವಿ ಕಪೂರ್ ಇಬ್ಬರೂ ಕೇದರನಾಥಗೆ ಭೇಟಿ ನೀಡಿದ್ದರು. " ಈ ವೇಳೆ ಸಾರಾ ಹಾಗೂ ಜಾಹ್ನವಿ ಕಪೂರ್ ಇಬ್ಬರೂ ಭೈರವನಾಥ್‌ಗೆ ಹೋಗಲು ನಿರ್ಧರಿಸಿದ್ದೆವು. ಅದು ದಾರಿ ನೋಡೋಕೆ ಸುಲಭ ಅಂತ ಅನಿಸಿತ್ತು. ಇಬ್ಬರೇ ಬಂಡೆಗಳನ್ನು ಹತ್ತುವುದೆಂದು ನಿರ್ಧರಿಸಿದ್ದೆವು. ಜಾಹ್ನವಿ ಕೂಡ ಇಬ್ಬರೇ ಹೋಗೋಣ ಎಂದಳು. ಕೆಲವು ದೂರು ಪ್ರಯಾಣ ಮಾಡುತ್ತಿದ್ದಂತೆ, ಅಲುಗಾಡುತ್ತಿದ್ದ ಬಂಡೆ ಮೇಲೆ ನಿಂತಿದ್ದ ನಮಗೆ ನಾವು ಅಪಾಯದಲ್ಲಿದ್ದೇವೆ ಎಂದು ಮನವರಿಕೆಯಾಗಿತ್ತು. ಆಗ ಡ್ರೈವರ್ ನೋಡಿ ಸ್ಪೆಷಲ್ ಫೋರ್ಸ್ ಸಹಾಯದಿಂದ ನಮ್ಮ ರಕ್ಷಣೆ ಮಾಡಲಾಯಿತು." ಎಂದು ಸಾರಾ ಅಲಿಖಾನ್ ಹೇಳಿಕೊಂಡಿದ್ದರು.

  ಬಾಲಿವುಡ್‌ ಈ ಬ್ಯೂಟಿಫುಲ್ ನಟಿಯರು ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾರಾ ಅಲಿ ಖಾನ್ ಈಗ ವಿಕ್ಕಿ ಕೌಶಲ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಮುಗಿಯುವ ಹಂತಕ್ಕೆ ಬಂದಿದೆ. ಇನ್ನೊಂದು ಕಡೆ 'ಗ್ಯಾಸ್‌ಲೈಟ್' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  Sara Ali Khan Janhvi Kapoor Faced Death Experience During Kedarnath Visit

  ಇನ್ನೊಂದು ಕಡೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೂಡ ರಾಜ್‌ಕುಮಾರ್ ರಾವ್ ಜೊತೆ ನಟಿಸುತ್ತಿದ್ದಾರೆ. 'ಮಿಸ್ಟರ್ ಅಂಡ್ ಮಿಸ್ಸಸ್ ಮಾಹಿ' ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಪರ್ಫಾಮೆನ್ಸ್ ಓರಿಯೆಂಟೆಡ್ ಸಿನಿಮಾ ಎನ್ನಲಾಗಿದೆ.

  English summary
  Sara Ali Khan Janhvi Kapoor Faced Death Experience During Kedarnath Visit, Know More.
  Tuesday, October 4, 2022, 23:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X