ದೇವಸ್ಥಾನಕ್ಕೆ ಹೋದರೂ ತಾರೆಯರಿಗೆ ಪ್ರೈವಸಿ ಇಲ್ಲ.!

By Harshitha

Recommended Video

ದೇವಸ್ಥಾನದಲ್ಲೂ ಸೆಲೆಬ್ರಿಟಿಗಳನ್ನು ಬಿಡೋದಿಲ್ಲ ಜನ..! | Filmibeat Kannada

ಸೆಲೆಬ್ರಿಟಿಗಳು ಕುಂತರೂ, ನಿಂತರೂ ಸುದ್ದಿಯೇ.. ತಾರೆಯರ ಪ್ರತಿ ಹೆಜ್ಜೆಯನ್ನೂ ಸೆರೆ ಹಿಡಿಯಲು ಕ್ಯಾಮರಾ ಕಂಗಳು ಕಾಯುತ್ತಲಿರುತ್ತವೆ. ಕೆಲವೊಮ್ಮೆ ಇದೇ ಕ್ಯಾಮರಾ ಸ್ಟಾರ್ ಗಳಿಗೆ ಕಿರಿಕಿರಿ ತರುತ್ತವೆ. ಸದ್ಯ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಗೆ ಆಗಿರುವುದು ಇದೇ.!

ಸಾರಾ ಅಲಿ ಖಾನ್ ಇತ್ತೀಚೆಗಷ್ಟೇ ದೇವಸ್ಥಾನವೊಂದಕ್ಕೆ ಭೇಟಿ ಕೊಟ್ಟಿದ್ದರು. ಸಹೋದರ ಇಬ್ರಾಹಿಂ ಅಲಿ ಖಾನ್ ಹಾಗೂ ತಾಯಿ ಅಮೃತಾ ಸಿಂಗ್ ಜೊತೆಗೆ ಮುಂಬೈನ ಶ್ರೀ ಮುಕ್ತೇಶ್ವರ ದೇವಸ್ಥಾನದಲ್ಲಿ ಸಾರಾ ಅಲಿ ಖಾನ್ ಪೂಜೆ ಸಲ್ಲಿಸಿದರು.

ಈ ವೇಳೆ ಫೋಟೋಗ್ರಾಫರ್ ಗಳ ದಂಡು ದೇವಸ್ಥಾನದ ಮುಂಭಾಗದಲ್ಲಿ ದೌಡಾಯಿಸಿತ್ತು. ಸಾರಾ ಅಲಿ ಖಾನ್ ಪೂಜೆ ಸಲ್ಲಿಸಿ, ಕೆಲವರಿಗೆ ಕಾಣಿಕೆ ನೀಡಿದ್ದು ಕ್ಯಾಮರಾ ಕಂಗಳಲ್ಲಿ ಸೆರೆ ಆಯ್ತು. ಇದು ಸಾರಾ ಅಲಿ ಖಾನ್ ಗೆ ಇಷ್ಟ ಆಗಲಿಲ್ಲ.

Sara Ali Khan lashes out at Paparazzi for clicking her at temple

''ದಯವಿಟ್ಟು ಫೋಟೋ ತೆಗೆಯುವುದನ್ನ ನಿಲ್ಲಿಸಿ'' ಅಂತ ಹೇಳುತ್ತಲೇ ಬಿರ್ರನೆ ತಮ್ಮ ಕಾರ್ಯ ಮುಗಿಸಿ ಸಾರಾ ಅಲಿ ಖಾನ್ ಹೊರಟು ಬಿಟ್ಟರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಲ್ಲಾದರೆ ಕೇಳದೇ ಇದ್ದರೂ ಕ್ಯಾಮರಾಗಳಿಗೆ ತಾರೆಯರು ಪೋಸ್ ಕೊಡ್ತಾರೆ. ಆದ್ರೆ, ಕೆಲವು ಸಂದರ್ಭಗಳಲ್ಲಿ ತಾವು ಸೆರೆಯಾಗುವುದು ಸ್ಟಾರ್ ಗಳಿಗೆ ಇಷ್ಟ ಆಗುವುದಿಲ್ಲ. ಎಷ್ಟೇ ಆಗಲಿ ಅದು ಅವರ ವೈಯುಕ್ತಿಕ ನಿರ್ಧಾರ ಅಲ್ಲವೇ.?!

More from Filmibeat

English summary
Sara Ali Khan lashes out at Paparazzi for clicking her at temple.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X