For Quick Alerts
  ALLOW NOTIFICATIONS  
  For Daily Alerts

  ತಮ್ಮನ ಜತೆ ಬಿಕಿನಿಯಲ್ಲಿ ಪೋಸ್: ಸಾರಾ ಅಲಿ ಖಾನ್‌ಗೆ ನೆಟ್ಟಿಗರಿಂದ ತರಾಟೆ

  |

  ಪಟೌಡಿ ಕುಟುಂಬದ ಬೆಡಗಿ ಸಾರಾ ಅಲಿ ಖಾನ್ ತಮ್ಮ ಹಸಿ ಬಿಸಿ ಬಿಕಿನಿ ಚಿತ್ರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾನ್ಯವಾಗಿ ಬಿಕಿನಿಯಲ್ಲಿ ದೇಹ ಪ್ರದರ್ಶನ ಮಾಡುವ ನಟಿಯರನ್ನು ಮೆಚ್ಚಿಕೊಳ್ಳುವ ಅಭಿಮಾನಿಗಳೇ ಹೆಚ್ಚು. ಆದರೆ ಸಾರಾಗೆ ಅಭಿಮಾನಿಗಳು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ. ಇದಕ್ಕೆ ಕಾರಣ ಆಕೆ ತಮ್ಮನ ಜತೆಗೆ ನಿಂತು ಬಿಕಿನಿಯಲ್ಲಿ ಪೋಸ್ ನೀಡಿರುವುದು.

  ಸಾರಾ ಅಲಿಖಾನ್ ಬೀಚ್ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಉಡುಪಿನ ಬಗ್ಗೆ ನೆಟ್ಟಿಗರು ತಗಾದೆ ಎತ್ತಿಲ್ಲ. ಏಕೆಂದರೆ ಬಿಕಿನಿ ಚಿತ್ರಗಳು ಅವರ ಅಭಿಮಾನಿಗ:ಇಗೆ ಹೊಸದಲ್ಲ. ಆದರೆ ತಮ್ಮನ ಜತೆಗೆ ಆಕೆ ನೀಡಿರುವ ಪೋಸ್ ಸಾಕಷ್ಟು ಗೊಂದಲಗಳಿಗೆ ಎಡೆ ಮಾಡಿಕೊಡುವಂತಿದೆ ಎನ್ನುವುದು ನೆಟ್ಟಿಗರ ಆಕ್ಷೇಪ. ಸಾರಾ ಬಾಯ್ ಫ್ರೆಂಡ್ ಜತೆ ನಿಲ್ಲುವಂತೆ ಪೋಸ್ ನೀಡಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

  ನಟಿ ಸಾರಾಗೆ'ಅತ್ತಿಗೆ' ಎಂದು ಕರೆದು ಮುಜುಗರ ಉಂಟುಮಾಡಿದ ಅಭಿಮಾನಿಗಳುನಟಿ ಸಾರಾಗೆ'ಅತ್ತಿಗೆ' ಎಂದು ಕರೆದು ಮುಜುಗರ ಉಂಟುಮಾಡಿದ ಅಭಿಮಾನಿಗಳು

  ಸಹೋದರ ಜನ್ಮದಿನ

  ಸಹೋದರ ಜನ್ಮದಿನ

  ಮೊನ್ನೆ ಸಹೋದರ ಇಬ್ರಾಹಿಂ ಅಲಿ ಖಾನ್ ಜನ್ಮದಿನದಂದು ಸಾರಾ ಆತನ ಜತೆಗೆ ಇರಲು ಸಾಧ್ಯವಾಗಿಲ್ಲ ಎಂಬ ಬೇಸರವನ್ನು ಹಂಚಿಕೊಂಡಿದ್ದರು. ತಮ್ಮನ ಜತೆಗಿನ ಬಾಂಧವ್ಯದ ಬಗ್ಗೆ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸಾರಾ, ಈ ಬೇಸರದೊಂದಿಗೇ ತಮ್ಮನಿಗೆ ಬರ್ಥಡೇ ವಿಷ್ ಮಾಡಿದ್ದರು. ಜತೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದ ತಮ್ಮ ಹಳೆಯ ಚಿತ್ರಗಳನ್ನು ಹಂಚಿಕೊಂಡಿದ್ದರು.

  ಕುಟುಂಬದ ಜತೆ ಮಾಲ್ಡೀವ್ಸ್‌ಗೆ

  ಕುಟುಂಬದ ಜತೆ ಮಾಲ್ಡೀವ್ಸ್‌ಗೆ

  ಜನವರಿ ಆರಂಭದಲ್ಲಿ ಸಾರಾ ಅಲಿಖಾನ್, ಇಬ್ರಾಹಿಂ ಹಾಗೂ ಅವರ ಅಮ್ಮ ಅಮೃತಾ ಸಿಂಗ್ ಮಾಲ್ಡೀವ್ಸ್‌ಗೆ ಒಂದು ವಾರ ರಜೆ ಕಳೆಯಲು ತೆರಳಿದ್ದರು. ಅದರಲ್ಲಿ ಇಬ್ರಾಹಿಂ ಜತೆಗೆ ಇದ್ದ ಎರಡು ತನ್ನ ಇಷ್ಟದ ಚಿತ್ರಗಳನ್ನು ಸಾರಾ ಹಂಚಿಕೊಂಡು ಆತನಿಗೆ ಶುಭಾಶಯ ಕೋರಿದ್ದರು.

  ದಪ್ಪಗೆ ಮುದ್ದು ಮುದ್ದಾಗಿ ಇರುವ ಈ ಹುಡುಗಿ ಈಗ ಬಾಲಿವುಡ್ ಸ್ಟಾರ್ ನಟಿದಪ್ಪಗೆ ಮುದ್ದು ಮುದ್ದಾಗಿ ಇರುವ ಈ ಹುಡುಗಿ ಈಗ ಬಾಲಿವುಡ್ ಸ್ಟಾರ್ ನಟಿ

  ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಸಾರಾ

  'ಜನ್ಮದಿನದ ಶುಭಾಶಯಗಳು ಸಹೋದರ. ನಿನಗೆ ತಿಳಿದಿರುವುದಕ್ಕಿಂತಲೂ ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ. ಇಂದು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಜೊತೆ ಇರಬೇಕಿತ್ತು' ಎಂದು ಸಾರಾ ಹೇಳಿದ್ದರು. ತಮ್ಮನಿಗೆ ಬರ್ಥಡೇ ವಿಷ್ ಮಾಡಿದ ಬಗೆಯನ್ನು ನೆಟ್ಟಿಗರು ಇಷ್ಟಪಟ್ಟರೂ, ಆಕೆ ಹಂಚಿಕೊಂಡ ಫೋಟೊ ಅವರಿಗೆ ಇಷ್ಟವಾಗಿಲ್ಲ.

  ಪೋಸ್ ಬಹಳ ಕೆಟ್ಟದಾಗಿದೆ

  ಪೋಸ್ ಬಹಳ ಕೆಟ್ಟದಾಗಿದೆ

  'ತಮ್ಮನೊಂದಿಗೆ ಇರುವ ಯಾವ ರೀತಿಯ ಫೋಟೊಗಳನ್ನು ತೆಗೆಸಿಕೊಳ್ಳಬೇಕು ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲವೇ?', 'ಈ ಪೋಸ್ ತುಂಬಾ ಕೆಟ್ಟದಾಗಿದೆ. ಕುಟುಂಬದ ಜತೆಗೆ ಇಂತಹ ಫೋಟೊಗಳನ್ನು ಹಂಚಿಕೊಳ್ಳಬೇಕೇ?' ಎಂದು ಅನೇಕರು ವಾಗ್ದಾಳಿ ನಡೆಸಿದ್ದಾರೆ.

  ಸಾರಾಳ ಗೆಳೆಯ ಎಂದುಕೊಂಡೆ

  ಸಾರಾಳ ಗೆಳೆಯ ಎಂದುಕೊಂಡೆ

  'ಈ ಫೋಟೊ ನೋಡಿದಾಗ ಮೊದಲು ಸಾರಾಳ ಪಾರ್ಟ್ನರ್ ಎಂದುಕೊಂಡೆ. ಬಳಿಕ ಅರ್ಥವಾಯಿತು. ಆಕೆ ಹೇಗೆ ಉಡುಪು ಧರಿಸಿದ್ದಾಳೋ ಅದು ತಪ್ಪಲ್ಲ. ಆದರೆ ತಪ್ಪಿರುವುದು ಅದರ ಪೋಸ್‌ನಲ್ಲಿ. ಆತನ ಮುಖ ನೋಡಿ, ಎಷ್ಟು ಮುಜುಗರಕ್ಕೆ ಒಳಗಾದಂತೆ ಕಾಣಿಸುತ್ತಿದೆ' ಎಂದು ಹೇಳಿದ್ದಾರೆ.

  ದೊಡ್ಡವರು ಸರಿ-ತಪ್ಪು ಕಲಿಸಬೇಕು

  ದೊಡ್ಡವರು ಸರಿ-ತಪ್ಪು ಕಲಿಸಬೇಕು

  'ಹಣ ಮತ್ತು ಕೀರ್ತಿ ಜನರು ಕಲ್ಪನೆ ಮಾಡಿಕೊಳ್ಳಲಾರದಷ್ಟು ಮಟ್ಟಕ್ಕೆ ಕೊಂಡೊಯ್ಯುತ್ತವೆ. ಮಕ್ಕಳಿಗೆ ಹೇಗೆ ಇರಬೇಕು ಎಂಬ ಸಂಸ್ಕಾರದ ಬಗ್ಗೆ ತಿಳಿದಿಲ್ಲದೆ ಇದ್ದಾಗ ದೊಡ್ಡವರು ಯಾವುದು ಸರಿ ತಪ್ಪು ಎಂದು ತಿಳಿಸಿಕೊಡಬೇಕು. ನಮ್ಮ ಸಂಸ್ಕೃತಿ ಮತ್ತಷ್ಟು ಹಾಳಾಗುತ್ತಲೇ ಇದೆ' ಎಂದು ಕೆಲವರು ಕಿಡಿಕಾರಿದ್ದಾರೆ.

  English summary
  Netizens slammed Sara Ali Khan for posting pictures with her brother Ibrahim on his birthday in Bikini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X