For Quick Alerts
  ALLOW NOTIFICATIONS  
  For Daily Alerts

  'ಒಟ್ಟಿಗೆ ಇದ್ದಿದ್ರೆ ಖುಷಿಯಾಗಿ ಇರ್ತಿರಲಿಲ್ಲ': ಪೋಷಕರ ಡಿವೋರ್ಸ್ ಬಗ್ಗೆ ಸಾರಾ ಹೇಳಿದ್ದೇನು?

  |

  ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ತಮ್ಮ 13 ವರ್ಷದ ದಾಂಪತ್ಯವನ್ನು 2004ರಲ್ಲಿ ಮುರಿದುಕೊಂಡಿದ್ದರು. ಮೊದಲ ವಿವಾಹ ಅಂತ್ಯಗೊಳಿಸಿಕೊಂಡ ಸೈಫ್ ಅಲಿ ಖಾನ್, ನಟಿ ಕರೀನಾ ಕಪೂರ್ ಜೊತೆ ಮತ್ತೆ ಮದುವೆಯಾದರು. ಸೈಫ್ ಮತ್ತು ಅಮೃತಾ ಸಿಂಗ್ ದಂಪತಿಗೆ ಇಬ್ಬರು ಮಕ್ಕಳು. ಸಾರಾ ಅಲಿ ಖಾನ್ (ಚಲನಚಿತ್ರ ನಟಿ) ಮತ್ತು ಇಬ್ರಾಹಿಂ ಅಲಿ ಖಾನ್.

  2012ರಲ್ಲಿ ಕರೀನಾ ಕಪೂರ್ ಜೊತೆ ಸೈಫ್ ಅಲಿ ಖಾನ್‌ ಎರಡನೇ ವಿವಾಹವಾದರು. ಈ ದಂಪತಿ ಇಬ್ಬರು ಮಕ್ಕಳು. ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ (ಇನ್ನು ಹೆಸರು ಅಧಿಕೃತವಾಗಿಲ್ಲ).

  ಸಿನಿಮಾಗಳಲ್ಲಿ ಕಡಿಮೆ ಪ್ರಾಮುಖ್ಯತೆ: ಯೋಗ್ಯತೆ ಬಗ್ಗೆ ಸಾರಾ ಅಲಿ ಖಾನ್ ಮಾತುಸಿನಿಮಾಗಳಲ್ಲಿ ಕಡಿಮೆ ಪ್ರಾಮುಖ್ಯತೆ: ಯೋಗ್ಯತೆ ಬಗ್ಗೆ ಸಾರಾ ಅಲಿ ಖಾನ್ ಮಾತು

  ವಯಸ್ಸಿನಲ್ಲಿ ತನಗಿಂತ ಹಿರಿಯ ನಟಿಯನ್ನು ಮದುವೆಯಾಗಿದ್ದ ಸೈಫ್ ಅಲಿ ಖಾನ್, ಡಿವೋರ್ಸ್ ಕೊಡಲು ಸೂಕ್ತ ಕಾರಣ ಏನೆಂದು ಸ್ಪಷ್ಟವಾಗಿ ತಿಳಿದಿಲ್ಲ. ಇದೀಗ, ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಾರಾ ಅಲಿ ಖಾನ್, ತಮ್ಮ ಪೋಷಕರ ವಿಚ್ಚೇದನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪೋಷಕರು ಡಿವೋರ್ಸ್ ಆದ್ಮೇಲೆ ತನ್ನ ಲೈಫ್ ಹೇಗಿದೆ, ತಂದೆಯ ಜೊತೆಗೆ ಸಾರಾ ಅಲಿ ಖಾನ್ ಬಾಂಧವ್ಯ ಹೇಗಿದೆ ಎನ್ನುವ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಮುಂದೆ ಓದಿ...

  ಎರಡು ಆಯ್ಕೆ ಎಲ್ಲರ ಮುಂದಿರುತ್ತದೆ

  ಎರಡು ಆಯ್ಕೆ ಎಲ್ಲರ ಮುಂದಿರುತ್ತದೆ

  ಪೋಷಕರ ಡಿವೋರ್ಸ್ ಬಗ್ಗೆ ವೂಟ್ ವಿಶೇಷ ಸಂಚಿಕೆಯಲ್ಲಿ ಮಾತನಾಡಿದ ಸಾರಾ ಅಲಿ ಖಾನ್, ''ಜೀವನದಲ್ಲಿ ಎಲ್ಲರಿಗು ಎರಡು ಆಯ್ಕೆ ಇರುತ್ತದೆ. ಇದು ತುಂಬಾ ಸರಳ. ಸಂತೋಷವಾಗಿಲ್ಲ ಅಂದರೂ ಒಂದೇ ಮನೆಯಲ್ಲಿ ವಾಸ ಮಾಡುವುದು, ಇದರಿಂದ ಯಾರಿಗೂ ನೆಮ್ಮದಿ ಇರಲ್ಲ. ಇನ್ನೊಂದು ಪ್ರತ್ಯೇಕವಾಗಿ ಜೀವನ ಮಾಡುವುದು. ಇದರಿಂದ ನೀವು ಬಯಸಿದಂತೆ ಜೀವಿಸಬಹುದು. ಯಾರಿಗೂ ತೊಂದರೆ ಇರುವುದಿಲ್ಲ. ಹೊಸ ರೀತಿಯ ಪ್ರೀತಿ ಸಿಗಬಹುದು, ಸಮಾಧಾನ ಸಿಗಬಹುದು'' ಎಂದು ಪೋಷಕರ ನಿರ್ಧಾರವನ್ನು ಗೌರವಿಸಿದ್ದಾರೆ.

  ಒಟ್ಟಿಗೆ ಇದ್ದಿದ್ದರೆ ಸಂತೋಷ ಇರ್ತಿರಲಿಲ್ಲ

  ಒಟ್ಟಿಗೆ ಇದ್ದಿದ್ದರೆ ಸಂತೋಷ ಇರ್ತಿರಲಿಲ್ಲ

  ''ನಾನು ತಾಯಿಯ ಜೊತೆಯಲ್ಲಿ ಇದ್ದೇನೆ. ನನಗೆ ಎಲ್ಲವೂ ಅವರೇ. ಅವರು ನನ್ನ ಆತ್ಮೀಯ ಗೆಳತಿ. ನನಗೆ ತಂದೆಯೂ ಇದ್ದಾರೆ. ಯಾವಾಗ ಬೇಕಾದರೂ ಫೋನಿನಲ್ಲಿ ಸಂಪರ್ಕಿಸಬಹುದು. ಅಗತ್ಯವಿದ್ದಾಗ ಭೇಟಿ ಸಹ ಮಾಡಬಹುದು. ಅವರಿಬ್ಬರು ಒಟ್ಟಿಗೆ ಇದ್ದಿದ್ದರೆ ಬಹುಶಃ ಖುಷಿಯಾಗಿ ಇರ್ತಿದ್ದರು ಎನ್ನುವ ನಂಬಿಕೆ ನನಗಿಲ್ಲ. ಪರಸ್ಪರ ದೂರವಾಗಲು ನಿರ್ಧರಿಸಿದ್ದು ಉತ್ತಮ ನಿರ್ಧಾರವೇ ಎಂದು ಭಾವಿಸುತ್ತೇನೆ'' ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ.

  ಅತ್ರಂಗಿ ರೇ ಚಿತ್ರೀಕರಣ ಮುಕ್ತಾಯ: ಧನುಶ್‌ಗೆ ಧನ್ಯವಾದ, ಅಕ್ಷಯ್‌ಗೆ ಕ್ಷಮೆ ಕೇಳಿದ ಸಾರಾಅತ್ರಂಗಿ ರೇ ಚಿತ್ರೀಕರಣ ಮುಕ್ತಾಯ: ಧನುಶ್‌ಗೆ ಧನ್ಯವಾದ, ಅಕ್ಷಯ್‌ಗೆ ಕ್ಷಮೆ ಕೇಳಿದ ಸಾರಾ

  ಯಾವುದೋ ಕಾರಣಕ್ಕೆ ನಡೆಯುತ್ತದೆ

  ಯಾವುದೋ ಕಾರಣಕ್ಕೆ ನಡೆಯುತ್ತದೆ

  "ಇಬ್ಬರೂ ತಮ್ಮದೇ ಆದ ಪ್ರಪಂಚ ಮತ್ತು ಜೀವನದಲ್ಲಿ ಖುಷಿಯಾಗಿದ್ದಾರೆ. ಅದರಿಂದಾಗಿ ಅವರ ಮಕ್ಕಳು ಕೂಡ ಸಂತೋಷವಾಗಿದ್ದಾರೆ. ನಿಜವಾಗಲೂ ನಾವೆಲ್ಲರೂ ನಾವು ಹೆಚ್ಚು ಸಂತಸದಲ್ಲಿದ್ದೇವೆ. ಜೀವನದಲ್ಲಿ ಏನೇ ಆದರೂ ಯಾವುದೋ ಒಂದು ಕಾರಣಕ್ಕಾಗಿ ನಡೆಯುತ್ತದೆ ಎಂದು ನಂಬಿದ್ದೇನೆ" ಎಂದು ಸೈಫ್ ಅಲಿ ಖಾನ್ ಪುತ್ರಿ ಅಭಿಪ್ರಾಯ ಪಟ್ಟರು.

  ಕರೀನಾ ಜೊತೆಯೂ ಚೆನ್ನಾಗಿದ್ದೇನೆ

  ಕರೀನಾ ಜೊತೆಯೂ ಚೆನ್ನಾಗಿದ್ದೇನೆ

  ''ಕರೀನಾ ಕಪೂರ್ ಜೊತೆಯೂ ನನ್ನ ಸಂಬಂಧ ಚೆನ್ನಾಗಿಯೇ ಇದೆ. ನಮ್ಮಿಬ್ಬರ ನಡುವೆ ಆರೋಗ್ಯಕರವಾದ ಸ್ನೇಹ ಇದೆ. ನನ್ನ ತಂದೆ ಪ್ರೀತಿಸುವ ಯಾವುದೇ ವ್ಯಕ್ತಿಯನ್ನು ನಾನು ಸಹ ಇಷ್ಟಪಡುತ್ತೇನೆ. ಇನ್ನೊಂದು ವಿಷಯ ಏನಂದ್ರೆ, ಕರೀನಾ ಜೊತೆಗೆ ನಮ್ಮ ತಂದೆಯ ಮದುವೆಗೆ ನಮ್ಮ ತಾಯಿ ನನ್ನನ್ನು ರೆಡಿ ಮಾಡಿದ್ದರು. ನನಗಾಗಿ ನನ್ನ ತಾಯಿ ಇದ್ದಾರೆ. ನನಗಾಗಿ ಎಲ್ಲವೂ ಮಾಡ್ತಾರೆ'' ಎಂದು ಸಾರಾ ಮಲತಾಯಿಯ ಬಗ್ಗೆಯೂ ಮಾತನಾಡಿದರು.

  ಕರೀನಾ ಮಕ್ಕಳ ಜೊತೆ ಸಾರಾ ಫೋಟೋ

  ಕರೀನಾ ಮಕ್ಕಳ ಜೊತೆ ಸಾರಾ ಫೋಟೋ

  ಅಂದ್ಹಾಗೆ, ಸಾರಾ ಅಲಿ ಖಾನ್ ಆಗಾಗ ಸೈಫ್ ಮತ್ತು ಕರೀನಾ ಮನೆಗೆ ಭೇಟಿ ಕೊಡ್ತಾರೆ. ಇತ್ತೀಚಿಗಷ್ಟೆ ಈದ್ ಹಬ್ಬವನ್ನು ತಂದೆ ಆಚರಣೆ ಮಾಡಿರುವ ಫೋಟೋಗಳು ಬಹಿರಂಗವಾಗಿದ್ದವು. ಆ ಫೋಟೋದಲ್ಲಿ ಕರೀನಾ ಪುತ್ರರಾದ ತೈಮೂರ್ ಹಾಗೂ ಜೆಹ್ ಜೊತೆ ಸಾರಾ ಆಟವಾಡ್ತಿದ್ದರು.

  ವಯಸ್ಸಿನಲ್ಲಿ 13 ವರ್ಷ ದೊಡ್ಡವರು ಅಮೃತಾ ಸಿಂಗ್

  ವಯಸ್ಸಿನಲ್ಲಿ 13 ವರ್ಷ ದೊಡ್ಡವರು ಅಮೃತಾ ಸಿಂಗ್

  1991ರಲ್ಲಿ ನಟಿ ಅಮೃತಾ ಸಿಂಗ್ ಜೊತೆ ಸೈಫ್ ಅಲಿ ಖಾನ್ ಮದುವೆಯಾದರು. ಟೀಂ ಇಂಡಿಯಾ ತಂಡದ ಮಾಜಿ ಆಟಗಾರ ಹಾಗೂ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಮಗನಾಗಿದ್ದ ಸೈಫ್ ವಯಸ್ಸಿನಲ್ಲಿ ತನಗಿಂತ 13 ವರ್ಷದ ಹಿರಿಯ ನಟಿ ಅಮೃತಾರನ್ನು ವಿವಾಹ ಮಾಡಿಕೊಂಡರು. ದುರಾದೃಷ್ಟವಶಾತ್ ಇವರ ದಾಂಪತ್ಯ ಸಹ 13 ವರ್ಷಕ್ಕೆ ಕೊನೆಯಾಯಿತು.

  ಸಾರಾ ಅಲಿ ಖಾನ್ ಚಿತ್ರಗಳು

  ಸಾರಾ ಅಲಿ ಖಾನ್ ಚಿತ್ರಗಳು

  2018ರಲ್ಲಿ 'ಕೇದರ್‌ನಾಥ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಸಾರಾ ಅಲಿ ಖಾನ್ ಅದೇ ವರ್ಷ ರಣ್ವೀರ್ ಸಿಂಗ್ ಜೊತೆ 'ಸಿಂಬಾ' ಚಿತ್ರದಲ್ಲಿ ನಟಿಸಿದರು. ನಂತರ 2020ರಲ್ಲಿ 'ಕೂಲಿ ನಂ 1' ಹಾಗೂ 'ಲವ್ ಆಜ್ ಕಲ್' ಚಿತ್ರಗಳಲ್ಲಿ ಕಾಣಿಸಿಕೊಂಡರು. ಪ್ರಸ್ತುತ, ಅಕ್ಷಯ್ ಕುಮಾರ್ ಮತ್ತು ಧನುಶ್ ನಟಿಸಿರುವ 'ಅಟ್ರಂಗಿ ರೇ' ಚಿತ್ರ ಬಿಡುಗಡೆಯಾಗಬೇಕಿದೆ. ಈ ಸಿನಿಮಾದಲ್ಲಿ ಸಾರಾ ಅಲಿ ಖಾನ್ ನಾಯಕಿ.

  English summary
  Actress Sara Ali Khan react about her parents saif ali khan and amrita singh divorce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X