ಸಾರಾ ಅಲಿ ಖಾನ್ ಕಾರು ಚಾಲಕನಿಗೆ ಕೊರೊನಾ: ಆತಂಕದಲ್ಲಿ ಸೈಫ್ ಕುಟುಂಬ

ಬಾಲಿವುಡ್ ನ ಸೆಲೆಬ್ರಿಟಿಗಳನ್ನು ಒಬ್ಬರಾದ ಮೇಲೆ ಒಬ್ಬರಂತೆ ಕೊರೊನಾ ಕಾಡುತ್ತಿದೆ. ಅಮಿತಾಬ್ ಬಚ್ಚನ್ ಕುಟುಂಬ, ಅನುಪಮ್ ಖೇರ್ ಕುಟುಂಬದ ನಂತರ ಈಗ ಸೈಫ್ ಕುಟುಂಬಕ್ಕೆ ಕೊರೊನಾ ಕಂಟಕ ತಗುಲಿದೆ.

Recommended Video

ಶಿವಣ್ಣನ ಈ ದಾಖಲೆಯನ್ನು ಯಾವ ಭಾಷೆಯ ಯಾವ ನಟನೂ ಮಾಡಿಲ್ಲ | Shivarajkumar | Pratham | Oneindia Kannada

ಸೈಫ್ ಅಲಿ ಖಾನ್ ಪುತ್ರಿ, ನಟಿ ಸಾರಾ ಅಲಿ ಖಾನ್ ಅವರ ಕಾರು ಚಾಲಕನಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಸಾರಾ ಅಲಿ ಖಾನ್ ಸೇರಿದಂತೆ ಸೈಫ್ ಕುಟುಂಬವೂ ಆತಂಕದಲ್ಲಿದೆ.

ಸಾರಾ ಅಲಿ ಖಾನ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ನಮ್ಮ ಡ್ರೈವರ್‌ಗೆ ಕೊರೊನಾ ಪಾಸಿಟಿವ್ ಆಗಿದ್ದು, ಆತನನ್ನು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದಿದ್ದಾರೆ.

ಸಾರಾ ಅಲಿ ಖಾನ್ ಗೆ ಕೊರೊನಾ ನೆಗೆಟಿವ್

ಸಾರಾ ಅಲಿ ಖಾನ್ ಗೆ ಕೊರೊನಾ ನೆಗೆಟಿವ್

ನಾನು, ನನ್ನ ಕುಟುಂಬ ಮತ್ತು ನಮ್ಮ ಇತರ ಸಿಬ್ಬಂದಿ ವರ್ಗ ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಿಸಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಆದರೂ ಕೆಲವು ಎಚ್ಚರಿಕಾ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಸಾರಾ ಹೇಳಿದ್ದಾರೆ.

ಮುಂಬೈ ಮಹಾನಗರ ಪಾಲಿಕೆಗೆ ಧನ್ಯವಾದ

ಮುಂಬೈ ಮಹಾನಗರ ಪಾಲಿಕೆಗೆ ಧನ್ಯವಾದ

ಮುಂಬೈ ಮಹಾನಗರ ಪಾಲಿಕೆಗೆ ಧನ್ಯವಾದ ತಿಳಿಸಿರುವ ಸಾರಾ, ನನ್ನ ಮತ್ತು ನನ್ನ ಕುಟುಂಬದ ಕಡೆಯಿಂದ ಬಿಎಂಸಿ ಗೆ ಧನ್ಯವಾದ. ಅವರು ನಮಗೆ ಸೂಕ್ತ ಮುನ್ನೆಚ್ಚರಿಕೆ ಮತ್ತು ಸಲಹೆಗಳನ್ನು ನೀಡಿದೆ ಎಂದು ಸಾರಾ ಹೇಳಿದ್ದಾರೆ.

ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೊನಾ

ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೊನಾ

ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯ ಅವರು ಕೊರೊನಾ ಸೋಂಕಿತರಾಗಿದ್ದು, ಪ್ರಸ್ತುತ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅನುಪಮ್ ಖೇರ್ ತಾಯಿಗೆ ಕೊರೊನಾ

ಅನುಪಮ್ ಖೇರ್ ತಾಯಿಗೆ ಕೊರೊನಾ

ನಟ ಅನುಪಮ್ ಖೇರ್ ಅವರ ತಾಯಿ, ಸಹೋದರ ಮತ್ತು ಪತ್ನಿ ಮತ್ತು ಮಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. ಅನುಪಮ್ ಖೇರ್ ಪ್ರಸ್ತುತ ಕ್ವಾರಂಟೈನ್‌ನಲ್ಲಿದ್ದಾರೆ.

More from Filmibeat

English summary
Bollywood actress Sara Ali Khan's driver gets coronavirus positive. She said she and her family tested negative.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X