For Quick Alerts
  ALLOW NOTIFICATIONS  
  For Daily Alerts

  ಸಿನಿಮಾಗಳಲ್ಲಿ ಕಡಿಮೆ ಪ್ರಾಮುಖ್ಯತೆ: ಯೋಗ್ಯತೆ ಬಗ್ಗೆ ಸಾರಾ ಅಲಿ ಖಾನ್ ಮಾತು

  |

  ಸಿನಿಮಾಗಳು ಮೊದಲಿನಿಂದಲೂ ಪುರುಷ ಪ್ರಧಾನವೇ. ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವವರು ಸೇರಿದಂತೆ, ಸಿನಿಮಾಗಳ ಕತೆಗಳು ಸಹ ಪುರುಷ ಪ್ರಧಾನವಾಗಿಯೇ ಇರುತ್ತವೆ.

  ಗಂಡಸರದ್ದೇ ಮೇಲುಗೈ ಇರುವ ಸಿನಿಮಾ ರಂಗದಲ್ಲಿ ಮಹಿಳೆಯರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು, ದೊಡ್ಡ ಎತ್ತರಕ್ಕೆ ಏರಲು ಪ್ರಯತ್ನಗಳನ್ನು ಪಡುತ್ತಲೇ ಇದ್ದಾರೆ. ಮುಂದೆಯೂ ಇದು ಹೀಗೆಯೇ ಸಾಗುತ್ತದೆಯೋ ಏನೋ?

  ಆದರೆ ಕೆಲವು ನಟಿಯರು 'ನಮಗೆ ದಕ್ಕಿದ್ದಿಷ್ಟೆ' ಇಷ್ಟಕ್ಕೆ ತೃಪ್ತರಾಗಿದ್ದುಬಿಡುತ್ತೇವೆ ಎಂಬ ಭಾವದಲ್ಲಿದ್ದಾರೆ. ಅದರಲ್ಲಿ ಒಬ್ಬರು ಸೈಫ್ ಅಲಿ ಖಾನ್ ಮಗಳು ನಟಿ ಸಾರಾ ಅಲಿ ಖಾನ್.

  ಸಾರಾ ಅಲಿ ಖಾನ್ ಈ ವರೆಗೆ ಕೇವಲ 'ಬಬ್ಲಿ' ಹುಡುಗಿ ಮಾದರಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿಯಂತೂ ಅವರ ಪಾತ್ರ ಕೇವಲ ಹಾಡು-ಕುಣಿತ, ರೊಮಾನ್ಸ್‌ಗೆ ಮಾತ್ರವೇ ಸೀಮಿತವಾಗಿದೆ.

  ಕೆಲವು ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದೇ ಇರುವ ಬಗ್ಗೆ ಮಾತನಾಡಿರುವ ಸಾರಾ ಅಲಿ ಖಾನ್, 'ಅವರವರ ಯೋಗ್ಯತೆಗೆ ತಕ್ಕಂತೆ ಪಾತ್ರಗಳು ಸಿಗುತ್ತವೆ' ಎಂದಿದ್ದಾರೆ.

  'ರಣ್ವೀರ್ ಸಿಂಗ್, ವರುಣ್ ಧವನ್ ಅಂಥಹಾ ಸ್ಟಾರ್‌ಗಳೊಟ್ಟಿಗೆ ಸಿನಿಮಾ ಮಾಡುವಾಗ ನಮ್ಮ ಯೋಗ್ಯತೆ ನಮಗೆ ಗೊತ್ತಿರಬೇಕು, ನಮ್ಮ ಯೋಗ್ಯತೆಗೆ ತಕ್ಕಂತೆ ನಮ್ಮ ಪಾತ್ರಗಳಿಗೆ ಪ್ರಾಮುಖ್ಯತೆ ಇರುತ್ತದೆ' ಎಂದಿದ್ದಾರೆ ಸಾರಾ. ಆ ಮೂಲಕ ತಮಗೆ 'ಯೋಗ್ಯತೆ' ಇಲ್ಲವೆಂದು ಅವರೇ ಹೇಳಿಕೊಂಡಿದ್ದಾರೆ.

  ಶುಕ್ರವಾರ ಯಾವತ್ತು ಬರತ್ತೆ ಅಂತ ಕಾಯ್ತಾ ಇದ್ವಿ ಎಂದ ಸಾ ರಾ ಗೋವಿಂದ್ | Filmibeat Kannada

  ಬಾಲಿವುಡ್‌ನ ಪುರುಷ ಪ್ರಧಾನ ಸಿನಿರಂಗದಲ್ಲಿ ದೀಪಿಕಾ ಪಡುಕೋಣೆ, ತಾಪ್ಸಿ ಪನ್ನು, ಕಂಗನಾ ರಣೌತ್ ಅಂತಹಾ ಕೆಲವು ನಟಿಯರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಈ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bollywood actress Sara Ali Khan talks about less importance role in some movies. She said 'i am not in a position to ask importance'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X