ಧುರಂಧರ್‌ನ ಮನದನ್ನೆಯ ಬೋಲ್ಡ್ ಅವತಾರಕ್ಕೆ ಸೋಷಿಯಲ್ ಮೀಡಿಯಾ ಕ್ಲೀನ್ ಬೋಲ್ಡ್
ಬಣ್ಣದ ಲೋಕದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಬದಲಾವಣೆ ಎನ್ನುವುದು ಗಾಳಿಗಿಂತ ವೇಗವಾಗಿ ಇರುತ್ತದೆ. ಮೊನ್ನೆ ಮೊನ್ನೆಯಷ್ಟೇ ತೆರೆಯ ಮೇಲೆ ಮುಗ್ಧವಾಗಿ ಕಂಡ ಮುಖಗಳು ಇಂದು ಗ್ಲಾಮರ್ ಲೋಕದ ರಾಣಿಯರಂತೆ ಕಂಗೊಳಿಸುತ್ತಿದ್ದಾರೆ. ಪ್ರೇಕ್ಷಕರು ಕೂಡ ಇವರ ಬೆಳವಣಿಗೆಯನ್ನು ಅಷ್ಟೇ ಕುತೂಹಲದಿಂದ ಗಮನಿಸುತ್ತಿರುತ್ತಾರೆ. ಸಿನಿಮಾ ರಂಗ ಅಂದ್ರೆ ಹಾಗೆ, ಇಲ್ಲಿ ಪ್ರತಿಭೆಯ ಜೊತೆಗೆ ಅದೃಷ್ಟವೂ ಇರಬೇಕು. ಸಣ್ಣ...
ವಯಸ್ಸಿನಲ್ಲೇ ಕ್ಯಾಮೆರಾ ಮುಂದೆ ನಿಂತು ಸೈ ಎನಿಸಿಕೊಂಡವರು ತುಂಬಾ ಕಡಿಮೆ. ಅಂತಹ ಅಪರೂಪದ ಕಲಾವಿದರು ಬೆಳೆದು ದೊಡ್ಡವರಾದಾಗ ಅವರನ್ನ ಗುರುತಿಸುವುದೇ ಒಂದು ದೊಡ್ಡ ಸಾಹಸವಾಗುತ್ತದೆ. ಈಗ ಅಂತಹದ್ದೇ ಒಂದು ವಿಷಯ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಈ ಮಾಯಾನಗರಿಯಲ್ಲಿ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಈಗ ವೈರಲ್ ಆಗುತ್ತಿರುವ ಫೋಟೋಗಳೇ ಸಾಕ್ಷಿ. ಯಾರು ಆ ಸುಂದರಿ? ಅಷ್ಟಕ್ಕೂ ಅವರ ಫೋಟೋಗಳು ಇಷ್ಟೊಂದು ಸೌಂಡ್ ಮಾಡುತ್ತಿರೋದು ಯಾಕೆ? ಇಡೀ ಬಾಲಿವುಡ್ ಇಂದು ಆಕೆಯ ಬಗ್ಗೆಯೇ ಮಾತನಾಡುತ್ತಿದೆ. ಪ್ರೇಕ್ಷಕರು ಮಾತ್ರವಲ್ಲ, ದೊಡ್ಡ ದೊಡ್ಡ ಸ್ಟಾರ್ ನಟರೇ ಆಕೆಯ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. ಆಕೆಯ ಹೊಸ ಫೋಟೋಶೂಟ್ ಹಿಂದೆ ಇರೋ ಅಸಲಿ ಕಥೆಯೇನು ಗೊತ್ತಾ?
ರಣವೀರ್ ಸಿಂಗ್ ಸಿನಿಮಾದಲ್ಲಿ ಸಾರಾ ಅರ್ಜುನ್ ಮಿಂಚಿಂಗ್...
ನಾವು ಹೇಳ್ತಿರೋದು ಬೇರೆ ಯಾರ ಬಗ್ಗೆಯೂ ಅಲ್ಲ, ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ''ಧುರಂಧರ್'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿರುವ ನಟಿ ಸಾರಾ ಅರ್ಜುನ್ ಅವರ ಬಗ್ಗೆ. 20 ವರ್ಷದ ಈ ಚೆಲುವೆ ಈಗ ಅಕ್ಷರಶಃ ಇಂಟರ್‌ನೆಟ್‌ನಲ್ಲಿ ಕಿಚ್ಚು ಹಚ್ಚಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಬೋಲ್ಡ್ ಫೋಟೋಗಳು ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿವೆ.
ಸಾರಾ ಅರ್ಜುನ್ ಈಗ ಕೇವಲ ಬಾಲನಟಿಯಾಗಿ ಉಳಿದಿಲ್ಲ. ಅವರು ಈಗ ಸೌಂದರ್ಯದ ಖನಿಯಾಗಿ ಬೆಳೆದು ನಿಂತಿದ್ದಾರೆ. ಇತ್ತೀಚೆಗೆ ಅವರು ಶೇರ್ ಮಾಡಿರುವ ಫೋಟೋಶೂಟ್ ನೋಡಿದವರು "ಇವರೇನಾ ಆ ಪುಟ್ಟ ಹುಡುಗಿ?" ಎಂದು ಕಣ್ಣು ಅರಳಿಸುತ್ತಿದ್ದಾರೆ. ಕಿಕ್ಕೇರಿಸುವ ನೋಟ ಮತ್ತು ಮಾಡರ್ನ್ ಸ್ಟೈಲ್ ಮೂಲಕ ಅವರು ಪಡ್ಡೆಹೈಕಳ ಮನ ಗೆದ್ದಿದ್ದಾರೆ.
ಬಾಲನಟಿಯಿಂದ ಗ್ಲಾಮರ್ ಕ್ವೀನ್ ವರೆಗೆ ಸಾರಾ ಪಯಣ
ಸಾರಾ ಅರ್ಜುನ್ ಚಿತ್ರರಂಗಕ್ಕೆ ಹೊಸಬರೇನಲ್ಲ. 'ಜೈ ಹೋ' ಮತ್ತು 'ಸೈವಂ' ನಂತಹ ಸಿನಿಮಾಗಳಲ್ಲಿ ಇವರು ಅದ್ಭುತವಾಗಿ ನಟಿಸಿದ್ದರು. ಅದರಲ್ಲೂ ಐಶ್ವರ್ಯ ರೈ ನಟನೆಯ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ನಂದಿನಿ ಪಾತ್ರದ ಬಾಲ್ಯದ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದರು. ಆಗ ತುಂಬಾನೇ ಮುಗ್ಧವಾಗಿ ಕಂಡಿದ್ದ ಸಾರಾ, ಈಗ ಫುಲ್ ಗ್ಲಾಮರಸ್ ಆಗಿ ಬದಲಾಗಿದ್ದಾರೆ.

ಸದ್ಯ ಇವರು ರಣವೀರ್ ಸಿಂಗ್ ಅಭಿನಯದ ದೊಡ್ಡ ಬಜೆಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ಸಂಜಯ್ ದತ್ ಮತ್ತು ಮಾಧವನ್, ಅಕ್ಷಯ್ ಖನ್ನಾ ಅಂತಹ ಘಟಾನುಘಟಿ ಕಲಾವಿದರ ದಂಡೇ ಇದೆ. ಇಂತಹ ದೊಡ್ಡ ಸ್ಟಾರ್ ಸಿನಿಮಾದಲ್ಲಿ ಸಾರಾ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಡ್ಡೆಹೈಕಳ ನಿದ್ದೆಗೆಡಿಸಿದ ಸಾರಾ ಹೊಸ ಅವತಾರ
ಸಾರಾ ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರಗಳು ಈಗ ಟ್ರೆಂಡಿಂಗ್‌ನಲ್ಲಿವೆ. ವೆಸ್ಟರ್ನ್ ಡ್ರೆಸ್ನಲ್ಲಿ ಸಾರಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ರೂಪಾಂತರ ನೋಡಿ ಬಾಲಿವುಡ್ ಮಂದಿ ದಂಗಾಗಿದ್ದಾರೆ. ಮಾಡೆಲಿಂಗ್ ಲೋಕದಲ್ಲೂ ಇವರ ಬೇಡಿಕೆ ಈಗ ಹೆಚ್ಚಾಗುತ್ತಿದೆ.
ಸಾರಾ ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ, ನಟನೆಗೂ ಹೆಸರುವಾಸಿ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಬೇಕಿರುವ ಬ್ರೇಕ್‌ನ್ನು ''ಧುರಂಧರ್'' ಸಿನಿಮಾ ನೀಡಿದೆ. ಸದ್ಯಕ್ಕಂತೂ ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.


Click it and Unblock the Notifications











