For Quick Alerts
  ALLOW NOTIFICATIONS  
  For Daily Alerts

  ನಿರ್ಮಾಣವಾಗುತ್ತಿದೆ 22 ವರ್ಷ ಹಿಂದಿನ ಸಿನಿಮಾದ ಮುಂದಿನ ಭಾಗ!

  |

  ಬಾಹುಬಲಿ ಬಿಡುಗಡೆ ಆದ ಎರಡು ವರ್ಷದೊಳಗೆ ಬಾಹುಬಲಿ 2 ಬಿಡುಗಡೆ ಆಯಿತು. ಕೆಜಿಎಫ್ ಬಿಡುಗಡೆ ಆದ ಮೂರು ವರ್ಷದಲ್ಲಿ ಕೆಜಿಎಫ್ 2 ಬಿಡುಗಡೆ ಆಗುತ್ತಿದೆ. ಹೀಗೆ ಒಂದು ಸಿನಿಮಾದ ಮುಂದುವರೆದ ಭಾಗ ಹೆಚ್ಚೆಂದರೆ ಮೂರು ವರ್ಷದ ಒಳಗೆ ಬಿಡುಗಡೆ ಆಗುವುದು ಸಾಮಾನ್ಯ.

  ಆದರೆ ಬಾಲಿವುಡ್‌ನ ನಿರ್ದೇಶಕರೊಬ್ಬರು, 22 ವರ್ಷ ಹಳೆಯ ಸಿನಿಮಾದ ಮುಂದುವರೆದ ಭಾಗವನ್ನು ಈಗ ನಿರ್ದೇಶಿಸಲು ತಯಾರಿ ನಡೆಸಿದ್ದಾರೆ.

  22 ವರ್ಷದ ಹಿಂದೆ 1999 ರಲ್ಲಿ ಬಿಡುಗಡೆ ಆಗಿ ಭಾರಿ ಹೆಸರು ಗಳಿಸಿದ 'ಸರ್ಫರೋಶ್' ಸಿನಿಮಾದ ಮುಂದುವರೆದ ಭಾಗ ನಿರ್ದೇಶಿಸಲಿದ್ದಾರೆ ನಿರ್ದೇಶಕ ಜಾನ್ ಮ್ಯಾಥ್ಯೂ ಮತ್ತನ್. 22 ವರ್ಷದ ಹಿಂದೆ ಇವರೇ ಸರ್ಫರೋಶ್ ಸಿನಿಮಾ ನಿರ್ದೇಶಿಸಿದ್ದರು.

  ಅಮೀರ್ ಖಾನ್, ಸೊನಾಲಿ ಬೇಂದ್ರೆ, ನಾಸಿರುದ್ಧೀನ್ ಶಾ ನಟಿಸಿದ್ದ ಈ ಸಿನಿಮಾ ಭಾರಿ ಹಿಟ್ ಆಗಿತ್ತು. ಅಷ್ಟು ಮಾತ್ರವೇ ಅಲ್ಲದೆ ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿತ್ತು. ಇಂದಿಗೂ ಈ ಸಿನಿಮಾವನ್ನು ನೆನಪಿಸಿಕೊಳ್ಳುವವರಿದ್ದಾರೆ.

  'ಸರ್ಫರೋಶ್ 2' ನಿರ್ದೇಶಿಸಲಿದ್ದಾರೆ ಮ್ಯಾಥ್ಯು

  'ಸರ್ಫರೋಶ್ 2' ನಿರ್ದೇಶಿಸಲಿದ್ದಾರೆ ಮ್ಯಾಥ್ಯು

  ಉಗ್ರಗಾಮಿ, ಪೊಲೀಸ್, ಪ್ರೀತಿ, ಸಂಗೀತ ಇತರೆ ವಿಷಯಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದ್ದ ಈ ಸಿನಿಮಾದ ಮುಂದುವರೆದ ಭಾಗವನ್ನು 'ಸರ್ಫರೋಶ್ 2' ಹೆಸರಿನಲ್ಲಿ ನಿರ್ದೇಶಿಸುತ್ತಾರಂತೆ ಮ್ಯಾಥ್ಯು.

  'ಸರ್ಫರೋಶ್ 2' ಸಿನಿಮಾದಲ್ಲಿ ಜಾನ್ ಅಬ್ರಹಾಂ ನಟಿಸಲಿದ್ದರು

  'ಸರ್ಫರೋಶ್ 2' ಸಿನಿಮಾದಲ್ಲಿ ಜಾನ್ ಅಬ್ರಹಾಂ ನಟಿಸಲಿದ್ದರು

  'ಸರ್ಫರೋಶ್ 2' ಸಿನಿಮಾದಲ್ಲಿ ಜಾನ್ ಅಬ್ರಹಾಂ ನಟಿಸಲಿದ್ದಾರೆ. ಸಿನಿಮಾವನ್ನು ನಿರ್ಮಾಣ ಸಹ ಅವರೇ ಮಾಡುತ್ತಾರೆ ಎನ್ನುವ ಸುದ್ದಿಗಳು 2018 ರಲ್ಲಿ ಹರಿದಾಡಿತ್ತು. ಆದರೆ ಆ ನಂತರ ನಿರ್ದೇಶಕ ಮ್ಯಾಥ್ಯು ಆ ಪ್ರಾಜೆಕ್ಟ್‌ನಿಂದ ಹೊರಬಂದರು.

  ಸಿಆರ್‌ಪಿಎಫ್ ಯೋಧರಿಗೆ ಸಿನಿಮಾ ಅರ್ಪಣೆ

  ಸಿಆರ್‌ಪಿಎಫ್ ಯೋಧರಿಗೆ ಸಿನಿಮಾ ಅರ್ಪಣೆ

  ಆದರೆ ಗೋವಾ ಸಿನಿಮಾ ಉತ್ಸವದಲ್ಲಿ ಈ ಬಗ್ಗೆ ಮಾತನಾಡಿರುವ ಮ್ಯಾಥ್ಯು, 'ಸರ್ಫರೋಶ್ 2 ಸಿನಿಮಾದ ಚಿತ್ರಕತೆಯನ್ನು ಆರು ಬಾರಿ ತಿದ್ದಿದ್ದೇನೆ. ಆ ಸಿನಿಮಾವನ್ನು ನಾನು ಸಿಆರ್‌ಪಿಎಫ್‌ ಯೋಧರಿಗೆ ಅರ್ಪಿಸಲಿದ್ದೇನೆ' ಎಂದಿದ್ದಾರೆ ಮ್ಯಾಥ್ಯು.

  ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada
  ಆಂತರಿಕ ಭದ್ರತೆ ಬಗ್ಗೆ ಸರ್ಫರೋಶ್ 2 ಸಿನಿಮಾ

  ಆಂತರಿಕ ಭದ್ರತೆ ಬಗ್ಗೆ ಸರ್ಫರೋಶ್ 2 ಸಿನಿಮಾ

  1999 ರಲ್ಲಿ ಬಿಡುಗಡೆ ಆಗಿದ್ದ 'ಸರ್ಫರೋಶ್' ಸಿನಿಮಾವು ಉಗ್ರಗಾಮಿಗಳ ಕುರಿತಾಗಿ ಇತ್ತು. ಮೆಡಿಕಲ್ ವಿದ್ಯಾರ್ಥಿಯೊಬ್ಬ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿ ಪೊಲೀಸ್ ನೌಕರಿಗೆ ಸೇರಿ ಹೇಗೆ ಉಗ್ರಗಾಮಿಗಳ ವಿರುದ್ಧ ಹೋರಾಡುತ್ತಾನೆ ಎಂಬುದು ಕತೆಯಾಗಿತ್ತು. ಹೊಸ ಸರ್ಫರೋಶ್ 2 ಸಿನಿಮಾ ಆಂತರಿಕ ಭದ್ರತೆ ಕುರಿತಾಗಿ ಇರುತ್ತದೆ ಎಂದಿದ್ದಾರೆ ನಿರ್ದೇಶಕ.

  English summary
  Sarfarosh movie sequel to be made by director Matthew Matthan who directed Sarfarosh movie on 1999.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X