ಶ್ರೀದೇವಿ ಪುತ್ರಿ ಮುಂದೆ ಬೇಡಿಕೆಯಿಟ್ಟ ಲೆಜೆಂಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ಪುತ್ರಿ

ಬಾಲಿವುಡ್ ಇಂಡಸ್ಟ್ರಿ ಕಂಡ ದಿಗ್ಗಜ ನೃತ್ಯ ಸಂಯೋಜಕಿ ಸರೋಜ್ ಖಾನ್ ಕಳೆದ ಜುಲೈ ತಿಂಗಳಲ್ಲಿ ನಿಧನರಾಗಿದ್ದರು. ಜುಲೈ 22 ರಂದು ಸರೋಜ್ ಖಾನ್ ಕೊನೆಯುಸಿರೆಳೆದರು. ಸರೋಜ್ ಖಾನ್ ಅವರ ಅಗಲಿಕೆ ಬಗ್ಗೆ ನೋವು ವ್ಯಕ್ತಪಡಿಸಿದ್ದ ನಿರ್ದೇಶಕ ರೆಮೋ ಡಿಸೋಜಾ ಅವರ ಬಯೋಪಿಕ್ ಕುರಿತು ಸಹ ಮಾತನಾಡಿದ್ದರು.

ಒಂದು ವೇಳೆ ನನ್ನ ಬಯೋಪಿಕ್ ಮಾಡುವುದಾರೇ ಅದನ್ನು ನೀನೇ ಮಾಡಬೇಕು ಎಂದು ಸರೋಜ್ ಖಾನ್ ಹೇಳಿದ್ದರು ಎಂಬ ವಿಚಾರವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ರೆಮೋ ಡಿಸೋಜಾ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಸರೋಜ್ ಖಾನ್ ಪುತ್ರಿ ಸುಕೈನಾ ಪ್ರತಿಕ್ರಿಯಿಸಿದ್ದು, ಶ್ರೀದೇವಿ ಪುತ್ರಿ ಮುಂದೆ ವಿಶೇಷವಾದ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಏನದು? ಮುಂದೆ ಓದಿ...

ಶ್ರೀದೇವಿ ಪಾತ್ರ ಜಾಹ್ನವಿ ಮಾಡಬೇಕು

ಶ್ರೀದೇವಿ ಪಾತ್ರ ಜಾಹ್ನವಿ ಮಾಡಬೇಕು

ಸರೋಜ್ ಖಾನ್ ಬಯೋಫಿಕ್ ಕುರಿತು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸುಕೈನಾ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಅಮ್ಮನ ಬಯೋಪಿಕ್ ಮಾಡುವುದಾರೇ ಅದರಲ್ಲಿ ಶ್ರೀದೇವಿ ಪಾತ್ರವನ್ನು ಅವರ ಮಗಳು ಜಾಹ್ನವಿ ಕಪೂರ್ ಮಾಡಬೇಕು'' ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶ್ರೀದೇವಿ ಪಾತ್ರಕ್ಕೆ ಜಾಹ್ನವಿ ಸೂಕ್ತ ಆಯ್ಕೆ ಎಂದಿದ್ದಾರೆ.

ಮಾಧುರಿ ಮಾಡಬೇಕು

ಮಾಧುರಿ ಮಾಡಬೇಕು

''ಸರೋಜ್ ಖಾನ್ ಬಯೋಪಿಕ್ ಮಾಡಿದ್ರೆ, ಅದರಲ್ಲಿ ಮಾಧುರಿ ನಟಿಸಲ್ಲ ಅಂದ್ರೆ ನಿಜಕ್ಕೂ ನನಗೆ ನಿರಾಸೆಯಾಗುತ್ತದೆ'' ಎಂದು ಸುಕೈನಾ ಹೇಳಿದ್ದಾರೆ. ''ನನ್ನ ತಾಯಿ ತಮ್ಮ ವೃತ್ತಿ ಜೀವನದ ವಿವಿಧ ಹಂತದಲ್ಲಿ ಮೂರ್ನಾಲ್ಕು ನಟಿಯರು ಜೊತೆ ಹೆಚ್ಚು ಕೆಲಸ ಮಾಡಿದ್ದಾರೆ. ಅನನ್ಯ ಪಾಂಡೆ, ಸಾರಾ ಅಲಿ ಖಾನ್, ತಾರಾ ಸುತಾರಿಯಾ ಜೊತೆಯೂ ಇತ್ತೀಚಿಗೆ ಕೆಲಸ ಮಾಡಿದ್ದರು ಎನ್ನುವುದನ್ನು ಮರೆಯುವಂತಿಲ್ಲ'' ಎಂದು ತಿಳಿಸಿದ್ದಾರೆ.

ಸ್ಕ್ರಿಪ್ಟ್ ಬಗ್ಗೆ ಚರ್ಚಿಸಬೇಕು

ಸ್ಕ್ರಿಪ್ಟ್ ಬಗ್ಗೆ ಚರ್ಚಿಸಬೇಕು

''ರೆಮೋ ಡಿಸೋಜಾ ಅವರು ಬಯೋಪಿಕ್ ಮಾಡುವುದಾರೇ ನನ್ನ ಅಭ್ಯಂತರವಿಲ್ಲ. ಆದರೆ, ನಾನು ಅವರ ಮಗಳು ಆಗಿರುವ ಕಾರಣ ನನ್ನ ಅನುಮತಿ ಪಡೆಯಬೇಕು ಹಾಗೂ ಸ್ಕ್ರಿಪ್ಟ್ ನನ್ನ ಜೊತೆ ಹಂಚಿಕೊಳ್ಳಬೇಕು'' ಎಂದು ಹೇಳಿದ್ದಾರೆ.

Recommended Video

Act 1978 ಸಿನಿಮಾ ನೋಡಿ ಮಹತ್ವದ ಆದೇಶ ಹೊರಡಿಸಿದ ಸರ್ಕಾರ | Filmibeat Kannada
ಬೇಗ ಚೇತರಿಸಿಕೊಳ್ಳಲಿ

ಬೇಗ ಚೇತರಿಸಿಕೊಳ್ಳಲಿ

ಅಂದ್ಹಾಗೆ, ನೃತ್ಯ ಸಂಯೋಜಕ, ನಿರ್ದೇಶಕ ರೆಮೋ ಡಿಸೋಜಾಗೆ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆ ಸೇರಿರುವ ರೆಮೋ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ರೆಮೋ ಅವರನ್ನು ಆದಷ್ಟೇ ಬೇಗ ಚೇತರಿಕೆ ಕಾಣಲಿ ಎಂದು ಸುಕೈನಾ ಸಹ ವಿಶ್ ಮಾಡಿದ್ದಾರೆ.

More from Filmibeat

English summary
Late Choreographer Saroj Khan's Daughter sukaina khan wants janhvi kapoor to play sridevi's role in her mom's biopic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X