twitter
    For Quick Alerts
    ALLOW NOTIFICATIONS  
    For Daily Alerts

    KBC ಟ್ಯಾಕ್ಸ್ ವಿವಾದ: ಬಿಗ್ ಬಿ ಕೇಸ್ ರೀ-ಓಪನ್ ಗೆ ಸುಪ್ರೀಂ ಆದೇಶ

    By ಸೋನು ಗೌಡ
    |

    2001-02 ರಲ್ಲಿ ನಡೆದ 'ಕೌನ್ ಬನೇಗಾ ಕರೋಡ್ ಪತಿ' ಎಂಬ ಖ್ಯಾತ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕೋಟ್ಯಾಂತರ ರೂಪಾಯಿಯನ್ನು ತಮ್ಮ ಬಗಲಿಗೆ ಹಾಕಿಕೊಂಡಿರುವ ಬಾಲಿವುಡ್ ಚಿತ್ರರಂಗದ ದಿಗ್ಗಜ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಆದಾಯ ತೆರಿಗೆ ಮರು ಪರಿಶೀಲನೆಗೆ ಸುಪ್ರಿಂ ಕೋರ್ಟ್ ಪೂರ್ಣ ಸಮ್ಮತಿ ನೀಡಿದೆ.

    2001-02 ರಲ್ಲಿ ನಡೆದ 'ಕೌನ್ ಬನೇಗಾ ಕರೋಡ್ ಪತಿ' ಎಂಬ ರಸಪ್ರಶ್ನಾ ರಿಯಾಲಿಟಿ ಶೋ ಕಾರ್ಯಕ್ರಮದಿಂದ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಸುಮಾರು 1.66 ಕೋಟಿ ತೆರಿಗೆ ಕಟ್ಟಬೇಕಾಗಿತ್ತು. ಆದರೆ ತೆರಿಗೆ ಕಟ್ಟದೇ ಅದರಿಂದ ಬಿಗ್ ಬಿ ತಪ್ಪಿಸಿಕೊಂಡಿದ್ದರು.[ಕೆಬಿಸಿ ಬಚ್ಚನ್ ಮೇಲೆ ಕೇಸ್ ಜಡಿಯಲು ಮಹಿಳೆ ಸಿದ್ಧ]

    SC allows IT dept to re-open case against Amitabh over KBC earnings

    ಆ ವೇಳೆ ಬಿಗ್ ಬಿ ಬಚ್ಚನ್ ಅವರ ಆದಾಯ ತೆರಿಗೆ ಮರು ಪರಿಶೀಲನೆ ನಡೆಸಲು ಮುಂದಾಗಿದ್ದ ಕಂದಾಯ ಇಲಾಖೆಗೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದಕ್ಕೆ ಪ್ರತಿಯಾಗಿ ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಐಟಿ ಇಲಾಖೆಗೆ ಕೊನೆಗೂ ಗೆಲುವು ಸಿಕ್ಕಿದೆ.['ಕೆಬಿಸಿ'ಯಲ್ಲಿ ಒಂದು ಕೋಟಿ ಗೆದ್ದ ಕ್ಯಾನ್ಸರ್ ಬಾಧಿತೆ]

    SC allows IT dept to re-open case against Amitabh over KBC earnings

    ಇದೀಗ ಬಿಗ್ ಬಿ ಅವರ ಆದಾಯ ತೆರಿಗೆ ಮರು ಪರಿಶೀಲನೆಗೆ ಮುಂದಾಗಬಹುದು ಎಂದು ಸುಪ್ರೀಂಕೋರ್ಟ್ ಪೂರ್ಣ ಪ್ರಮಾಣದ ಆಜ್ಞೆ ನೀಡಿದ್ದು, ಅಮಿತಾಭ್ ಬಚ್ಚನ್ ಅವರಿಗೆ ಮುಖಭಂಗವಾದಂತಿದೆ.

    English summary
    The Supreme Court allowed the Income Tax (IT) department to re-open the 2001 tax case against actor Amitabh Bachchan over his earnings during the quiz show Kaun Banega Crorepati (KBC).
    Wednesday, May 11, 2016, 16:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X