twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಾವು: ಸಿಬಿಐ ವರದಿ ಬಗ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಕುರಿತು ವರದಿ ನೀಡುವಂತೆ ಸಿಬಿಐಗೆ ನಿರ್ದೇಶನ ಮಾಡಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

    ವಕೀಲ ಪುನೀತ್ ಕೌರ್ ಥಂಡಾ ಎಂಬುವವರು ಸುಪ್ರೀಂಕೋರ್ಟ್‌ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ''ಸುಶಾಂತ್ ಸಾವಿನ ಪ್ರಕರಣದ ತನಿಖೆ ಆರಂಭಿಸಿ ಸುಮಾರು ಐದು ತಿಂಗಳು ಕಳೆದುಹೋಗಿದೆ. ಈ ಪ್ರಕರಣದಲ್ಲಿ ಸಿಬಿಐ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನೆರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಮತ್ತು ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಸಲ್ಲಿಸುವಂತೆ'' ಮನವಿ ಮಾಡಿಕೊಂಡಿದ್ದರು.

    ಡ್ರಗ್ಸ್ ಪ್ರಕರಣ: ಸುಶಾಂತ್ ಸಿಂಗ್ ಆಪ್ತ ಗೆಳೆಯನನ್ನು ವಶಕ್ಕೆ ಪಡೆದ ಎನ್‌ಸಿಬಿಡ್ರಗ್ಸ್ ಪ್ರಕರಣ: ಸುಶಾಂತ್ ಸಿಂಗ್ ಆಪ್ತ ಗೆಳೆಯನನ್ನು ವಶಕ್ಕೆ ಪಡೆದ ಎನ್‌ಸಿಬಿ

    ಬುಧವಾರ ಈ ಅರ್ಜಿ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಇಂತಹ ಅರ್ಜಿಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ, ನೀವು ಬೇಕಾದರೆ ಹೈಕೋರ್ಟ್‌ಗೆ ಹೋಗಿ ಎಂದು ತಿರಸ್ಕರಿಸಿದೆ.

    SC dismisses plea seeking direction to CBI to submit status report about Sushant Death case

    ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿದಸ್ಯ ಪೀಠ, "ನಾವು ಈ ಅರ್ಜಿಯನ್ನು ಪ್ರೋತ್ಸಾಹಿಸಲು ಹೋಗುವುದಿಲ್ಲ, ನೀವು ಹೈಕೋರ್ಟ್‌ಗೆ ಹೋಗಿ" ಎಂದು ಮನವಿಯನ್ನು ವಜಾಗೊಳಿಸಿದೆ.

    ಅಂದ್ಹಾಗೆ, ಆಗಸ್ಟ್ 2020 ರಲ್ಲಿ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ವಿಚಾರಣೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಅದಕ್ಕೂ ಮೊದಲು ಈ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸಿದರು.

    ಸುಶಾಂತ್ ಸಿಂಗ್ ಸಾವಿನ 'ಗುಟ್ಟು' ಬಿಚ್ಚಿಟ್ಟ ಕಂಗನಾ ರಣೌತ್ಸುಶಾಂತ್ ಸಿಂಗ್ ಸಾವಿನ 'ಗುಟ್ಟು' ಬಿಚ್ಚಿಟ್ಟ ಕಂಗನಾ ರಣೌತ್

    Recommended Video

    ಅಭಿಮಾನಿ ಕೇಳಿದ ವರ್ಜಿನ್ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರ ಕೊಟ್ಟ ಶಾನ್ವಿ | Shanvi Srivastava

    ಒಂದು ಹಂತದಲ್ಲಿ ಸಿಬಿಐ ಸಂಸ್ಥೆ ಈ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿದೆ. ಸದ್ಯದಲ್ಲೇ ನ್ಯಾಯಾಲಯಕ್ಕೆ ಈ ವರದಿ ಸಲ್ಲಿಸಿದೆ ಎಂದು ಹೇಳಲಾಯಿತು. ಆದರೆ, ಇದುವರೆಗೂ ಸಿಬಿಐ ಈ ಕುರಿತು ಸ್ಪಷ್ಟನೆ ನೀಡಿಲ್ಲ. ಜುಲೈ 14, 2020ರಂದು ನಟ ಸುಶಾಂತ್ ಮುಂಬೈನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

    English summary
    Sushant Singh Death case: Supreme Court dismisses plea seeking direction to CBI to submit status report.
    Thursday, February 4, 2021, 8:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X