ಧೂಳೆಬ್ಬಿಸುತ್ತಿದೆ ಅಮೀರ್ ಖಾನ್ 'ಸೀಕ್ರೆಟ್ ಸೂಪರ್ ಸ್ಟಾರ್' ಟ್ರೇಲರ್
ಅಮೀರ್ ನಿರ್ಮಾಣದ ಹೊಸ ಸಿನಿಮಾ 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರದ ಟ್ರೇಲರ್ ನಿನ್ನೆ (ಆಗಸ್ಟ್3) ರಿಲೀಸ್ ಆಗಿತ್ತು. ಬಿಡುಗಡೆ ನಂತರ ಯೂಟ್ಯೂಬ್ ನಲ್ಲಿ ನಂ.1 ಟ್ರೆಂಡಿಂಗ್ ನಲ್ಲಿರುವ ಈ ಸಿನಿಮಾ ಟ್ರೇಲರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರದ ಟ್ರೇಲರ್ ಒಂದೇ ದಿನಕ್ಕೆ 5 ಮಿಲಿಯನ್ ಹಿಟ್ಸ್ ಪಡೆದಿದೆ.
'ದಂಗಲ್' ಸಿನಿಮಾದಲ್ಲಿ ಅಮೀರ್ ಖಾನ್ ಅವರ ಪುಟ್ಟ ಮಗಳ ಪಾತ್ರವನ್ನು ನಿರ್ವಹಿಸಿದ್ದ ಝಯಿರಾ ವಾಸಿಮ್ ಇಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಝೈರಾ ವಾಸಿಮ್, 14 ವರ್ಷದ ಇನ್ಸಿಯಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸು ಇಟ್ಟುಕೊಂಡಿರುವ ಸಣ್ಣ ಹುಡುಗಿಯ ಕಥೆ ಇದಾಗಿದೆ.
ತಮ್ಮ ನಿರ್ಮಾಣದಲ್ಲಿ ವಿಭಿನ್ನ ಕಥೆಯ ಸಿನಿಮಾಗಳನ್ನು ಮಾಡುವ ಅಮೀರ್ ಮತ್ತೊಂದು ಅದ್ಭುತ ಕಥೆಯ ಚಿತ್ರ ಮಾಡಿದ್ದಾರೆ. 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರಕ್ಕೆ ಅದ್ವೈತ್ ಚಂದನ್ ನಿರ್ದೇಶನವಿದೆ. ಸದ್ಯ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಅಕ್ಟೋಬರ್ 19ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಸೀಕ್ರೆಟ್ ಸೂಪರ್ ಸ್ಟಾರ್' ಟ್ರೇಲರ್ ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.


Click it and Unblock the Notifications










