ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಖಾನ್ ಹೆಸರು ಕೈಬಿಟ್ಟ ಸೀಮಾ

ಇತ್ತೀಚೆಗಿನ ದಿನಗಳಲ್ಲಿ ವಿಚ್ಛೇದನ ತೆಗೆದುಕೊಳ್ಳುವುದು ಕಾಮನ್ ಆಗಿ ಬಿಟ್ಟಿದೆ. ಅದರಲ್ಲೂ ಜನರಿಗೆ ಮಾದರಿಯಾಗಬೇಕಾದ ಸೆಲೆಬ್ರೆಟಿಗಳೇ ಡಿವೋರ್ಸ್ ಮೊರೆ ಹೋಗುತ್ತಿರುವುದು ಹೆಚ್ಚಾಗಿದೆ. ಅದರಲ್ಲೂ ಬಾಲಿವುಡ್‌ನ ಬಿಗ್ ಸ್ಟಾರ್‌ಗಳೇ ಹೆಚ್ಚಾಗಿ ಡಿವೋರ್ಸ್‌ ತೆಗೆದುಕೊಳ್ಳುತ್ತಿರುವುದು ಅಭಿಮಾನಿಗಳಲ್ಲೂ ಬೇಸರ ತರಿಸಿದೆ.

ಇತ್ತೀಗಷ್ಟೇ ಸಲ್ಮಾನ್ ಖಾನ್ ಫ್ಯಾಮಿಲಿಯಿಂದ ಬೇಸರದ ಸಂಗತಿಯೊಂದು ಹೊರಬಿದ್ದಿತ್ತು. ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಹಾಗೂ ಪತ್ನಿ ಸೀಮಾ ಖಾನ್ ವಿಚ್ಛೇದನ ತೆಗೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಚಾರ ಎಲ್ಲಡೆ ಭಾರೀ ಚರ್ಚೆಗೆ ಒಳಗಾಗಿತ್ತು. ಇದಕ್ಕೆ ಪೂರಕ ಎಂಬಂತೆ ಇಬ್ಬರು ಸಹ ಮುಂಬೈನ ಕೌಟುಂಬಿಕ ಕೋರ್ಟ್‌ನಿಂದ ಬೇರೆ ಬೇರೆಯಾಗಿ ಹೊರ ಬಂದ ಚಿತ್ರಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಮತ್ತೆ ಸಲ್ಮಾನ್ ಕುಟುಂಬದಲ್ಲಿ ಮತ್ತೊಂದು ವಿಚ್ಛೇದನದ ಸುದ್ದಿ ಹರಿದಾಡಿತ್ತು.

ಸೊಹೈಲ್ ಖಾನ್ ಹಾಗೂ ಸೀಮಾ ಖಾನ್‌ ಕಳೆದ ವಾರ ಮುಂಬೈ ಕೋರ್ಟ್‌ಗೆ ಡಿವೋರ್ಸ್‌ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಎಲ್ಲಿಯೋ ಹೇಳಿಕೊಂಡಿಲ್ಲ. ಸದ್ಯ ಸೀಮಾ ಖಾನ್‌ ರವರ ಈಗಿನ ನಡೆ ಎಲ್ಲರಿಗೂ ಈ ಜೋಡಿ ಡಿವೋರ್ಸ್‌ ತೆಗೆದುಕೊಳ್ಳುವುದು ಪಕ್ಕಾ ಎಂಬಂತಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಖಾನ್‌ ಹೆಸರು ತೆಗೆದ ಸೀಮಾ

ಇನ್‌ಸ್ಟಾಗ್ರಾಂನಲ್ಲಿ ಖಾನ್‌ ಹೆಸರು ತೆಗೆದ ಸೀಮಾ

ಕಳೆದ ವಾರ ಸೊಹೈಲ್ ಖಾನ್ ಮತ್ತು ಸೀಮಾ ಖಾನ್ ಡಿವೋರ್ಸ್‌ ಅರ್ಜಿ ಸಲ್ಲಿಸಿರುವುದು ಬಿ ಟೌನ್‌ನಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಇಬ್ಬರು ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ. ಸದ್ಯ ಈಗ ಸೀಮಾ ಖಾನ್‌ ತಮ್ಮ ಹೆಸರಿನ ಮುಂದೆ ಇದ್ದ ಖಾನ್ ಎಂಬ ಹೆಸರನ್ನು ಇನ್‌ಸ್ಟಾಗ್ರಾಂನಲ್ಲಿ ತೆಗೆದು ಹಾಕಿದ್ದಾರೆ. ಬದಲಾಗಿ ಸೀಮಾ ಕಿರಣ್ ಸಜ್ದೇಹ್ ಎಂದು ಬದಲಿಸಿಕೊಂಡಿದ್ದಾರೆ. ಸದ್ಯ ಈ ಬೆಳವಣೆಗೆಯನ್ನೆಲ್ಲಾ ಗಮನಿಸಿದರೆ, ಇಬ್ಬರು ಡಿವೋರ್ಸ್‌ ತೆಗೆದುಕೊಳ್ಳುವುದು ಪಕ್ಕಾ ಆಗಿದೆ. ಇಷ್ಟು ದಿನ ಸೀಮಾ ಖಾನ್ ಎಂಬ ಹೆಸರನ್ನೇ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬಳಕೆಗೆ ಇಟ್ಟಿದ್ದರು. ಆದರೆ, ಈಗ ತಮ್ಮ ಮೂಲ ಹೆಸರಿಗೆ ಮರಳಿದ್ದು, ಸೀಮಾ ಕಿರಣ್ ಸಜ್ದೇಹ್ ಎಂದು ಇಟ್ಟುಕೊಂಡಿರುವುದು ಅಭಿಮಾನಿಗಳಲ್ಲಿ ಅನುಮಾನವನ್ನು ಹೆಚ್ಚಿಸಿದೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸೊಹೈಲ್ ಖಾನ್

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸೊಹೈಲ್ ಖಾನ್

1998 ರಲ್ಲಿ ಸೆಲೆಬ್ರೆಟಿ ವಸ್ತ್ರ ವಿನ್ಯಾಸಕಿ ಸೀಮಾ ಸಚ್‌ದೇವ್ ಜೊತೆ ಸೊಹೈಲ್ ಖಾನ್‌ ಮದುವೆಯಾಗಿದ್ದರು. ಈ ಇಬ್ಬರಿಗೆ ನಿರ್ವಾಣ್ ಖಾನ್ ಹಾಗೂ ಯೋಹಾನ್ ಖಾನ್‌ ಎಂಬ ಮಕ್ಕಳಿದ್ದಾರೆ. ಸೊಹೈಲ್‌ಗೆ ಈಗ 51 ವರ್ಷವಾಗಿದ್ದು, ಸೀಮಾಗೆ 46 ವರ್ಷವಾಗಿದೆ. ಸದ್ಯ ಈ ಇಬ್ಬರು ದಂಪತಿಗಳು 24 ವರ್ಷ ಸಂಸಾರ ಮಾಡಿ ಈಗ ಇದ್ದಕ್ಕಿಂದ್ದಂತೆ ವಿಚ್ಛೇದನ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಇಬ್ಬರ ಈ ದಿಢೀರ್ ನಿರ್ಧಾರಕ್ಕೆ ಕಾರಣ ಇನ್ನು ತಿಳಿದು ಬಂದಿಲ್ಲ. ಸದ್ಯ (ಮೇ 13) ರಂದು ಇಬ್ಬರು ಒಪ್ಪಿಗೆ ಸೂಚಿಸಿ ಮುಂಬೈ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ.

 ಪ್ರೀತಿಸಿ ಮದುವೆಯಾಗಿ ಈಗ ವಿಚ್ಛೇದನದಲ್ಲಿ ಅಂತ್ಯ

ಪ್ರೀತಿಸಿ ಮದುವೆಯಾಗಿ ಈಗ ವಿಚ್ಛೇದನದಲ್ಲಿ ಅಂತ್ಯ

ಸೊಹೈಲ್ ಖಾನ್ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಸೀಮಾರನ್ನು ಭೇಟಿಯಾಗಿದ್ದರು. ಈ ಭೇಟಿ ಭೇಟಿಯಾಗಿರದೇ ಪ್ರೀತಿಯಾಗಿ ತಿರುಗಿತ್ತು. ಆ ಸಮಯದಲ್ಲಿ ಸೀಮಾ ದೆಹಲಿಯಲ್ಲಿ ವಾಸ ಮಾಡುತ್ತಿದ್ದರು. ಅಲ್ಲದೆ ಫ್ಯಾಷನ್‌ ಡಿಸೈನರ್‌ ಆಗಿ ಕೆಲಸ ಮುಂದುವರೆಸಿದ್ದರು. ಹೀಗೆ ಇಬ್ಬರು ಪ್ರೀತಿಯಲ್ಲಿ ಬಿದ್ದ ಬಳಿಕ ಮದುವೆಯ ಪ್ರಸ್ತಾಪವನ್ನು ಸೀಮಾ ತಮ್ಮ ಮನೆಯಲ್ಲಿ ತಿಳಿಸಿದ್ದರು. ಆದರೆ, ಇದಕ್ಕೆ ಸೀಮಾ ಕುಟುಂಬಸ್ಥರು ಒಪ್ಪಿರಲಿಲ್ಲ. ಹೀಗಾಗಿ 1998 ರಲ್ಲಿಇಬ್ಬರು ಓಡಿ ಹೋಗಿ ಆಯಾ ಧರ್ಮದ ಪ್ರಕಾರ, ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದರು. 2000 ದಲ್ಲಿ ಈ ಮುದ್ದಾದ ಜೋಡಿಗೆ ಮೊದಲ ಮಗುವಿನ ಜನನವಾಯಿತು. ಬಳಿಕ ಜೂನ್ 2011 ರಲ್ಲಿ ದಂಪತಿಗಳಿಗೆ ಎರಡನೇ ಮಗ ಯೋಹಾನ್‌ನನ್ನು ಬಾಡಿಗೆ ತಾಯ್ತನದ ಮೂಲಕ ಪಡೆದುಕೊಂಡರು. ಸದ್ಯ ಇಷ್ಟು ಅನ್ಯೂನ್ಯವಾಗಿದ್ದ ಜೋಡಿ ಈಗ ದಿಢೀರ್ ಆಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ತಮ್ಮ 24 ವರ್ಷದ ಸಂಸಾರಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.

 ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಸೀಮಾ

ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಸೀಮಾ

2020 ರಿಂದಲೂ ಸೊಹೈಲ್ ಖಾನ್ ಹಾಗೂ ಸೀಮಾ ಪ್ರತ್ಯೇಕವಾಗಿದ್ದು, ಬೇರೆ ಬೇರೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ 2020 ರಲ್ಲಿ ಬಂದಿದ್ದ 'ದಿ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್' ಎಂಬ ವೆಬ್‌ ಶೋನಲ್ಲಿ ಸೀಮಾ ಇದರ ಬಗ್ಗೆ ಸುಳಿವು ನೀಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೀಮಾ "ಕೆಲವೊಮ್ಮೆ ನಿಮಗೆ ವಯಸ್ಸಾದಾಗ ನಿಮ್ಮ ಸಂಬಂಧಗಳು ವಿಭಿನ್ನ ದಿಕ್ಕುಗಳಿಗೆ ಹೋಗುತ್ತದೆ. ಹಾಗೆಯೇ ನಾನು ಮತ್ತು ಸೊಹೈಲ್ ಸದ್ಯಕ್ಕೆ ವಿವಾಹ ಬಂಧನದಲ್ಲಿಲ್ಲ. ಆದರೆ, ಈಗ ನಮಗೊಂದು ಕುಟುಂಬ ಇದ್ದು, ಇಬ್ಬರು ಮಕ್ಕಳು ಇದ್ದಾರೆ. ದೂರ ಇದ್ದರೂ ಎಲ್ಲರೂ ಖುಷಿಯಾಗಿದ್ದೇವೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಇಂದು ಉತ್ತರವಾಗಿ ಎಲ್ಲರಿಗೂ ಕಾಣಿಸುತ್ತಿದೆ. ಸದ್ಯ ಈ ಇಬ್ಬರೂ ಬೇರೆ ಬೇರೆಯಾಗಿಯೇ ವಾಸ ಮಾಡುತ್ತಿದ್ದಾರೆ.

 2017 ರಲ್ಲಿ ಅರ್ಬಾಜ್, ಆರೋರಾ ವಿಚ್ಛೇದನ

2017 ರಲ್ಲಿ ಅರ್ಬಾಜ್, ಆರೋರಾ ವಿಚ್ಛೇದನ

ಸೊಹೈಲ್ ಖಾನ್ ಅಣ್ಣ ಅರ್ಬಾಜ್ ಖಾನ್‌ ಹಾಗೂ ಮಲೈಕಾ ಆರೋರಾ ಡಿವೋರ್ಸ್‌ ಪಡೆದುಕೊಂಡಿದ್ದಾರೆ. ಸಲ್ಮಾನ್‌ ಖಾನ್ ಫ್ಯಾಮಿಲಿಯಲ್ಲಿ ಇದು ಮೊದಲನೇ ವಿಚ್ಛೇದನ ಪ್ರಕರಣವಾಗಿತ್ತು. 1998 ರಲ್ಲೇ ನಟಿ ಮಲೈಕಾ ಆರೋರಾ ಜೊತೆಗೆ ಅರ್ಬಾಜ್ ಖಾನ್ ಕೂಡ ವಿವಾಹವಾಗಿದ್ದರು. ವಿವಾಹವಾದ ಕೆಲ ವರ್ಷದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ವಿಚ್ಛೇದನ ಪಡೆಯಲು ನಿರ್ಧರಿಸಿದರು. 2017 ರ ಮೇನಲ್ಲಿ ಇಬ್ಬರಿಗೂ ಡಿವೋರ್ಸ್ ಸಿಕ್ಕಿ ದೂರ ದೂರ ಆಗಿದ್ದಾರೆ. ಇವರಿಗೆ 18 ವರ್ಷದ ಅರ್ಹಾನ್ ಎಂಬ ಮಗನಿದ್ದಾನೆ. ಸದ್ಯ ಮಲೈಕಾ ಆರೋರಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ವಿಚ್ಛೇದನ ಪಡೆದು ದೂರ ಆಗಿದ್ದರೂ ಸಹ ಮಗನ ಕಾಳಜಿ ಮಾಡುವುದರಲ್ಲಿ ಇಬ್ಬರು ಯಾವುದೇ ಕೊರತೆ ಮಾಡಿಲ್ಲ.

More from Filmibeat

English summary
Seema Khan Drops Khan From Her Name After Filing For Divorce From Sohail Khan. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X