48ನೇ ವಯಸ್ಸಿನಲ್ಲಿ ಎರಡನೇ ಮದ್ವೆಗೆ ರೆಡಿಯಾದ ಸಲ್ಮಾನ್ ಖಾನ್ ಮಾಜಿ ಅತ್ತಿಗೆ, ಬೇಕಿತ್ತಾ ಇದೆಲ್ಲಾ...!
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಅರ್ಥವೂ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ ಅಂತೆಲ್ಲ ನಾನಾ ವೆರೈಟಿಗಳು ಪ್ರೀತಿಯಲ್ಲಿ ಬಂದಿವೆ.
ಇನ್ನೂ ಬಣ್ಣದ ಪ್ರಪಂಚದಲ್ಲಿ ಸಂಬಂಧ ಬಟ್ಟೆ ಬದಲಿಸಿದಷ್ಟೇ ಸುಲಭ. ಇವತ್ತು ಖುಷಿ ಖುಷಿಯಾಗಿ ಮದುವೆಯಾದರು ಆ ನಂತರ ವಿಚ್ಛೇದನ ಪಡೆದು, ಬೇರೆಯವರ ಜೊತೆ ಓಡಾಡುತ್ತಾರೆ. ಇನ್ನೂ ಕೆಲವರು ಮದುವೆ ವಯಸ್ಸಿಗೆ ಬಂದ ಮಕ್ಕಳು ಇದ್ದರೂ ಕೂಡ ತಾವು ಮತ್ತೊಂದು ಮದುವೆಯಾಗಲು ಹಾತೊರೆಯುತ್ತಾರೆ. ಇದಕ್ಕೆ ಸೊಹೈಲ್ ಖಾನ್ ಪತ್ನಿ ಸೀಮಾ ಸಜ್ದೇಹ್ ಸದ್ಯದ ಉದಾಹರಣೆ.

ಹೌದು, ಸೀಮಾ ಸಜ್ದೇಹ್.. ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್. ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಅವರ ಜೊತೆ 24 ವರ್ಷದ ಹಿಂದೆ ಮದುವೆಯಾಗಿದ್ದ ಸೀಮಾ, ಭರ್ತಿ 20 ವರ್ಷ ಸೊಹೈಲ್ ಜೊತೆ ಸಂಭ್ರಮದ ಕ್ಷಣಗಳನ್ನು ಕಳೆದರು. ಆದರೆ ಅದೇನಾಯ್ತೋ.. 2017ರಿಂದ ಸೊಹೈಲ್ ಅವರಿಂದ ದೂರವಾದ ಸೀಮಾ ಪ್ರತ್ಯೇಕವಾಗಿ ವಾಸ ಮಾಡಲು ಶುರು ಮಾಡಿದ್ದರು. 2022ರಲ್ಲಿ ಅಧಿಕೃತವಾಗಿ ವಿಚ್ಛೇದನವನ್ನು ಪಡೆದರು.
ಇಂಥಾ ಸೀಮಾ ಈಗ ಸೊಹೈಲ್ ಖಾನ್ ಅವರಿಂದ ದೂರವಾದ ನಂತರ ಇನ್ನೊಮ್ಮೆ ಪ್ರೇಮದ ಬಲೆಯಲ್ಲಿ ಸಿಲುಕಿದ್ದಾರೆ. ವಿಕ್ರಂ ಅಹುಜಾ ಜೊತೆ ಸಂಬಂಧದಲ್ಲಿದ್ದಾರೆ. ಖುದ್ದು ಸೀಮಾ ಈ ವಿಚಾರವನ್ನು ನೆಟ್‌ಫ್ಲಿಕ್ಸ್ ನ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್‌ನಲ್ಲಿ ಹೇಳಿದ್ದಾರೆ. ಇನ್ನೂ ವಿಶೇಷ ಅಂದರೆ ವಿಕ್ರಂ ಅಹುಜಾ ಬೇರೆ ಯಾರು ಅಲ್ಲ. ಬದಲಿಗೆ ಸೀಮಾ ಅವರ ಮೊದಲ ಪ್ರೀತಿ. 1998ರಲ್ಲಿ ಸೊಹೈಲ್ ಖಾನ್ ಜೊತೆ ಮದುವೆಯಾಗುವ ಮುನ್ನ ಸೀಮಾ ಸಜ್ದೇಹ್ ಇದೇ ವಿಕ್ರಂ ಅಹುಜಾ ಅವರನ್ನು ಪ್ರೀತಿಸುತ್ತಿದ್ದರು. ವಿಕ್ರಂ ಅಹುಜಾ ಜೊತೆ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದರು.
ಆದರೆ.. ಆ ನಂತರ ಸಂಬಂಧ ಮುರಿದು ಬಿತ್ತು. ಸೊಹೈಲ್ ಖಾನ್ ಜೊತೆ ಸೀಮಾ ಅವರ ಮದುವೆ ನೆರವೇರಿತ್ತು. ಹೀಗಾಗಿಯೇ ಕಳೆದುಹೋದ ಪ್ರೀತಿ ಮತ್ತೆ ಸಿಕ್ಕ ಖುಷಿಯಲ್ಲಿರುವ ಸೀಮಾ ಕಾಲಾಯ ತಸ್ಮೈ ನಮಃ ಎಂದಿದ್ದಾರೆ. ತಮ್ಮ ಸಂಬಂಧದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಇನ್ನೂ ವಿಕ್ರಂ ಜೊತೆ ಸಂಬಂಧದಲ್ಲಿರುವ ವಿಚಾರವನ್ನು ತಮ್ಮ 23 ವರ್ಷದ ಮಗ ನಿರ್ವಾನ್‌ಗೆ ಹೇಳಿರುವುದಾಗಿ ಹೇಳಿರುವ ಸೀಮಾ, ನನ್ನ ಮಗನಿಗೆ ಇದರಿಂದ ಯಾವ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ನಿನ್ನ ಖುಷಿಯೇ ನನ್ನ ಖುಷಿ, ಆಗಿದ್ದನ್ನೆಲ್ಲ ಮರೆತು ಜೀವನದಲ್ಲಿ ನಾವು ಮುಂದುವರೆಯಬೇಕು ಎಂದು ನನ್ನ ಮಗ ನನಗೆ ಹೇಳುತ್ತಾನೆ ಎಂದು ಹೇಳಿದ್ಧಾರೆ.
ಅಂದ್ಹಾಗೇ ವಿಕ್ರ ಅಹುಜಾ ಖ್ಯಾತ ಉದ್ಯಮಿ. ಕೋಟ್ಯಾಧಿಪತಿ ದೇವೇಂದ್ರ ಅಹುಜಾ ಅವರ ಮಗ. ಸೆಂಚುರಿಯನ್ ಬ್ಯಾಂಕ್‌ನಲ್ಲಿ ಕೂಡ ವಿಕ್ರಂ ಅಹುಜಾ ಕೆಲಸ ಮಾಡಿದ್ದಾರೆ. ಉಳಿದಂತೆ ಸದ್ಯಕ್ಕೆ ವಿಕ್ರಂ ಅಹುಜಾ ಜೊತೆ ತಮ್ಮ ಸಂಬಂಧವನ್ನು ಅಧಿಕೃತವಾಗಿ ಸೀಮಾ ಘೋಷಿಸಿದ ಬೆನ್ನಲ್ಲಿ ಸೀಮಾ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.ಸೀಮಾ ಅವರ ಮನದ ಮಾತುಗಳನ್ನೊಳಗೊಂಡ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್ ಕಾರ್ಯಕ್ರಮದ ಪ್ರೋಮೋ ಕುತೂಹಲವನ್ನು ಕೆರಳಿಸಿದೆ. ಈ ಕಾರ್ಯಕ್ರಮದಲ್ಲಿ ಸೀಮಾ ಅವರನ್ನು ಹೊರತು ಪಡಿಸಿ ಅನಿಲ್ ಕಪೂರ್ ಸೋದರ ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್, ನೀಲಂ ಮತ್ತು ಭಾವನಾ ಪಾಂಡೆ ಕೂಡ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











