ಬಾಲಿವುಡ್ ಹಿರಿಯ ನಟಿಯಿಂದ ರಶ್ಮಿಕಾಗೆ ಹೊಗಳಿಕೆಗಳ ಸುರಿಮಳೆ

By ಫಿಲ್ಮಿಬೀಟ್ ಡೆಸ್ಕ್

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಯಾವುದೇ ಸಿನಿಮಾ ಉದ್ಯಮಕ್ಕೆ ಕಾಲಿಟ್ಟರೂ ತಮ್ಮ ನಟನೆಯಿಂದ ಗಮನ ಸೆಳೆಯುತ್ತಿದ್ದಾರೆ. ಇದೇ ಕಾರಣದಿಂದ ಕಡಿಮೆ ಅವಧಿಯಲ್ಲಿಯೇ ಹಲವು ಚಿತ್ರ ರಂಗಗಳಲ್ಲಿ ದೊಡ್ಡ ಸ್ಟಾರ್‌ಗಳೊಟ್ಟಿಗೆ ನಟಿಸುವ ಅವಕಾಶವನ್ನು ರಶ್ಮಿಕಾ ಮಂದಣ್ಣ ಪಡೆದುಕೊಳ್ಳುತ್ತಿದ್ದಾರೆ.

'ಕಿರಿಕ್ ಪಾರ್ಟಿ' ಸಿನಿಮಾದಿಂದ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ, ತೆಲುಗು, ತಮಿಳು ಚಿತ್ರರಂಗದಲ್ಲಿ ಭೇಡಿಕಯಯ ನಟಿ ಆಗಿರುವ ಹೊತ್ತಿನಲ್ಲಿಯೇ ಬಾಲಿವುಡ್‌ನಲ್ಲಿ ಎರಡು ದೊಡ್ಡ ಸಿನಿಮಾಗಳ ಆಫರ್‌ ಗಿಟ್ಟಿಸಿಕೊಂಡು ಅಮಿತಾಬ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಂಡರು.

ರಶ್ಮಿಕಾ ಮಂದಣ್ಣ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾ ಬಿಡುಗಡೆ ಆಗುವ ಮುನ್ನವೇ ರಶ್ಮಿಕಾಗೆ ಧಾರಾಳ ಹೊಗಳಿಕೆಗಳು ದೊರಕಿವೆ. ಅದೂ ಬಾಲಿವುಡ್‌ನ ಹಿರಿಯ ನಟಿಯೊಬ್ಬರು ರಶ್ಮಿಕಾರ ವ್ಯಕ್ತಿತ್ವ, ಅವರ ನಟನೆ ಕುರಿತು ಬಹುವಾಗಿ ಹೊಗಳಿದ್ದಾರೆ. ಈಗಷ್ಟೆ ಬಾಲಿವುಡ್‌ನಲ್ಲಿ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣಗೆ ಹಿರಿಯ ನಟಿಯ ಹೊಗಳಿಕೆ ದೊಡ್ಡ ಸ್ಪೂರ್ತಿಯನ್ನು ತುಂಬಬಹುದಾಗಿದೆ.

ರಶ್ಮಿಕಾ ಮಂದಣ್ಣ ಹಿಂದಿಯ 'ಗುಡ್‌ ಬೈ' ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದಲ್ಲಿ ರಶ್ಮಿಕಾರದ್ದು ಅಮಿತಾಬ್ ಬಚ್ಚನ್ ಮಗಳ ಪಾತ್ರ. ಇದೇ ಸಿನಿಮಾದಲ್ಲಿ ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಸಹ ನಟಿಸಿದ್ದಾರೆ. ನೀನಾ ಗುಪ್ತಾರದ್ದು ರಶ್ಮಿಕಾರ ಅಮ್ಮನ ಪಾತ್ರ. ಕೌಟುಂಬಿಕ ಕತೆ ಹೊಂದಿರುವ 'ಗುಡ್‌ ಬೈ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನೀನಾ, ಅಮಿತಾಬ್ ಬಚ್ಚನ್ ಜೊತೆಗೆ ಹಲವು ದೃಶ್ಯಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೆ ಮುಗಿದಿದ್ದು, ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ನೀನಾ ಗುಪ್ತಾ, ರಶ್ಮಿಕಾರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಮೊದಲ ದಿನವೇ ಆಕೆ ಇಷ್ಟವಾದಳು: ನೀನಾ ಗುಪ್ತಾ

ಮೊದಲ ದಿನವೇ ಆಕೆ ಇಷ್ಟವಾದಳು: ನೀನಾ ಗುಪ್ತಾ

''ಆಕೆ ಸಣ್ಣ ಮಗುವಿದ್ದಂತೆ. ಚಿತ್ರೀಕರಣದ ಮೊದಲ ದಿನದಿಂದಲೇ ನಾನು ಆಕೆಯನ್ನು ಬಹಳ ಇಷ್ಟ ಪಡಲು ಆರಂಭಿಸಿದೆ. ಆಕೆ ನಿಜವಾಗಿಯೂ ನನ್ನ ಮಗಳು ಎನ್ನಿಸಲು ಆರಂಭವಾಯ್ತು. ನನಗಂತೂ ಆಕೆ ಬಹಳ ಇಷ್ಟವಾಗತೊಡಗಿದಳು. ಆಕೆಯ ಜೊತೆಗೆ ಸಮಯ ಕಳೆದಷ್ಟು ಆಕೆಯ ಮೇಲಿನ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತದೆ ಆ ರೀತಿಯ ಹುಡುಗಿ ಆಕೆ. ರಶ್ಮಿಕಾಳದ್ದು ಸ್ವಚ್ಛವಾದ ಹೃದಯ'' ಎಂದಿದ್ದಾರೆ ನೀನಾ ಗುಪ್ತಾ.

ರಶ್ಮಿಕಾ ಮಂದಣ್ಣ ಒಳ್ಳೆಯ ನಟಿ: ನೀನಾ ಗುಪ್ತಾ

ರಶ್ಮಿಕಾ ಮಂದಣ್ಣ ಒಳ್ಳೆಯ ನಟಿ: ನೀನಾ ಗುಪ್ತಾ

''ಆಕೆ ಬಹಳ ಒಳ್ಳೆಯ ನಟಿ. ಬಹಳ ವಿನಯವಂತೆ, ಸರಳ ಜೀವಿ. ನಾವಿಬ್ಬರು ಕೆಲವೇ ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದರೂ ಸಹ. ನಾವಿಬ್ಬರೂ ಬಹಳ ಕಾಲದಿಂದಲ ಪರಿಚಿತರೇನೋ ಎನ್ನುವಷ್ಟು ಹತ್ತಿರವಾದೆವು. ಚಿತ್ರೀಕರಣದ ಸಂದರ್ಭದಲ್ಲಿ ನಾವಿಬ್ಬರೂ ಪರಸ್ಪರ ಬಹಳ ಹತ್ತಿರವಾದೆವು. ಸೆಟ್‌ನಲ್ಲಿ ಆಕೆ ಮತ್ತು ನಾನು ಅದ್ಭುತವಾದ ಗೆಳೆಯರಂತೆ ಇದ್ದೆವು. ಆಕೆಗೆ ದೊಡ್ಡ ಯಶಸ್ಸು ಭವಿಷ್ಯದಲ್ಲಿ ಕಾದಿದೆ'' ಎಂದರು ರಶ್ಮಿಕಾ ಮಂದಣ್ಣ.

ಹಿಂದಿಯ ಎರಡು ಸಿನಿಮಾಗಳಲ್ಲಿ ನಟನೆ

ಹಿಂದಿಯ ಎರಡು ಸಿನಿಮಾಗಳಲ್ಲಿ ನಟನೆ

ರಶ್ಮಿಕಾ ಮಂದಣ್ಣ ತಮ್ಮ ಅಂದ ಮತ್ತು ಅಭಿನಯ ಪ್ರತಿಭೆಗಳಿಂದ ದೇಶದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳ ಬಳಿಕ ಇದೀಗ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್‌ ಬೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಿದ್ಧಾರ್ಥ್ ಮಲ್ಹೊತ್ರಾ ಜೊತೆಗೆ 'ಮಿಷನ್ ಮಜ್ನು' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಎರಡೂ ಸಹ ಭಿನ್ನ ರೀತಿಯ ಕತೆಗಳಾಗಿವೆ. 'ಮಿಷನ್ ಮಜ್ನು' ಆಕ್ಷನ್ ತುಂಬಿದ ಲವ್ ಸ್ಟೋರಿ ಆಗಿದ್ದರೆ 'ಗುಡ್‌ ಬೈ' ಕೌಟುಂಬಿಕ ಸಿನಿಮಾ ಆಗಿದೆ. ಮುಂಬೈಗೆ ವಾಸ್ತವ್ಯ ಬದಲಾಯಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿಯೇ ಸೆಟಲ್ ಆಗುವ ಉಮೇದಿನಲ್ಲಿದ್ದಾರೆ.

ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಬ್ಯುಸಿ

ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಬ್ಯುಸಿ

ಹಿಂದಿ ಸಿನಿಮಾಗಳ ಹೊರತಾಗಿ ರಶ್ಮಿಕಾ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಇತ್ತೀಚೆಗಷ್ಟೆ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾವನ್ನು ಒಪ್ಪಿಕೊಂಡಿದ್ದು ಚಿತ್ರೀಕರಣ ಸಹ ಪ್ರಾರಂಭವಾಗಿದೆ. ತಮಿಳಿನಲ್ಲಿ ನಟ ವಿಜಯ್‌ ಜೊತೆಗೆ ಸಿನಿಮಾ ಮಾಡುವ ಬಗ್ಗೆ ಸುಳಿವು ನೀಡಿರುವ ರಶ್ಮಿಕಾ, ತೆಲುಗಿನ ಮತ್ತೊಂದು ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಯಾರು ಈ ನೀನಾ ಗುಪ್ತಾ?

ಯಾರು ಈ ನೀನಾ ಗುಪ್ತಾ?

ರಶ್ಮಿಕಾರನ್ನು ಹೊಗಳಿರುವ ನೀನಾ ಗುಪ್ತಾ, ಬಾಲಿವುಡ್‌ನ ಹಿರಿಯ ನಟಿ. 1982ರಿಂದ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ನೀನಾ ಗುಪ್ತಾ, ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್‌ ಗೆಳತಿ ಆಗಿದ್ದರು. ಅವರಿಂದ ಮಗುವನ್ನು ಪಡೆದು ಒಬ್ಬರೇ ಮಗಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ ಗಟ್ಟಿಗಿತ್ತಿ ನೀನಾ ಗುಪ್ತಾ. ತಮ್ಮ ಜೀವನದ ಬಗ್ಗೆ 'ಸಚ್ ಕಹೂ ತೊ' ಹೆಸರಿನ ಪುಸ್ತಕವನ್ನು ನೀನಾ ಗುಪ್ತಾ ಬರೆದಿದ್ದಾರೆ. ಈ ಪುಸ್ತಕ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿತ್ತು. ನೀನಾ ಗುಪ್ತಾಗೆ ಎರಡು ರಾಷ್ಟ್ರಪ್ರಶಸ್ತಿಗಳು ಸಹ ದೊರಕಿವೆ.

More from Filmibeat

English summary
Senior actress Neena Gupta praises Rashmika Mandanna. She said Rashmika is like kid and she has clean heart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X