'ಕೆಜಿಎಫ್ -2 'ಚಿತ್ರದಲ್ಲಿ ಸೆನ್ಸೇಷನಲ್ ಸಾಂಗ್ ರೀಮಿಕ್ಸ್ !?

'ಕೆಜಿಎಫ್-2'ಚಿತ್ರಕ್ಕೆ ಇಡೀ ವಿಶ್ವವೇ ಕಾತುರದಿಂದ ಎದುರುನೋಡುತ್ತಿದೆ. ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲಗಳು ಮನೆಮಾಡಿದೆ. 'ಕೆಜಿಎಫ್ -2' ಚಿತ್ರದ ಅಧಿಕೃತ ಟ್ರೈಲರ್ ಯಾವಾಗ ಬಿಡುಗಡೆಯಾಗುತ್ತದೆ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಕಿಂಗ್ ಸ್ಟಾರ್ ಯಶ್ -ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಮತ್ತು ಇತರ ಕಾರ್ಯಗಳು ಭರದಿಂದ ಸಾಗುತ್ತಿದೆ. ಭಾರತೀಯ ಸಿನಿಮಾ ರಂಗದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿರುವ ಈ ಕನ್ನಡ ಸಿನಿಮಾ ಈಗಾಗಲೇ ದೇಶದಾದ್ಯಂತ ಜನರು ಕಾತುರದಿಂದ ನೋಡಲು ಎದುರು ನೋಡುತ್ತಿರುವ ಚಿತ್ರಗಳ ಪೈಕಿ ನಂಬರ್ ಒನ್ ಸ್ಥಾನದಲ್ಲಿದೆ. 'ಕೆಜಿಎಫ್-2' ಗೆ ಸಂಬಂಧಿಸಿದಂತೆ ಅಧಿಕೃತವಾಗಿ ಚಿತ್ರತಂಡ ಯಾವುದೇ ತರದ ಮಾಹಿತಿಗಳನ್ನು ಹೊರ ಬಿಡುತ್ತಿಲ್ಲ. ಆದರೆ ಒಂದಷ್ಟು ವೆಬ್‌ಸೈಟ್‌ಗಳ ಮೂಲಕ ಹಾಗೂ ಇತರ ಮಾಧ್ಯಮಗಳ ಮೂಲಕ ಚಿತ್ರಕ್ಕೆ ಸಂಬಂಧಿಸಿದ ಒಂದಷ್ಟು ವಿಷಯಗಳು ಹೊರಬರುತ್ತಿದೆ. ಈಗ ಇಂತಹದೇ ಒಂದು ಸುದ್ದಿ 'ಕೆಜಿಎಫ್-2' ಗೆ ಸಂಬಂಧಪಟ್ಟಂತೆ ಹೊರಬಿದ್ದಿದೆ.

ಜನರು ಕುತೂಹಲದಿಂದ ಕಾಯುತ್ತಿರುವ ಸಿನಿಮಾ

ಜನರು ಕುತೂಹಲದಿಂದ ಕಾಯುತ್ತಿರುವ ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಪ್ಯಾನ್ ಇಂಡಿಯಾದ ಬಿಡುಗಡೆಯನ್ನು ಏಪ್ರಿಲ್ 14, 2022 ಕ್ಕೆ ಮುಂದೂಡಲಾಗಿದೆ.'ಕೆಜಿಎಫ್ -2' ಪ್ಯಾನ್ ಇಂಡಿಯಾ ಶ್ರೇಣಿಯಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಚಿತ್ರಗಳಲ್ಲಿ ಒಂದಾಗಿದೆ. ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿ ಮೂರು ವರ್ಷಗಳು ಕಳೆದಿವೆ. ಬಾಹುಬಲಿಯಿಂದ ಸ್ಫೂರ್ತಿ ಪಡೆದ ಈ ಚಿತ್ರವು ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಬಿಡುಗಡೆಯಾಯಿತು, ಮತ್ತು ದೊಡ್ಡ ಯಶಸ್ಸನ್ನು ಕಂಡಿತು. ಇದೀಗ 'ಕೆಜಿಎಫ್ - 2' ಗಾಗಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಚಿತ್ರವನ್ನು ದೊಡ್ಡ ಶ್ರೇಣಿಯ ತಯಾರಕರು ನಿರ್ಮಿಸಿದ್ದಾರೆ. ಭಾರತದಲ್ಲಿ ಸಿನಿಪ್ರಿಯರು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಸಿನಿಮಾ ಆಗಿರುವುದರಿಂದ ಕೆಜಿಎಫ್ ಚಿತ್ರಕ್ಕೆ ಸಂಬಂಧಪಟ್ಟ ಯಾವುದೇ ವಿಚಾರ ಅಥವಾ ಮಾಹಿತಿ ಜನರಿಗೆ ಸಹಜವಾಗಿಯೇ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸುತ್ತದೆ. ಈಗ ಅಂತಹದೇ ಕುತೂಹಲವನ್ನು ಹೆಚ್ಚಿಸುವ ಸಂಗತಿಯೊಂದು ಹೊರಬಂದಿದೆ. ಹಾಗಂತ ಈ ಸುದ್ದಿಯನ್ನು ಚಿತ್ರತಂಡ ಪ್ರಕಟಿಸಿಲ್ಲ, ಬದಲಾಗಿ ಖಾಸಗಿ ವೆಬ್‌ಸೈಟ್‌ ಒಂದರಲ್ಲಿ ಇದರ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಕೆಜಿಎಫ್ 2 ಚಿತ್ರಕ್ಕಾಗಿ ಸೆನ್ಸೇಷನಲ್ ಸಾಂಗ್ ರಿಮಿಕ್ಸ್?

ಕೆಜಿಎಫ್ 2 ಚಿತ್ರಕ್ಕಾಗಿ ಸೆನ್ಸೇಷನಲ್ ಸಾಂಗ್ ರಿಮಿಕ್ಸ್?

ಕೆಜಿಎಫ್ ಚಾಪ್ಟರ್ ಒಂದರಲ್ಲಿ 'ಪರೋಪಕಾರಿ' ಚಿತ್ರದಲ್ಲಿ L.R. ಈಶ್ವರಿ ಹಾಡಿದ್ದ ಅತ್ಯಂತ ಜನಪ್ರಿಯ ಗೀತೆಯಾದ 'ಜೋಕೆ ನಾನು ಬಳ್ಳಿಯ ಮಿಂಚು' ರಿಮಿಕ್ಸ್ ಮಾಡಲಾಗಿತ್ತು ಮತ್ತು ಹಾಡಿಗೆ ಮತ್ತು ಯಶ್ ಜೊತೆಗೆ ತಮನ್ನಾ ಜೋಡಿಯಾಗಿ ಕುಣಿದಿದ್ದರು. ಆ ಹಾಡು ಸಾಕಷ್ಟು ಜನಪ್ರಿಯತೆಯನ್ನು ಕೂಡ ತಂದುಕೊಟ್ಟಿತು. ಹಿಂದಿ ವರ್ಷನ್‌ಗೆ ಪ್ರತ್ಯೇಕವಾಗಿ 'ಗಲ್ಲಿ ಗಲ್ಲಿ ಮೆ ಪೀರ್ ತ ಹೈ' ಹಾಡನ್ನು ಬಳಸಲಾಯಿತು. ಹಾಡು ಸಾಕಷ್ಟು ಜನಪ್ರಿಯ ಕೂಡ ಆಗಿದೆ. ಕೆಜಿಎಫ್ ಚಾಪ್ಟರ್ 1 ಹಿಂದಿ ವರ್ಷನ್‌ಗೆ ಈ ಹಾಡು ಸಾಕಷ್ಟು ಪೂರಕವಾಗಿ ಕೆಲಸ ಮಾಡಿತು. ಹೀಗಾಗಿ ಚಿತ್ರತಂಡ ಈ ಬಾರಿ ಕೂಡ ಮತ್ತೊಂದು ಅದ್ದೂರಿಯಾಗಿ ರೀಮಿಕ್ಸ್ ಹಾಡೊಂದನ್ನು ಚಿತ್ರೀಕರಣ ಮಾಡಲು ಮುಂದಾಗಿದ್ದು, ಅದೊಂದು ಅದ್ದೂರಿಯಾದ ರೀಮಿಕ್ಸ್ ಆಗಲಿದೆ ಎಂಬುದು ಕೇಳಿಬರುತ್ತಿರುವ ಸಂಗತಿ.

ಯಾವುದು ಆ ಹಾಡು?

ಯಾವುದು ಆ ಹಾಡು?

1975 ರಲ್ಲಿ ಬಿಡುಗಡೆ ಆದ ಅಮಿತಾಬ್ ಬಚ್ಚನ್ -ಧರ್ಮೇಂದ್ರ- ಹೇಮಮಾಲಿನಿ ಅಭಿನಯದ 'ಶೋಲೆ' ಚಿತ್ರ ನೆನಪಿದೆಯೇ? ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದ ಚಿತ್ರ 'ಶೋಲೆ'. ಶೋಲೆ ಚಿತ್ರದ ಪ್ರತಿ ಡೈಲಾಗು, ಹಾಡುಗಳು ಈಗಲೂ ಕೂಡ ಅಷ್ಟೇ ಜನಪ್ರಿಯವಾಗಿದೆ. 'ಶೋಲೆ ' ಚಿತ್ರದಲ್ಲಿನ ಅತ್ಯಂತ ಜನಪ್ರಿಯ ಗೀತೆಯಾದ 'ಮೆಹಬೂಬಾ... ಮೆಹಬೂಬಾ...'ಖುದ್ದು ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್ ಅವರೇ ಈ ಹಾಡನ್ನು ಹಾಡಿದ್ದು ಹಾಡು ಇಂದಿಗೂ ಕೂಡ ಅಷ್ಟೇ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಆನಂದ್ ಭಕ್ಷಿ ಗೀತರಚನೆಯ ಈ ಹಾಡು ಈಗ 'ಕೆಜಿಎಫ್- 2'ಚಿತ್ರದಲ್ಲಿ ರೀಮಿಕ್ಸ್ ಆಗಲಿದೆ ಅಂತ ಕೇಳಿ ಬರುತ್ತಿದೆ. ಆದರೆ ಇಲ್ಲಿ ಮತ್ತೊಂದು ಕುತೂಹಲದ ಸಂಗತಿಯೆಂದರೆ ಇದು ಹಿಂದಿ ವರ್ಷನ್ ಗೆ ಸಂಬಂಧಿಸಿದಂತೆ ರೀಮಿಕ್ಸ್ ಆಗಬಹುದು. ಆದರೆ ಕನ್ನಡದಲ್ಲಿ ಯಾವ ಜನಪ್ರಿಯ ಹಾಡನ್ನು ರೀಮಿಕ್ಸ್ ಮಾಡಬಹುದು?

ದಾಖಲೆಯ ವೀಕ್ಷಣೆ ಕಂಡಿರುವ ಟೀಸರ್

ದಾಖಲೆಯ ವೀಕ್ಷಣೆ ಕಂಡಿರುವ ಟೀಸರ್

ಬಾಲಿವುಡ್ ನಟ ಸಂಜಯ್ ದತ್ ಅಧೀರ ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ಮತ್ತೊಬ್ಬ ಬಾಲಿವುಡ್ ನಟಿ ರವೀನಾ ಟಂಡನ್ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಟೀಸರ್‌ಗೆ ಬಂದ ವೀಕ್ಷಣೆಗೆ ಕಾರಣ, ಚಿತ್ರದ ಮೇಲಿನ ನಿರೀಕ್ಷೆಗಳು ಭಾರಿಯಾಗಿ ಹೆಚ್ಚಿದೆ. ಕೆಜಿಎಫ್ ಚಾಪ್ಟರ್ 2 ಟೀಸರ್ ಬರೋಬ್ಬರಿ 230 ಮಿಲಿಯನ್ ವೀಕ್ಷಣೆಗಳನ್ನು ದಾಖಲಿಸಿದೆ. ಈ ಟೀಸರ್ ಗೆ ಬರೋಬ್ಬರಿ 9 ಮಿಲಿಯನ್ ಗೂ ಹೆಚ್ಚು ಲೈಕ್ಸ್ ಸಿಕ್ಕಿದೆ ಎಂದರೆ ಪ್ರೇಕ್ಷಕರು ಈ ಚಿತ್ರಕ್ಕಾಗಿ ಎಷ್ಟು ಕಾಯುತ್ತಿದ್ದಾರೆ ಎಂದು ಊಹಿಸಬಹುದು. ಕೆಜಿಎಫ್ ಚಾಪ್ಟರ್ 2ರಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿ. ಪ್ರಕಾಶ್ ರಾಜ್ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸೂರ್ ಸಂಗೀತವಿದೆ. ಏಪ್ರಿಲ್ 14 2022 ರಲ್ಲಿ ಪ್ರಪಂಚದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

More from Filmibeat

English summary
Sensational Song will be Remixed in KGF-2? However team kgf is not officially confirmed anything regarding this news. But some websites are already reporting the matter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X