75ನೇ ವಯಸ್ಸಿನಲ್ಲಿ ನಟ ಜೀತೇಂದ್ರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

By Bharath Kumar

ಬಾಲಿವುಡ್ ನಟ ಜೀತೇಂದ್ರ ತಮ್ಮ ನಟನೆ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡಿರುವ ಸೂಪರ್ ಸ್ಟಾರ್. 75 ವರ್ಷದ ಈ ನಟನ ಮೇಲೆ ಈಗ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

ಮಹಿಳೆಯೊಬ್ಬಳು ನಟ ಜೀತೇಂದ್ರ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹಿಮಾಚಲ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ಸುಮಾರು ಐದು ದಶಕಗಳ ಹಿಂದೆ, ಅಂದ್ರೆ 47ವರ್ಷದ ಹಿಂದೆ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ ಎನ್ನಲಾಗಿದೆ.

1971ರಲ್ಲಿ ಈ ಘಟನೆ ನಡೆದಿದ್ದು, ಆಗ ತನಗೆ 18 ವರ್ಷ, ಜಿತೇಂದ್ರ ಅವರಿಗೆ 28 ವರ್ಷ ವಯಸ್ಸಾಗಿತ್ತು. ಇಬ್ಬರೂ ಹೋಟೆಲ್ ರೂಮನ್ನು ಹಂಚಿಕೊಂಡಿದ್ದಾಗ ಈ ಘಟನೆ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

Sexual assault complaint against Jeetendra

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೀತೇಂದ್ರ ಪರ ವಕೀಲರು, ಇದು ಸುಳ್ಳು ಸುದ್ದಿ. 50 ವರ್ಷದ ಹಿಂದೆ ನಡೆದಿರುವ ಘಟನೆಯನ್ನ ತಿರುಚಿದರೇ ನ್ಯಾಯಾಲಯ ಸಮ್ಮತಿಸುವುದಿಲ್ಲ ಎಂದಿದ್ದಾರೆ.

ಇತ್ತೀಚಿಗೆ ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳ ಬಗೆಗಿನ ಚರ್ಚೆಗಳು ಹೆಚ್ಚಾಗುತ್ತಿದೆ. ಹಾಲಿವುಡ್ ಸಿನಿಮಾ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್‌ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭಿಸಿದ ಅಭಿಯಾನ #MeToo. ಇದೇ ಭಾರತದಲ್ಲಿ #NameAndShame ಅಭಿಯಾನವಾಗಿ ಆರಂಭವಾಗಿದೆ. ಲೈಂಗಿಕ ಶೋಷಣೆ ಮಾಡಿದವರ ಹೆಸರನ್ನು ಉಲ್ಲೇಖಿಸುವುದೇ ಈ #NameAndShame ಅಭಿಯಾನದ ಉದ್ದೇಶ.

More from Filmibeat

English summary
Police in Himachal Pradesh on Wednesday said they had received a complaint against actor Jeetendra over an alleged "sexual assault" almost five decades old.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X