For Quick Alerts
  ALLOW NOTIFICATIONS  
  For Daily Alerts

  ಆನ್‌ಲೈನ್‌ನಲ್ಲಿ ಮೋಸ ಹೋದ ಹಿರಿಯ ನಟಿ ಶಬಾನಾ ಅಜ್ಮಿ

  |

  ಆನ್‌ಲೈನ್‌ನಲ್ಲಿ ಆಲ್ಕೋಹಾಲ್ ವಿತರಣೆ ಮಾಡುವ ಸಂಸ್ಥೆಯಿಂದ ನನಗೆ ಮೋಸ ಆಗಿದೆ ಎಂದು ಬಾಲಿವುಡ್ ಹಿರಿಯ ನಟಿ ಶಬಾನಾ ಅಜ್ಮಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

  'ಲಿವಿಂಗ್ ಲಿಕ್ವಿಡ್ಸ್' ಫ್ಲಾಟ್‌ಫಾರ್ಮ್‌ನಲ್ಲಿ ಆಲ್ಕೋಹಾಲ್ ಬುಕ್ ಮಾಡಿದೆ. ಹಣ ಪಡೆದು, ಆರ್ಡರ್ ಮಾಡಿದ ವಸ್ತುವನ್ನು ತಂದು ಕೊಡಲಿಲ್ಲ ಎಂದು 70 ವರ್ಷದ ನಟಿ ಟ್ವಿಟ್ಟರ್‌ನಲ್ಲಿ ದೂರಿದ್ದಾರೆ.

  'ದಿ ಫ್ಯಾಮಿಲಿ ಮ್ಯಾನ್'ನಲ್ಲಿ ನೆಚ್ಚಿನ ಸ್ಟಾರ್ ಯಾರೆಂದು ಬಹಿರಂಗ ಪಡಿಸಿದ ಮನೋಜ್ ಬಾಜಪೇಯಿ'ದಿ ಫ್ಯಾಮಿಲಿ ಮ್ಯಾನ್'ನಲ್ಲಿ ನೆಚ್ಚಿನ ಸ್ಟಾರ್ ಯಾರೆಂದು ಬಹಿರಂಗ ಪಡಿಸಿದ ಮನೋಜ್ ಬಾಜಪೇಯಿ

  ಈ ಕುರಿತು ಟ್ವೀಟ್ ಮಾಡಿರುವ ನಟಿ ''ಎಚ್ಚರ, ನಾನು ಲಿವಿಂಗ್ ಲಿಕ್ವಿಡ್ಸ್‌ನಿಂದ ಮೋಸ ಹೋಗಿದ್ದೇನೆ. ನಾನು ಮುಂಗಡವಾಗಿ ಹಣ ಪಾವತಿಸಿ ಆರ್ಡರ್ ಮಾಡಿದೆ, ಆದರೆ ನನ್ನ ಆರ್ಡರ್ ಬಂದಿಲ್ಲ, ಫೋನ್ ಮಾಡಿದರು ನನ್ನ ಕರೆ ಸ್ವೀಕರಿಸುತ್ತಿಲ್ಲ'' ಎಂದು ಹೇಳಿಕೊಂಡಿರುವ ನಟಿ ಯಾವ ಖಾತೆಗೆ ಹಣ ಪಾವತಿ ಮಾಡಿದೆ ಎಂದು ಬಹಿರಂಗಪಡಿಸಿದ್ದಾರೆ.

  ಆದರೆ ಎಷ್ಟು ಹಣ ಪಾವತಿಸಿದರು ಎಂದು ಉಲ್ಲೇಖಿಸಿಲ್ಲ. ಶಬಾನಾ ಅಜ್ಮಿ ತಮಗಾದ ವಂಚನೆ ಬಗ್ಗೆ ಮಾಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಆನ್‌ಲೈನ್ ವಂಚನೆಯ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

  ಇದಕ್ಕೂ ಮುಂಚೆ ಬಾಲಿವುಡ್ ಕಲಾವಿದರಾದ ಅಕ್ಷಯ್ ಕುಮಾರ್, ನರ್ಗಿಸ್ ಫಕ್ರಿ, ಕರಣ್ ಸಿಂಗ್ ಗ್ರೋವರ್‌ಗೂ ಸಹ ಆನ್‌ಲೈನ್‌ ವಂಚನೆಗೆ ಒಳಗಾಗಿದ್ದರು.

  ಕರೀನಾ ಕಪೂರ್ ಸೀತೆ ಅಲ್ಲ ಎಂದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ, ಸ್ವರಾ ಭಾಸ್ಕರ್ ಮತ್ತು ದಿವ್ಯಾ ದತ್ತಾ ಅಭಿನಯದ 'ಕ್ವೀರ್ ಲವ್ ಸ್ಟೋರಿ ಶೀರ್ ಕೊರ್ಮಾ' ಚಿತ್ರದಲ್ಲಿ ಶಬಾನಾ ಅಜ್ಮಿ ಕಾಣಿಸಿಕೊಳ್ಳಲಿದ್ದಾರೆ.

  English summary
  Bollywood senior actress Shabana Azmi Accuses Alcohol Delivery Platform of duping her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X