ತನ್ನ ಲವರ್‌ಗೋಸ್ಕರ್ ಚಿಕ್ಕ ಬಾಲಕನನ್ನು ಅಪಹರಿಸಿ ಜೈಲು ಪಾಲಾದ 'ಸಿಂಗಂ ಅಗೇನ್' ಚಿತ್ರದ ನಟಿ...!

ಕಣ್ಣೀರಧಾರೆಯಿಂದ ಕಣ್ಣು ಕೆಂಪಾಗಿ ಕೆಲ ಒಮ್ಮೆ ತಲೆ ಭಾರವಾಗಿ ಮತ್ತೂ ಕೆಲ ಒಮ್ಮೆ ಬದುಕೇ ಸಾಕು ಎನ್ನುವಷ್ಟರ ಮಟ್ಟಿಗೆ ಹಿಂಸೆ ಕೊಡುವ ಮಾಯೆ ಪ್ರೀತಿ. ಇಂಥಾ ಪ್ರೀತಿ ಅನೇಕರ ಬದುಕನ್ನು ಬದಲಿಸಿದೆ. ಇನ್ನೂ ಕೆಲವರ ಬದುಕನ್ನು ಹಾಳುಗೆಡವಿದೆ. ಉದಾಹರಣೆಗೆ ಶಬ್ರೀನ್.

ಹೌದು ಶಬ್ರೀನ್.. ಹಿಂದಿಯ ಜಗದ್ವಿಖ್ಯಾತಿ ಕಾರ್ಯಕ್ರಮ ಕ್ರೈಂ ಪೆಟ್ರೋಲ್ ಕಾರ್ಯಕ್ರಮದಲ್ಲಿ ಅಭಿನಯಿಸಿದ್ದ ನಟಿ. ಇಷ್ಟೇ ಅಲ್ಲ ಈ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ಸಿಂಗಂ ಅಗೇನ್ ಚಿತ್ರದಲ್ಲಿ ಕೂಡ ಪಾತ್ರವೊಂದನ್ನು ಶಬ್ರೀನ್ ನಿರ್ವಹಿಸಿದ್ದಾರೆ. ಇಂಥಾ ಶಬ್ರೀನ್ ಪ್ರೀತಿಯ ಅಮಲನ್ನು ನೆತ್ತಿಗೇರಿಸಿಕೊಂಡು ನಿಜ ಜೀವನದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.

Shabreen from Singham Again arrested by Mumbai police for kidnapping her lover s 3-year-old nephew

ಹೌದು, ಅಸಲಿಗೆ ಬ್ರಿಜೇಶ್ ಸಿಂಗ್ ಎಂಬ ವ್ಯಕ್ತಿಯನ್ನು ಶಬ್ರೀನ್ ಪ್ರೀತಿ ಮಾಡುತ್ತಿದ್ದರು. ಬ್ರಿಜೇಶ್ ಸಿಂಗ್ ಕೂಡ ಶಬ್ರೀನ್ ಮೇಲೆ ಪ್ರಾಣ ಇಟ್ಟಿದ್ದರು. ಆದರೆ ಇವರ ಮದುವೆಗೆ ಧರ್ಮ ತಡೆಗೋಡೆಯಾಗಿತ್ತು. ಬ್ರಿಜೇಶ್ ಸಿಂಗ್ ಮತ್ತು ಶಬ್ರೀನ್ ಪ್ರೇಮ ಕಹಾನಿಗೆ ಮನೆಯಲ್ಲಿ ಅಪಸ್ವರ ಕೇಳಿ ಬಂದಿತ್ತು. ಹೀಗಾಗಿ ರಜಪೂತ್ ಕುಟುಂಬಕ್ಕೆ ಸೇರಿದ ಬ್ರಿಜೇಶ್ ಸಿಂಗ್‌ನ ಹೇಗಾದರೂ ಮದುವೆಯಾಗಬೇಕೆಂದು ತೀರ್ಮಾನ ಮಾಡಿದ್ದ ಮುಸ್ಲಿಂ ಸಮುದಾಯದ ಶಬ್ರೀನ್ ಪ್ಲಾನ್ ರೂಪಿಸಿದ್ದರು. ಬ್ರಿಜೇಶ್‌ನ ಸೋದರಳಿಯನನ್ನು ಅಪಹರಿಸಲು ಶಬ್ರೀನ್ ಸ್ಕೆಚ್ ಹಾಕಿದ್ದರು.

ಅದ್ರಂತೆ ಶನಿವಾರ ಬೆಳ್ಳಿಗ್ಗೆ ಹನ್ನೊಂದು ಘಂಟೆಯ ಸುಮಾರು ಅಕ್ಷರಾಭ್ಯಾಸ ಮಾಡುತ್ತಿದ್ದ ಶಾಲೆಗೆ ತೆರಳಿದ ಶಬ್ರೀನ್ ಬಾಲಕನನ್ನು ತುರ್ತಾಗಿ ಕರೆದುಕೊಂಡು ಹೋಗಬೇಕಿದೆ ಎಂದು ಹೇಳಿದ್ದರು. ಔಷಧಿಯ ನೆಪ ಹೇಳಿ ಬಾಲಕನನ್ನು ಶಬ್ರೀನ್‌ನ ಶಾಲೆಯಿಂದ ಕರೆದುಕೊಂಡು ಹೋದರು. ಇನ್ನೂ ಶಬ್ರೀನ್ ಮುಖ ಚಿರಪರಿಚಿತ ಇದ್ದ ಕಾರಣಕ್ಕೆ ಆ ಪುಟ್ಟ ಪೋರ ದೂಸ್ರಾ ಮಾತನಾಡದೇ ತೆರಳಿದ್ದಾನೆ. ಆದರೆ ಅದ್ಯಾವಾಗ ಮಧ್ಯಾಹ್ನವಾದರೂ ಮಗ ಮನೆಗೆ ಬರಲಿಲ್ಲವೋ ಆಗ ಆತಂಕಗೊಂಡ ಮನೆಯವರು ಸುತ್ತ ಮುತ್ತ ತಮ್ಮ ಮಗನನ್ನು ಹುಡುಕಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Shabreen from Singham Again arrested by Mumbai police for kidnapping her lover s 3-year-old nephew

ದಾಖಲಾದ ದೂರಿನ ಅನ್ವಯ ತನಿಖೆಯನ್ನು ಶುರು ಮಾಡಿದ ಪೊಲೀಸರು ಶಬ್ರೀನ್ ಓದುತ್ತಿದ್ದ ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಹುಡುಕಿದ್ದಾರೆ. ಶಬ್ರೀನ್ ಮತ್ತು ಆ ಬಾಲಕನನ್ನು ಕರೆದೊಯ್ದ ಆಟೋ ಚಾಲಕನನ್ನು ವಶ ಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ.ಬಾಲಕನ ಫೋಟೋ ತೋರಿಸಿದ್ದಾರೆ. ಈ ಸಮಯದಲ್ಲಿ ಶಬ್ರೀನ್ ಅವರನ್ನು ನೈಗಾಂವ್‌ನಲ್ಲಿ ಬಿಟ್ಟಿರುವುದಾಗಿ ಆಟೋ ಡ್ರೈವರ್ ಹೇಳಿದ್ದಾನೆ. ಆಟೋ ಡ್ರೈವರ್ ನೀಡಿದ ಈ ಸುಳಿವಿನಿಂದ ಶಬ್ರೀನ್‌ಗೆ ಪೊಲೀಸರು ಬಲೆ ಬೀಸಿದ್ದಾರೆ. ಮೊಬೈಲ್ ಸ್ಥಳವನ್ನು ಪತ್ತೆ ಹಚ್ಚಿ ಖಾತ್ರಿ ಮಾಡಿಕೊಂಡಿದ್ದಾರೆ. ಆ ನಂತರ ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ ಪೊಲೀಸರು ಸದ್ಯ ಶಬ್ರೀನ್ ಅವರನ್ನು ಕಂಬಿ ಹಿಂದೆ ಕಳುಹಿಸಿದ್ದಾರೆ.ಆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿದ್ದಾರೆ.

ಸದ್ಯಕ್ಕೆ ಶಬ್ರೀನ್ ಅವರನ್ನು ಬಾಂದ್ರಾದಿಂದ ಬಂಧಿಸಿರುವ ಪೊಲೀಸರು ಈ ಪ್ರಕರಣದಲ್ಲಿ ಶಬ್ರೀನ್ ಅವರ ಪ್ರಿಯಕರ ಬ್ರಿಜೇಶ್ ಸಿಂಗ್ ಪಾತ್ರದ ಕುರಿತು ವಿಚಾರಣೆಯನ್ನು ಮಾಡುತ್ತಿದ್ದಾರೆ. ಶಬ್ರೀನ್ ಮತ್ತು ಬ್ರಿಜೇಶ್ ಇಬ್ಬರು ಸೇರಿ ಈ ಅಪಹರಣವನ್ನು ಮಾಡಿದ್ದಾರಾ ಎಂದು ತನಿಖೆಯನ್ನು ಮಾಡುತ್ತಿದ್ದಾರೆ. ಒಟ್ನಲ್ಲಿ ಕ್ರೈಂ ಪೆಟ್ರೋಲ್ ಧಾರಾವಾಹಿಯಲ್ಲಿ ಪೊಲೀಸ್ ಪಾತ್ರವನ್ನು ನಿರ್ವಹಿಸಿ ಸೈ ಅನಿಸಿಕೊಂಡಿದ್ದ ಶಬ್ರೀನ್ ಈಗ ನಿಜ ಜೀವನದಲ್ಲಿ ತಪ್ಪು ಮಾಡಿ ಸಿಕ್ಕಿ ಬಿದ್ದಿದ್ದಾರೆ. ಪ್ರೀತಿಸಿದ ವ್ಯಕ್ತಿಯನ್ನು ಹೇಗಾದರೂ ಮಾಡಿ ಮದುವೆಯಾಗಬೇಕೆಂದು ತಾವೇ ಚಿಕ್ಕ ಮಗುವನ್ನು ಕಿಡ್ನಾಪ್ ಮಾಡಿ ಹಂಬಿ ಹಿಂದೆ ಹೋಗಿದ್ದಾರೆ.

More from Filmibeat

English summary
The Maharashtra police arrested an actress on Sunday for allegedly kidnapping her lover's three-and-a-half-year-old nephew in Palghar district. The actress, identified as Shabreen, has acted in 'Crime Patrol' and 'Singham Again.'"
Read more about: love arrest jail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X