ಶಾರುಖ್-ಗೌರಿ ದಂಪತಿಯ ಫಸ್ಟ್ ನೈಟ್ ಹಾಳುಮಾಡಿದ್ದ ಹೇಮಾ ಮಾಲಿನಿ

ಬಾಲಿವುಡ್ ನ ಸುಂದರ ಜೋಡಿಗಳಲ್ಲಿ ನಟ ಶಾರುಖ್ ಖಾನ್ ಮತ್ತು ಗೌರಿ ದಂಪತಿಯ ಜೋಡಿ ಕೂಡ ಒಂದು. ಶಾರುಖ್ ಅವರದ್ದು ಪ್ರೇಮ ವಿವಾಹ. ಹಿಂದೂ ಧರ್ಮದ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಮನೆಯವರನೆಲ್ಲ ಒಪ್ಪಿಸಿ ಮದುವೆಯಾಗುತ್ತಾರೆ.

Recommended Video

ಈ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡ್ಕೊಳಿ ಕೊರೊನ ವಿರುದ್ಧ ಹೋರಾಡಿ | Puneeth Rajkumar | Aarogya Setu

ಗೌರಿಯನ್ನು ಮದುವೆಯಾದ ಮದುವೆಯಾದ ಸಮಯದಲ್ಲಿ ಶಾರುಖ್ ಇನ್ನು ಬಾಲಿವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಲು ಪರದಾಡುತ್ತಿದ್ದರು. ಶಾರುಖ್ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಮೊದಲೆ ಗೌರಿಯನ್ನು ಕೈಹಿಡಿದ್ದರು. ಅಂದ್ಹಾಗೆ ಈಗ್ಯಾಕೆ ಶಾರುಖ್ ಖಾನ್ ಮದುವೆ ವಿಚಾರ ಅಂತೀರಾ? ಕೊರೊನಾ ಲಾಕ್ ಡೌನ್ ನಡುವೆಯೂ ಶಾರುಖ್ ಮದುವೆ ವಿಚಾರ ಚರ್ಚೆಯಾಗುತ್ತಿದೆ. ಹೌದು, ಫಸ್ಟ್ ನೈಟ್ ಹಾಳಾದ ಬಗ್ಗೆ ಶಾರುಖ್ ಮಾತಾಡಿದ ವಿಚಾರ ಈಗ ವೈರಲ್ ಆಗಿದೆ. ಮುಂದೆ ಓದಿ..

1991ರಲ್ಲಿ ಶಾರುಖ್ ಮತ್ತು ಗೌರಿ ವಿವಾಹ

1991ರಲ್ಲಿ ಶಾರುಖ್ ಮತ್ತು ಗೌರಿ ವಿವಾಹ

ಶಾರುಖ್ ಮತ್ತು ಗೌರಿ ಇಬ್ಬರು 1991ರಲ್ಲಿ ಅಕ್ಟೋಬರ್ 25ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಗೌರಿ ಮೂಲತಹ ಪಂಜಾಬಿಯವರು. ಹಿಂದೂ ಸಂಪ್ರದಾಯದ ಪ್ರಕಾರ ಇಬ್ಬರ ಮದುವೆ ನೆರವೇರಿದೆ. ಇಬ್ಬರದ್ದು 6 ವರ್ಷದ ಪ್ರೀತಿ. ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರು ಪತಿ-ಪತ್ನಿಯರಾಗುತ್ತಾರೆ.

ಹೇಮಾ ಮಾಲಿನಿಯಿಂದ ಹಾಳಾಯ್ತು ಫಸ್ಟ್ ನೈಟ್

ಹೇಮಾ ಮಾಲಿನಿಯಿಂದ ಹಾಳಾಯ್ತು ಫಸ್ಟ್ ನೈಟ್

ನಟ ಶಾರುಖ್ ಮದುವೆ ನಂತರ ಪತ್ನಿ ಜೊತೆ ಮುಂಬೈಗೆ ಬರುತ್ತಾರೆ. ಮುಂಬೈಗೆ ಎಂಟ್ರಿ ಆಗುತ್ತಿದ್ದಂತೆ, ಚಿತ್ರೀಕರಣದಲ್ಲಿ ಭಾಗಿಯಾಗುವಂತೆ ನಿರ್ಮಾಪಕರಿಂದ ಕರೆ ಬರುತ್ತಂತೆ. ಮದುವೆ ಆಗಿ ಫಸ್ಟ್ ನೈಟ್ ಮಾಡಿಕೊಳ್ಳಬೇಕಿದ್ದ ಶಾರುಖ್ ನಿರ್ಮಾಪಕರ ಅಪ್ಪಣೆಯಂತೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ. ಅಂದ್ಹಾಗೆ ಆ ನಿರ್ಮಾಪಕಿ ಮತ್ಯಾರು ಅಲ್ಲ ನಟಿ ಹೇಮಾ ಮಾಲಿನಿ.

ಪತ್ನಿ ಜೊತೆ ರಾತ್ರಿ ಚಿತ್ರೀಕರಣಕ್ಕೆ ತೆರಳಿದ ಶಾರುಖ್

ಪತ್ನಿ ಜೊತೆ ರಾತ್ರಿ ಚಿತ್ರೀಕರಣಕ್ಕೆ ತೆರಳಿದ ಶಾರುಖ್

ಅಂದು ಶಾರುಖ್ ಫಸ್ಟ್ ನೈಟ್. ಆದರೆ ಕಿಂಗ್ ಖಾನ್ ನಿರ್ಮಾಪಕರ ಆಜ್ಞೆಯಂತೆ ರಾತ್ರಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ. ಅಂದು ದಿಲ್ ಆಶ್ನಾ ಹೈ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣಕ್ಕೆ ಪತ್ನಿ ಗೌರಿಯನ್ನು ಕರೆದುಕೊಂಡು ಹೋಗುತ್ತಾರೆ. ಸ್ಟುಡಿಯೋ ತಲುಪಿದ ನಂತರ ಅಲ್ಲಿ ಹೇಮಾ ಮಾಲಿನಿ ಬಿಟ್ಟು ಉಳಿದವರೆಲ್ಲರೂ ಹಾಜರಿದ್ದರು. ಇನ್ನೇನು ಬರುತ್ತಾರೆ, ಕಾಯಬೇಕು ಎಂದು ಸಹಾಯಕ ನಿರ್ದೇಶಕರು ಹೇಳಿದರಂತೆ.

ಮೇಕಪ್ ರೂಮಿನಲ್ಲಿ ಪತ್ನಿ, ಚಿತ್ರೀಕರಣದಲ್ಲಿ ಶಾರುಖ್

ಮೇಕಪ್ ರೂಮಿನಲ್ಲಿ ಪತ್ನಿ, ಚಿತ್ರೀಕರಣದಲ್ಲಿ ಶಾರುಖ್

ಹೇಮಾ ಮಾಲಿನಿಗಾಗಿ ರಾತ್ರಿ 12 ಗಂಟೆವರೆಗೂ ಕಾಯುತ್ತಾರೆ. ಆದರೂ ಹೇಮಾ ಮಾಲಿನಿ ಸೆಟ್ ಗೆ ಬರಲ್ಲ. ನಂತರ ಶಾರುಖ್ ಚಿತ್ರೀಕರಣ ಪ್ರಾರಂಭಿಸುತ್ತಾರೆ. ಪತ್ನಿ ಗೌರಿಯನ್ನು ಮೇಕಪ್ ರೂಮ್ ನಲ್ಲಿ ಬಿಟ್ಟು ಚಿತ್ರೀಕರಣದಲ್ಲಿ ತಲ್ಲೀನರಾಗುತ್ತಾರೆ. ಚಿತ್ರೀಕರಣ ಮುಗಿಸಿ ಮೇಕಪ್ ರೂಮಿಗೆ ಬರುವಾಗ ಬೆಳಗ್ಗೆ 6 ಗಂಟೆ ಆಗಿತ್ತು. ಶಾರುಖ್ ಪತ್ನಿಯನ್ನು ನೋಡಿ ಕಣ್ಣೀರಾಕಲು ಪ್ರಾರಂಭಿಸುತ್ತಾರೆ. ಮಧು ಮಗಳಾಗಿದ್ದ ಗೌರಿ ಅದ್ದೂರಿ ಡ್ರೆಸ್ ನಲ್ಲಿಯೆ ಚಿತ್ರೀಕರಣಕ್ಕೆ ಶಾರುಖ್ ಜೊತೆ ಬಂದಿದ್ದರು. ಅದೆ ಡ್ರೆಸ್ ನಲ್ಲಿ ಖುರ್ಚಿಯ ಮೇಲೆ ಮಲಗಿದ್ದ ಪತ್ನಿ ನೋಡಿ ಶಾರುಖ್ ಕಣ್ಣೀರಾಕುತ್ತಾರೆ. ಅಲ್ಲದೆ ಕೊಳಕಾಗಿದ್ದ ರೂಮಿನಲ್ಲಿ ಸೊಳ್ಳೆಕಾಟ ಕೂಡ ಇತ್ತು. ಅದೆ ರೂಮಿನಲ್ಲಿ ಗೌರಿ ರಾತ್ರಿಯಲ್ಲ ಕಾಲಕಳೆದಿದ್ದರು.

ಕಷ್ಟದ ದಿನಗಳ ಬಗ್ಗೆ ಶಾರುಖ್ ಮಾತು

ಕಷ್ಟದ ದಿನಗಳ ಬಗ್ಗೆ ಶಾರುಖ್ ಮಾತು

ಆ ಸಮಯದಲ್ಲಿ ಶಾರುಖ್ ಅವರ ಬಗ್ಗೆಯೆ ಶೋಚನೀಯ ಭಾವನೆ ಹೊಂದಿದ್ದರು. ಅಂದು ಅವರು ಅಸಹಾಯಕರಾಗಿದ್ದರು. ಆ ಕಷ್ಟದ ದಿನಗಳಲ್ಲಿ ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆ ಸನ್ನಿವೇಶದಲ್ಲಿ ಪತ್ನಿ ಸಹ ಏನು ಮಾತನಾಡಲಿಲ್ಲವಂತೆ. ಸುಮ್ಮನೆ ಇಬ್ಬರು ಮನೆಗೆ ಹಿಂದಿರುಗಿದೆವು. ಎಂದು ಶಾರುಖ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಸಂದರ್ಶನವೀಗ ವೈರಲ್ ಆಗುತ್ತಿದೆ.

More from Filmibeat

English summary
Bollywood Actor Shah RuKh Khan and Gauri first night had ruined by Hema Malini.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X