For Quick Alerts
  ALLOW NOTIFICATIONS  
  For Daily Alerts

  ಶಾರುಖ್ 'ಪಠಾಣ್' ಚಿತ್ರದಲ್ಲಿ ಹೈ ವೋಲ್ಟೇಜ್ ಆಕ್ಷನ್; ಹಾಲಿವುಡ್ ನಿಂದ ಬಂದ ಸ್ಟಂಟ್ ಡೈರೆಕ್ಟರ್

  |

  ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ 3 ವರ್ಷಗಳ ಬಳಿಕ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಸಿನಿಮಾದಿಂದನೇ ದೂರ ಸರಿದಿದ್ದರು. ಇದೀಗ ಪಠಾಣ್ ಸಿನಿಮಾ ಮೂಲಕ ಮತ್ತೆ ವಾಪಸ್ ಆಗಿದ್ದಾರೆ.

  ಚಿತ್ರದ ಬಗ್ಗೆ ಶಾರುಖ್ ಖಾನ್ ಅಧಿಕೃತವಾಗಿ ಘೋಷಣೆ ಮಾಡದಿದ್ದರು ಪಠಾಣ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಶಾರುಖ್ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಆದಿತ್ಯ ಚೋಪ್ರಾ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಪಠಾಣ್ ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಿದ್ದು, ಚಿತ್ರೀಕರಣಕ್ಕೆ 4 ಖ್ಯಾತ ಸ್ಟಂಟ್ ನಿರ್ದೇಶಕರು ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಚಿತ್ರದಲ್ಲಿ ಜಾನ್ ಅಬ್ರಾಹಂ ಮತ್ತು ಶಾರುಖ್ ನಡುವೆ ಸಾಕಷ್ಟು ಫೈಟ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಹಾಲಿವುಡ್ ನ ಖ್ಯಾತ ಆಕ್ಷನ್ ಡೈರಕ್ಟರ್ಸ್ ಫೈಟ್ ಡೈರೆಕ್ಟ್ ಮಾಡುತ್ತಿದ್ದಾರಂತೆ.

  ನಾಲ್ಕು ಜನರಲ್ಲಿ ಒಬ್ಬರ ಹೆಸರು ರಿವೀಲ್ ಆಗಿದ್ದು, ದಕ್ಷಣ ಆಫ್ರಿಕಾದ ಸ್ಟಂಟ್ ಕಲಾವಿದ ಕ್ರೇಗ್ ಮ್ಯಾಕ್ ರೇ ಎಂದು ಹೇಳಲಾಗುತ್ತಿದೆ. ಕ್ರೇಗ್ ಮ್ಯಾಕ್ ಸ್ಟಂಟ್ ಕಂಪೆನಿ ನಡೆಸುತ್ತಿದ್ದು, ನಾಲ್ಕು ಸದಸ್ಯರ ತಂಡ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾಗೆ ಆಕ್ಷನ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ನಾಲ್ಕು ಜನ ಮುಂಬೈಗೆ ಆಗಮಿಸಿದ್ದು, ಈಗಾಗಲೇ ಚಿತ್ರತಂಡ ಸೇರಿಕೊಂಡಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ.

  ಈಗಾಗಲೇ ಬಹುತೇಕ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ಇನ್ನು ಹೈ ವೋಲ್ಟೇಜ್ ದೃಶ್ಯಗಳನ್ನು ಜುಲೈನಲ್ಲಿ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆಯಂತೆ. ಅಂದಹಾಗೆ ಕ್ರೇಗ್ ನುರಿತ ಮಾರ್ಷಲ್ ಆರ್ಟ್ಸ್ ಕಲಾವಿದರಾಗಿದ್ದಾರೆ. ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್, ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್, ಬ್ಲಡ್ ಶಾಟ್ ಮತ್ತು ವಾರ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ.

  Shah Rukh Khan and John Abraham starrer Pathan to Rope in 4 action directors

  ಅಂದಹಾಗೆ 4 ಸ್ಟಂಟ್ ಕಲಾವಿದರನ್ನು ಆಯ್ಕೆ ಮಾಲು ಕಾರಣ, ಚಿತ್ರದಲ್ಲಿ ಅನೇಕ ಆಕ್ಷನ್ ದೃಶ್ಯಗಳಿದ್ದು ಸಮರ ಕಲೆ, ಚೇಸ್ ಸೇರಿದಂತೆ ಬೇರೆ ಬೇರೆ ರೀತಿಯ ಆಕ್ಷನ್ ಗಳಿಗೆ ಅದ್ಭುತ ಸಾಹಸಗಳನ್ನು ಮಾಡಿಸುವ ಉದ್ದೇಶದಿಂದ 4 ಜನ ಸ್ಟಂಟ್ ಕಲಾವಿದನ್ನು ಕರೆತಂದಿದ್ದಾರಂತೆ.

  ಅಪ್ಪು ಅಭಿಮಾನಿಗಳಿಗೆ ನಾಳೆ ಸಿಗಲಿದೆ ಭರ್ಜರಿ ಸುದ್ದಿ | Filmibeat Kannada

  ಪಠಾಣ್ ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಚಿತ್ರದಲ್ಲಿ ಶಾರುಖ್ ಗೆ ನಾಯಕಿಯಾಗಿ ದಿಪೀಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಶಾರುಖ್ ಇನ್ನು ಎರಡು ಸಿನಿಮಾಗಳು ಸದ್ದು ಮಾಡುತ್ತಿವೆ. ಆದರೆ ಯಾವ ಸಿನಿಮಾಗಳ ಬಗ್ಗೆಯೂ ಮಾಹಿತಿ ರಿವೀಲ್ ಮಾಡಿಲ್ಲ.

  Read more about: shah rukh khan
  English summary
  Bollywood Actor Shah Rukh Khan and John Abraham starrer Pathan to Rope in 4 action directors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X