Jawan: ಜವಾನ್ ಎರಡನೇ ಹಾಡಿನಲ್ಲಿ ಶಾರುಖ್ ಖಾನ್, ನಯನತಾರಾ ಕೆಮಿಸ್ಟ್ರಿ ಹೇಗಿದೆ ಗೊತ್ತಾ?
ಬಹುನಿರೀಕ್ಷಿತ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಟೀಸರ್, ಟ್ರೈಲರ್ ಭಾರೀ ಸದ್ದು ಮಾಡುತ್ತಿದೆ. ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ನಟಿಸಿರುವ ಈ ಚಿತ್ರ ಹಲವು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಒಂದೊಂದೆ ಪೋಸ್ಟರ್‌ಗಳು, ಟೀಸರ್‌ಗಳನ್ನು ಹಂಚಿಕೊಳ್ಳುತ್ತಿರುವ ಚಿತ್ರತಂಡ ಸಿನಿಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.
ಮೊದಲ ಹಾಡು 'ಜಿಂದಾ ಬಂದಾ' ಬಿಡುಗಡೆ ಮಾಡಿ ಕಿಚ್ಚು ಹಬ್ಬಿಸಿರುವ ಚಿತ್ರತಂಡ ಈಗ ಎರಡನೇಯ ಹಾಡು ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ನೀಡಿದೆ. ಇದು ಶಾರುಖ್ ಖಾನ್ ಮತ್ತು ನಯನತಾರಾ ಒಳಗೊಂಡ ರೋಮ್ಯಾಂಟಿಕ್ ಮೆಲೋಡಿ ಹಾಡಾಗಿದೆ. ಚಲೇಯಾ ಹಾಡಿನ ಟೀಸರ್ ಅನ್ನು ಶಾರುಖ್ ಖಾನ್ ಸೇರಿದಂತೆ ಚಿತ್ರತಂಡ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಇಬ್ಬರು ಸ್ಟಾರ್ ಕಲಾವಿದರ ನಡುವಿನ ಆನ್ ಸ್ಕ್ರೀನ್ ರೋಮ್ಯಾಂಟಿಕ್ ಕೆಮಿಸ್ಟ್ರಿ ಸಕತ್ ವರ್ಕ್ ಆಗಿದೆ. ಚಲೇಯಾ ಹಾಡಿನ ತುಣುಕು ನೋಡಿದ ಅಭಿಮಾನಿಗಳು ಇಬ್ಬರ ಕೆಮಿಸ್ಟ್ರಿಗೆ ಫಿದಾ ಆಗಿದ್ದಾರೆ. ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ನಟಿಸುತ್ತಿದ್ದು, ಅಭಿಮಾನಿಗಳು ಟೀಸರ್‌ಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಇಬ್ಬರಿಗೂ ಪ್ರೀತಿಯನ್ನು ಸುರಿಸುತ್ತಿದ್ದಾರೆ.
ನಯನತಾರಾ ಫ್ಲೋರಲ್ ಗೌನ್‌ಗಳಲ್ಲಿ ಅಪ್ಸರೆಯಂತೆ ಕಾಣುತ್ತಿದ್ದರೆ, ಶಾರುಖ್ ಖಾನ್ ಬಣ್ಣ ಬಣ್ಣದ ಶರ್ಟ್‌ನಲ್ಲಿ ತಮ್ಮ ಎವರ್‌ಗ್ರೀನ್ ಭಂಗಿಯನ್ನು ಪ್ರದರ್ಶಿಸುವ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಗಮನ ಸೆಳೆಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಸಕತ್ ಆಗಿದೆ ಎಂದಿದ್ದಾರೆ ಫ್ಯಾನ್ಸ್.
ಭಾನುವಾರ ಮತ್ತು ಶನಿವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಚಲೇಯಾ ಟೀಸರ್ ಅನ್ನು ಹಂಚಿಕೊಂಡ ಶಾರುಖ್ ಖಾನ್, "ದಿ ಲವ್ ಆಫ್ ಜವಾನ್. ರೊಮ್ಯಾಂಟಿಕ್. ಜೆಂಟಲ್ ಸ್ವೀಟ್. ಚಲೇಯ ಸೋಮವಾರ ಹೊರಬರಲಿದೆ! ಎಂದಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧರನ್ನು ನೀನೊಬ್ಬ ಮಾಂತ್ರಿಕ ಎಂದಿರುವ ಶಾರುಖ್ ಖಾನ್, ಎಲ್ಲಾ ಹಾಡುಗಾರರನ್ನು ನೆನಪಿಸಿಕೊಂಡಿದ್ದಾರೆ.

ಜವಾನ್ ವಿಶ್ವದಾದ್ಯಂತ 7ನೇ ಸೆಪ್ಟೆಂಬರ್ 2023 ರಂದು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಜವಾನ್‌ನಲ್ಲಿ ಅತಿಥಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಅವರು ಕೂಡ ಚಲೇಯಾ ಹಾಡನ ಪೋಸ್ಟ್‌ನ ಕೆಳಗೆ "ಸೋ ಕೂಲ್" ಎಂದು ಬರೆದು ಕಾಮೆಂಟ್ ಮಾಡಿದ್ದಾರೆ. ಈ ಹಾಡು ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ.
"ಶಾರುಖ್ ಖಾನ್ ಮತ್ತು ನಯನತಾರಾ ಅವರ ಕೆಮಿಸ್ಟ್ರಿ ನೋಡುತ್ತಿದ್ದರೇ ಇನ್ನು ಕಾಯಲು ಸಾಧ್ಯವಿಲ್ಲ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಬರೆದಿದ್ದಾರೆ. ಮತ್ತೊಬ್ಬರು, 'ಉಫ್ಫ್!!!! ನಾನು ಕಾಯುತ್ತಿದ್ದ ಹಾಡು ಇದು! ಪ್ರಣಯದ ರಾಜ ಮತ್ತು ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ರೋಮ್ಯಾಂಟಿಕ್ ಸಾಂಗ್! ನಾವು ಇನ್ನೇನು ಬೇಕು ಎಂದು ಕೇಳಬಹುದು? ಹಾಡು ನೋಡಲು ತುಂಬಾ ಉತ್ಸುಕನಾಗಿದ್ದೇನೆ!" ಎಂದಿದ್ದಾರೆ.
ಚಲೇಯಾ ಜವಾನ್‌ನ ಆಲ್ಬಮ್‌ನ ಎರಡನೇ ಹಾಡು. ಮೊದಲ ಹಾಡು, ಜಿಂದಾ ಬಂದಾ ಎಂಬ ಪೆಪ್ಪಿ ಟ್ರ್ಯಾಕ್ ಕೆಲವು ವಾರಗಳ ಹಿಂದೆ ಬಿಡುಗಡೆಯಾಯಿತು. ಅಂದಿನಿಂದ ಫ್ಲೇಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಜಿಂದಾ ಬಂದಾ ಹಾಡನ್ನು ಐದು ದಿನಗಳಲ್ಲಿ "ಗ್ರ್ಯಾಂಡ್ ಸ್ಕೇಲ್" ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಜವಾನ್ ಚಿತ್ರತಂಡ ತಿಳಿಸಿದೆ.
ಅಟ್ಲೀ ನಿರ್ದೇಶನ ಜವಾನ್ ಸಿನಿಮಾ ಬಿಡುಗಡೆ ಹತ್ತಿರ ಬರುತ್ತಿದ್ದು, ಆಗಸ್ಟ್ 10 ರಂದು ಶಾರುಖ್ ಖಾನ್ ಶೇರ್ ಮಾಡಿರುವ ಪೋಸ್ಟರ್‌ನಲ್ಲಿ ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











