For Quick Alerts
  ALLOW NOTIFICATIONS  
  For Daily Alerts

  ಮನಸ್ಸು ಒಡೆದು ಹೋಗಿದೆ, ನಾನೀಗ ಅಸಹಾಯಕನಾಗಿದ್ದೇನೆ: ಶಾರುಖ್ ಖಾನ್

  By ರವೀಂದ್ರ ಕೊಟಕಿ
  |

  ಕಳೆದ ಕೆಲವು ದಿನಗಳಿಂದ ಶಾರುಖ್ ಖಾನ್ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಊಟ ಕೂಡ ಮಾಡುತ್ತಿಲ್ಲ. ಕಾನೂನಿನ ತೊಡಕುಗಳು ಮಗನನ್ನು ಇನ್ನೂ ಜೈಲಿನಲ್ಲೇ ಇರುವಂತೆ ಮಾಡಿದೆ. ಇನ್ನೊಂದೆಡೆ ತನ್ನ ಮತ್ತು ತನ್ನ ಕುಟುಂಬದ ಮೇಲೆ ನಿರಂತರವಾಗಿ ನಡೆಯುತ್ತಿರುವ ಟ್ರೋಲ್‌ಗಳು ಕೂಡ ಶಾರುಖ್ ಖಾನ್ ಅವರ ನಿದ್ದೆಗೆಡಿಸಿದೆ. ಅದು ಅಲ್ಲದೆ, ನಾಳೆ ಮಗ ಬೇಲ್ ಮೇಲೆ ಬಿಡುಗಡೆಯಾಗಿ ಬಂದ ಮೇಲೆ ಅವನ ಭವಿಷ್ಯ ಹೇಗೆ? ಭಾರತದಲ್ಲೇ ಮಗ ಉಳಿದರೆ ಮತ್ತಷ್ಟು ಮಗನನ್ನು ಮೀಡಿಯಾಗಳು ಟಾರ್ಗೆಟ್ ಮಾಡಬಹುದು. ಮಗನ ಉಜ್ವಲ ಭವಿಷ್ಯದ ದೃಷ್ಟಿಯಿಂದ ಯುಕೆ ಅಥವಾ ಯುಎಸ್ ಗೆ ಮಗನನ್ನು ಕಳಿಸಿಕೊಡುವ ಬಗ್ಗೆ ಕೂಡ ಈಗಾಗಲೇ ಚಿಂತೆ ಕೂಡ ಕುಟುಂಬ ಮಾಡುತ್ತಿದೆ ಅಂತ ಹೇಳಲಾಗುತ್ತಿದೆ.

  ಆರ್ಯನ್ ಖಾನ್ ಬಂಧನದ ನಂತರ ಶಾರುಖ್ ಖಾನ್ ಬೆಂಬಲಕ್ಕೆ ದೊಡ್ಡಮಟ್ಟದಲ್ಲಿ ಬಾಲಿವುಡ್ ಮುಂದೆ ಮುಂದೆ ಬಂದಿದ್ದಾರೆ. ಆದರೆ ಅದೆಲ್ಲಾ ಕೇವಲ ಟ್ವೀಟ್ ಗಳಿಗೆ ಮಾತ್ರ ಸೀಮಿತವಾಗಿದೆ. ಸಲ್ಮಾನ್ ಖಾನ್, ಕರಣ್ ಜೋಹರ್ ಅಂತಹ ಕೆಲವು ಸೆಲೆಬ್ರಿಟಿಗಳು 'ಮನ್ನತ್ 'ಗೆ ಭೇಟಿ ನೀಡಿ ಖಾನ್ ದಂಪತಿಗಳಿಗೆ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆದರೆ ಇದರ ಹೊರತಾಗಿ ಬಾಲಿವುಡ್ ಈ ವಿಷಯದಲ್ಲಿ ಭಯಂಕರ ಭಯಂಕರವಾದ ಮೌನಕ್ಕೆ ಶರಣಾಗಿದೆ.

  ಬಾಲಿವುಡ್ ಮಂದಿಯಲ್ಲಿ ದಿಗಿಲು

  ಬಾಲಿವುಡ್ ಮಂದಿಯಲ್ಲಿ ದಿಗಿಲು

  ಯಾರು ಕೂಡ ಈ ವಿಚಾರದಲ್ಲಿ ಧೈರ್ಯವಾಗಿ ಶಾರುಖ್ ಮಗನ ಜೊತೆ ನಿಲ್ಲುತ್ತಿಲ್ಲ. ಏಕೆಂದರೆ ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳ ವಯಸ್ಸು ಕೂಡ ಸರಿಸುಮಾರು ಆರ್ಯನ್ ಖಾನ್‌ನಷ್ಟೇ. ಜೊತೆಗೆ ಇವರ ಮಕ್ಕಳೆಲ್ಲಾ ಸಹಜವಾಗಿಯೇ ನೈಟ್ ಕ್ಲಬ್, ವೀಕೆಂಡ್ ಪಾರ್ಟಿ ಅಂತ ಮೋಜು-ಮಸ್ತಿಗಳನ್ನು ಮಾಡುತ್ತಿರುವವರೇ. ಹೀಗಾಗಿಯೇ ಸುಮ್ಮನೆ ಹೆಚ್ಚಿಗೆ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟರೆ ನಾಳೆ ನಮ್ಮ ಮಕ್ಕಳ ಭವಿಷ್ಯ ಕೂಡ ಆರ್ಯನ್ ಖಾನ್‌ಗಿಂತ ವಿಭಿನ್ನವಾಗಿರುವುದಿಲ್ಲ ಎಂಬ ದಿಗಿಲು ಬಾಲಿವುಡ್ ಮಂದಿಯಲ್ಲಿ ನೆಲೆಗೊಂಡಿದೆ.

  ಬಾಲಿವುಡ್‌ನಲ್ಲಿ ಅದರ ಕಥೆಯೇ ಬೇರೆ

  ಬಾಲಿವುಡ್‌ನಲ್ಲಿ ಅದರ ಕಥೆಯೇ ಬೇರೆ

  ಹೆಸರು ಹೇಳಲು ಇಚ್ಚಿಸದ ಬಾಲಿವುಡ್ ಕಲಾವಿದರೊಬ್ಬರು ಈ ವಿಷಯದ ಬಗ್ಗೆ ಹೀಗೆ ಹೇಳುತ್ತಾರೆ, 'ಇದೇ ಘಟನೆ ಸುಮಾರು ಹತ್ತು ವರ್ಷಗಳ ಹಿಂದೆ ನಡೆದಿದ್ದರೆ ಆಗ ಮಾಧ್ಯಮ ಮತ್ತು ರಾಜಕಾರಣಿಗಳು ವರ್ತಿಸುತ್ತಿದ್ದ ರೀತಿಯ ಬೇರೆ ಇರುತ್ತಿತ್ತು. ಅಸಲಿಗೆ ಆರ್ಯನ್ ಖಾನ್ ಆರೆಸ್ಟ್ ಆಗುವವರೆಗೂ ಪರಿಸ್ಥಿತಿಗಳು ಹೋಗುತ್ತಿರಲಿಲ್ಲ. ರಾಜಕಾರಣಿಗಳೇ ಮುಂದೆ ನಿಂತು ಎಲ್ಲ ವ್ಯವಸ್ಥಿತವಾಗಿ ನೋಡಿಕೊಂಡು ಸುರಕ್ಷಿತವಾಗಿ ಆರ್ಯನ್ ಖಾನ್ ಅವರನ್ನು ಮನೆಗೆ ಕಳಿಸಿಕೊಡುತ್ತಿದ್ದರು. ಮಾಧ್ಯಮಗಳು ಶಾರುಖ್ ಖಾನ್ ಅವರ ಮಗನ ಗುಣಗಾನಕ್ಕೆ ನಿಲ್ಲುತ್ತಿದ್ದವು. ಏಕೆಂದರೆ ಅಂದಿನ ರಾಜಕಾರಣದಲ್ಲಿ ಶಾರುಖ್ ಖಾನ್ ಎಂಬ ಸೂಪರ್ ಸ್ಟಾರ್ ಜೊತೆ ಇಂತಹ ಸಂದರ್ಭದಲ್ಲಿ ನಿಲ್ಲುವುದೇ ತಮ್ಮ ಪುಣ್ಯ ಅಂತ ರಾಜಕಾರಣಿಗಳು ಭಾವಿಸುತ್ತಿದ್ದರು.'

  ಬಾಲಿವುಡ್ ಮಂದಿಯಂತೂ ಶಾರುಖಾನ್ ಮನೆ ಮುಂದೆ ಕ್ಯೂ ಕಟ್ಟಿ ನಿಂತಿರುವವರು. ಆದರೆ ಈಗ ದೇಶ ಬದಲಾಗಿದೆ, ದೇಶದ ರಾಜಕಾರಣ ಬದಲಾಗಿದೆ, ಮಾಧ್ಯಮಗಳು ಬದಲಾಗಿದೆ, ಜನರ ಅಭಿರುಚಿಗಳು ಬದಲಾಗಿದೆ.

   ಒಂದು ಹೇಳಿಕೆ ಕೂಡಾ ನೀಡಿಲ್ಲ

  ಒಂದು ಹೇಳಿಕೆ ಕೂಡಾ ನೀಡಿಲ್ಲ

  ಯಾವ ರಾಜಕಾರಣಿಗಳು ಕೂಡ ನೇರವಾಗಿ ಶಾರುಖ್ ಖಾನ್ ಬೆಂಬಲಕ್ಕೆ ಇಂದು ನಿಲ್ಲುತ್ತಿಲ್ಲ, ನಿಲ್ಲುವುದಿರಲಿ ಧೈರ್ಯವಾಗಿ ಒಂದು ಹೇಳಿಕೆ ಕೂಡ ಬಹಿರಂಗವಾಗಿ ಕೊಡುತ್ತಿಲ್ಲ.

  ಇಂದು ಶಾರುಖ್ ಖಾನ್ ಪರವಾಗಿ ನಿಂತರೆ ತಮ್ಮ ಭವಿಷ್ಯದ ರಾಜಕಾರಣದ ಅರಿವು ಮತ್ತು ಭಯ ಎರಡೂ ಅವರಲ್ಲಿದೆ. ಭ್ರಮಾಲೋಕದಲ್ಲಿ ತೇಲುತ್ತಿದ್ದ ಬಾಲಿವುಡ್ ಈಗೀಗ ನಿಧಾನವಾಗಿ ಧರೆಗಿಳಿದು ವಾಸ್ತವವನ್ನು ನೋಡುತ್ತಿದೆ. ಸೂಪರ್ ಸ್ಟಾರ್ ಶಾರುಖ್ ಖಾನ್ ತನ್ನ ಮಗನನ್ನು ಬಿಡಿಸಿಕೊಳ್ಳಲು ಪಡುತ್ತಿರುವ ಕಷ್ಟದ ಪರಿಕಂಡು ಅದು ಕಂಗಾಲಾಗಿದೆ. ಈಗಷ್ಟೇ ಬಾಲಿವುಡ್ ಗೆ ಭವಿಷ್ಯದ ಕರಾಳ ದಿನಗಳ ಭಯ ಶುರುವಾಗಿದೆ. ಹಿಂದಿನಂತೆ ಈಗ ಎಲ್ಲವನ್ನೂ ಗ್ರಾಂಟೆಡ್ ಅಂತ ಬಾಲಿವುಡ್ ತೆಗೆದುಕೊಳ್ಳುವ ದಿನಗಳು ದೂರವಾಗಿದೆ.

  ಮಗನ ಯೋಗಕ್ಷೇಮದ ಬಗ್ಗೆ ಕಂಗಾಲು

  ಮಗನ ಯೋಗಕ್ಷೇಮದ ಬಗ್ಗೆ ಕಂಗಾಲು

  'ದಿನಕಳೆದಂತೆ ಮಗನ ವಿಷಯದಲ್ಲಿ ಸಾಕಷ್ಟು ಚಿಂತಾಕ್ರಾಂತನಾಗಿರುವ ಶಾರೂಖ್ ಖಾನ್ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾನೆ, ಪ್ರಕರಣವನ್ನು ಅನುಸರಿಸಿ ಮತ್ತು ತನ್ನ ಮಗನ ಯೋಗಕ್ಷೇಮದ ಕುರಿತು ಎನ್‌ಸಿಬಿ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಉಳಿಸಿಕೊಂಡಿದ್ದಾನೆ' ಎಂದು ಬಾಲಿವುಡ್ ಮೂಲಗಳು ಹೇಳುತ್ತವೆ.

  'ಗೌರಿ ಮತ್ತು ಎಸ್‌ಆರ್‌ಕೆ ಅವರಿಗೆ ಸಾಂತ್ವನ ಹೇಳಲು ದಿನವಿಡೀ ಅನೇಕರು ಕರೆಗಳನ್ನು ಮಾಡುತ್ತಾರೆ. ಆದರೆ ಅವರ ಚಿಂತೆಯಲ್ಲ ಆರ್ಯನ್ ಬೇಲ್ ಕುರಿತಂತೆ ಆಗಿದೆ. ಆರ್ಯನ್ ನೇರ ಭೇಟಿಗೆ ಪ್ರವೇಶವಿಲ್ಲದಿದ್ದರೂ, ಅವನ ಯೋಗಕ್ಷೇಮದ ಮಾಹಿತಿಯನ್ನು ಕುಟುಂಬಕ್ಕೆ ತಲುಪಿಸಲಾಗುತ್ತಿದೆ. ಮನೆಯಲ್ಲಿ ತಯಾರಿಸಿದ ಊಟ ಮತ್ತು ಆತನ ವೈಯಕ್ತಿಕ ವಸ್ತುಗಳನ್ನು ಆರ್ಯನಿಗೆ ಕಳುಹಿಸಲು ವಿನಂತಿಯನ್ನು ಮಾಡಲಾಯಿತು. ಆದರೆ ಕೋರ್ಟ್ ಪರ್ಮಿಷನ್ ಇಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿಲ್ಲ" ಅಂತ ಮೂಲಗಳು ಹೇಳುತ್ತಿವೆ.

  'ಇಷ್ಟು ವರ್ಷಗಳ ಜೀವನದಲ್ಲಿ ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಅವರನ್ನು ಇಷ್ಟೊಂದು ಡಿಪ್ರೆಶನ್‌ನಲ್ಲಿ ಕಾಣುತ್ತಿರುವುದು. ಈಗ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಂದ ಶಾರುಖ್ ಅವರ ಮನಸ್ಸು ಒಡೆದು ಹೋಗಿದ್ದು,ಅಸಹಾಯಕತೆಯ ಭಾವನೆ ಅವರಲ್ಲಿ ಮನೆ ಮಾಡಿದೆ' ಅಂತ ಬಾಲಿವುಡ್ ಮೂಲಗಳು ಹೇಳುತ್ತಿವೆ

  ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ

  ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ

  ವೃತ್ತಿಪರ ದೃಷ್ಟಿಯಿಂದ, ಶಾರುಖ್ ಖಾನ್ ತನ್ನ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ. ಇಡಿ ವಿಚಾರಣೆ ಒಂದು ಹಂತಕ್ಕೆ ಬರುವವರೆಗೂ ಆರ್ಯನ್‌ಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಹೇಳಿಕೆಯನ್ನು ನೀಡುವ ಸಾಧ್ಯತೆಯಿಲ್ಲ ಎಂದು ಬಾಲಿವುಡ್ ಮೂಲಗಳು ಹೇಳುತ್ತೇವೆ. ಆತ (ಆರ್ಯನ್) ಯಾವ ಭವಿಷ್ಯದ ಕ್ರಮ ಕೈಗೊಳ್ಳುತ್ತಾನೆ ಎಂದು ಕುಟುಂಬವು ಆಲೋಚಿಸುತ್ತಿದೆ. ಆರ್ಯನ್ ತನ್ನ ಸಾಮಾಜಿಕ ಜೀವನವನ್ನು ಮುಂದುವರಿಸಲು ಯುಎಸ್ ಅಥವಾ ಯುಕೆಗೆ ತೆರಳುತ್ತಾನೆಯೇ? ಅಥವಾ ಅವನು ಭಾರತದಲ್ಲಿಯೇ ಇರುತ್ತಾನೆಯೇ ಎಂಬುದು ಅವನು ಹೊರಬಂದ ಮೇಲೆ ಕುಟುಂಬದವರು ನಿರ್ಧರಿಸುತ್ತಾರೆ. ಕುಟುಂಬವು ಕಾನೂನು ವ್ಯವಸ್ಥೆ ಮತ್ತು ವಿಳಂಬಗಳಿಂದ ನಿರಾಸೆ ಅನುಭವಿಸುತ್ತಿದೆ ಎಂದು ಅದರಲ್ಲಿ ಅವರು ಸೇರಿಸುತ್ತಾರೆ.

  ಸ್ಟಾರ್ ಮಗ ಅಥವಾ ಮಗಳು ಟಾರ್ಗೆಟ್

  ಸ್ಟಾರ್ ಮಗ ಅಥವಾ ಮಗಳು ಟಾರ್ಗೆಟ್

  ಅಲ್ಲದೆ, SRK ಗೆ ಮನೆಗೆ ತಲುಪಿದ ಬಹಳಷ್ಟು ನಟರು ಮಕ್ಕಳನ್ನು ಹೊಂದಿದ್ದಾರೆ ಮತ್ತು ಅವರು ಮುಂದಿನ ಗುರಿಗಳಾಗಬಹುದೇ ಎಂದು ಆತಂಕಗೊಂಡಿದ್ದಾರೆ. "ಈ ಬಂಧನವು ಯಾರೂ ಸುರಕ್ಷಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಮತ್ತು ಮುಂದಿನ ದಿನಗಳಲ್ಲಿ ಬೇರೆ ಯಾವುದೇ ಸ್ಟಾರ್ ಮಗ ಅಥವಾ ಮಗಳು ಟಾರ್ಗೆಟ್ ಆಗಬಹುದು. ಮುಕ್ತ ಸಾಮಾಜಿಕ ಜೀವನವನ್ನು ನಡೆಸುವುದು ಪ್ರತಿಯೊಬ್ಬ ಸೆಲೆಬ್ರಿಟಿ ಮಗು ಮಾಡಬೇಕಾದ ಆಯ್ಕೆಯಾಗಿದೆ" ಅವರೆಲ್ಲ ಅಭಿಪ್ರಾಯಗಳನ್ನು ಪಡುತ್ತಿದ್ದಾರೆ ಅಂತ ಮೂಲಗಳು ಹೇಳುತ್ತವೆ.

  English summary
  Latest Report reveals that Shah Rukh Khan and Gauri Ghan spending sleepless nights over son Aryan Khan's bail in drugs case. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X