ಇನ್ನೂ ಜವಾನ್ ನೋಡಿಲ್ಲವೇ?: ಇಲ್ಲಿದೆ ಹೊಸ ಆಫರ್, ಒಂದು ಟಿಕೆಟ್ ಖರೀದಿಸಿ, ಇನ್ನೊಂದು ಉಚಿತ ಪಡೆಯಿರಿ!

ಈ ಬಾರಿಯ ಬಾಲಿವುಡ್ ಬಿಗೆಸ್ಟ್ ಹಿಟ್ ಲಿಸ್ಟ್‌ಗೆ ಶಾರುಖ್ ಖಾನ್ ಅಭಿನಯದ ಜವಾನ್ ಸೇರಿದೆ. ಅಟ್ಲಿ ನಿರ್ದೇಶನದ ಈ ಸಿನಿಮಾ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಸಿನಿಮಾ ಈಗಾಗಲೇ ವಿಶ್ವಾದ್ಯಂತ 1000 ಕೋಟಿ ಗಳಿಸಿದ್ದು 1000 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ.

ಸಾವಿರ ಕೋಟಿ ಗಳಿಸಸಿದರೂ ಸಿನಿಮಾದ ಬಗ್ಗೆ ಜನರ ಆಸಕ್ತಿ ಇನ್ನು ಕಡಿಮೆಯಾಗಿಲ್ಲ. ಥಿಯೇಟರ್‌ಗಳಲ್ಲಿ ಜವಾನ್ ಅಬ್ಬರಿಸುತ್ತಿದ್ದಾನೆ. ಇದರ ನಡುವೆಯೇ ನಟ ಶಾರುಖ್ ಖಾನ್ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಎಸ್.. ಸೆಪ್ಟೆಂಬರ್ 28 ರಿಂದ ಸಿನಿಮಾ ನೋಡಲು ಹೋದವರಿಗೆ , 'ಜವಾನ್' ಟಿಕೆಟ್ ಉಚಿತವಾಗಿ ಸಿಗಲಿದೆ!?.

Shah Rukh Khan announces Buy 1 get 1 free offer for Jawan ticket

ಒಂದು ಖರೀದಿಸಿ, ಒಂದು ಉಚಿತ ಪಡೆಯಿರಿ!

'ಜವಾನ್' ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಸೆಪ್ಟೆಂಬರ್ 27 ರ 21 ನೇ ದಿನದಂದು 'ಜವಾನ್' ಒಟ್ಟು 576.23 ಕೋಟಿ ರೂಪಾಯಿ ಗಳಿಸಿದ್ದು, ಈ ಚಿತ್ರ ಭಾರತದಲ್ಲಿ 600 ಕೋಟಿ ರೂಪಾಯಿಗಳ ದಾಖಲೆಯನ್ನು ಸೇರುತ್ತಿದೆ. ಈ ಬೆನ್ನಲ್ಲೇ ಶಾರುಖ್ ಖಾನ್ ತಮ್ಮ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ.

ಈ ಬ್ಲಾಕ್ ಬಸ್ಟರ್ ಯಶಸ್ಸಿನ ನಡುವೆ, ಶಾರುಖ್ ಖಾನ್ ಈಗ 'ಜವಾನ್' ಸಿನಿಮಾ ನೋಡಲು '1 ಖರೀದಿಸಿ 1 ಉಚಿತ ಟಿಕೆಟ್' ಪಡೆಯಿರಿ ಎಂಬ ಕೊಡುಗೆಯನ್ನು ಘೋಷಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಬ್ಗಗೆ ಘೋಷಿಸಿರುವ ಅವರು, "ಅಣ್ಣ, ತಂಗಿ, ಶತ್ರು, ಗೆಳೆ ಹಾಗೆ ನಿಮ್ಮ ಪ್ರೇತಿ ಪಾತ್ರರಿಗೆ ನಾಳೆ ಜವಾನ್ ತೋರಿಸಿ. ಚಿಕ್ಕಪ್ಪ- ಚಿಕ್ಕಮ್ಮ, ಅತ್ತೆ- ಮಾವ ಸೇರಿ ಪೂರ್ತಿ ಕುಟುಂಬದೊಂದಿಗೆ ಸಿನಿಮಾ ನೋಡಿ. ಏಕೆಂದರೆ ನಾಳೆ ಒಂದು ಟಿಕೆಟ್ ಜೊತೆಗೆ ಮತ್ತೊಂದು ಟಿಕೆಟ್ ಉಚಿತ" ಎಂದಿದ್ದಾರೆ.

ಜೊತೆಗೆ, " ನಾಳೆ ಕುಟುಂಬ ಅಥವಾ ಪ್ರೇಮಿಯ ಜೊತೆಗೆ ಹೋದಾಗ 1 ಟಿಕೆಟ್ ಖರೀದಿಸಿ ಮತ್ತು ಇತರ 1 ಟಿಕೆಟ್ ಅನ್ನು ಉಚಿತವಾಗಿ ಪಡೆಯಿರಿ! ನಿಮ್ಮ ಹತ್ತಿರದ ಚಿತ್ರಮಂದಿಗಳಿಗೆ ಹೋಗಿ ಇಡೀ ಕುಟುಂಬದೊಂದಿಗೆ ಆರೋಗ್ಯಕರ ಮನರಂಜನೆ ನಿಮ್ಮದಾಗಿಸಿಕೊಳ್ಳಿ. ಜವಾನ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನೋಡಿ" ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.

ಉಚಿತ ಟಿಕೆಟ್ ಪಡೆಯಲು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬೇಕಿದೆ. ಗುರುವಾರ, ಶುಕ್ರವಾರ, ಶನಿವಾರ ಈ ಆಫರ್ ಇರಲಿದೆ. ಒಂದು ಟಿಕೆಟ್ ಕೊಂಡರೆ ಮತ್ತೊಮದು ಉಚಿತ ಸಿಗಲಿದೆ ಎಂದು ಪೋಸ್ಟರ್‌ ಅನ್ನು ಶಾರುಖ್ ಖಾನ್ ಹಂಚಿಕೊಂಡಿದ್ದಾರೆ.

Shah Rukh Khan announces Buy 1 get 1 free offer for Jawan ticket

ಅಟ್ಲಿ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದಾಗಿನಿಂದ ಥಿಯೇಟರ್‌ಗಳಲ್ಲಿ ಕಮಾಲ್ ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನದಂದು, ಜವಾನ್ 75 ಕೋಟಿಗಳನ್ನು ಗಳಿಸಿತು. ಜವಾನ್ ಸಿನಿಮಾದ ಅತ್ಯಂತ ಗಮನಾರ್ಹ ಸಾಧನೆಯೆಂದರೆ ಅದರ ಮುಂಗಡ ಟಿಕೆಟ್ ಮಾರಾಟ. ಥಿಯೇಟರ್‌ಗೆ ಬರುವ ಮುಂಚೆಯೇ ಸಿನಿಮಾದ 1.6 ಮಿಲಿಯನ್ ಟಿಕೆಟ್‌ಗಳು ಮಾರಾಟವಾಗಿದ್ದವು.

ತಮಿಳು ನಿರ್ದೇಶಕ ಅಟ್ಲಿಯ ಮೊದಲ ಹಿಂದಿ ಚಿತ್ರ 'ಜವಾನ್' ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ಸೇರಿ ದೊಡ್ಡ ತಾರಾಗಣವಿದೆ.

More from Filmibeat

English summary
Shah Rukh Khan announces Buy 1 get 1 free offer for Jawan ticket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X