ಕೊಲ್ಕತ್ತಾ ನೈಟ್ ರೈಡರ್ಸ್ ಬಳಿಕ ಮತ್ತೊಂದು ಕ್ರಿಕೆಟ್ ತಂಡ ಖರೀದಿಸಿದ ಶಾರೂಖ್ ಖಾನ್

ಬಾಲಿವುಡ್ ನಟ ಶಾರೂಖ್ ಖಾನ್ ಸಿನಿಮಾದ ಜೊತೆ ಜೊತೆಗೆ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಬ್ಯ್ರಾಂಡ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶಾರೂಖ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಎರಡು ಆವೃತ್ತಿಯಲ್ಲಿ ಚಾಂಪಿಯನ್ ಆಗಿದೆ.

ಐಪಿಎಲ್ ಇತಿಹಾಸದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಯಶಸ್ವಿ ತಂಡ ಎನಿಸಿಕೊಂಡಿದೆ. ಐಪಿಎಲ್ ರೀತಿಯಲ್ಲಿ ವೆಸ್ಟ್ ಇಂಡಿಸ್‌ನಲ್ಲಿ ಕೆರಿಬಿಯನ್ ಲೀಗ್ ನಡೆಯುತ್ತದೆ. ಈ ಲೀಗ್‌ನಲ್ಲೂ ಶಾರೂಖ್ ಖಾನ್ ಒಂದು ತಂಡದ ಮಾಲೀಕರಾಗಿದ್ದಾರೆ.

ಕಿರೋನ್ ಪೊಲ್ಲಾರ್ಡ್ ನಾಯಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಶಾರೂಖ್ ಓನರ್. 2020 ಸೀಸನ್‌ನಲ್ಲಿ ಈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Shah Rukh Khan buys the Los Angeles franchise In America cricket league

ಇದೀಗ, ಯುಎಸ್‌ ಕ್ರಿಕೆಟ್ ಲೀಗ್‌ನಲ್ಲೂ ಶಾರೂಖ್ ತಂಡವೊಂದನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅಮೆರಿಕಾ ಕ್ರಿಕೆಟ್ ಲೀಗ್ ಆಯೋಜನೆಯಾಗುತ್ತಿದ್ದು, ಈ ಟೂರ್ನಿಯಲ್ಲಿ ಲಾಸ್ ಏಂಜಲೀಸ್ ತಂಡವನ್ನು ಕಿಂಗ್ ಖಾನ್ ಕೊಂಡುಕೊಂಡಿದ್ದಾರಂತೆ.

ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಎಂದು ಹೆಸರಿಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸ್ವತಃ ಶಾರೂಖ್ ಖಾನ್ ಮತ್ತು ನೈಟ್ ರೈಡರ್ಸ್ ನಿರ್ವಹಣಾ ಮಂಡಳಿ ಖಚಿತಪಡಿಸಿದೆ.

ವರದಿಗಳ ಪ್ರಕಾರ, ಅಮೆರಿಕಾ ಟೂರ್ನಿಯಲ್ಲಿ ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ, ವಾಷಿಂಗ್ಟನ್ ಡಿಸಿ, ಡಲ್ಲಾಸ್, ಚಿಕಾಗೊ ಮತ್ತು ಲಾಸ್ ಏಂಜಲೀಸ್ ಆರು ತಂಡಗಳು ಭಾಗಿಯಾಗಲಿದೆ.

More from Filmibeat

English summary
America cricket league: Kolkata Knight Riders Owner, actor Shah Rukh Khan buys the Los Angeles franchise, and names it LA Knight Riders.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X