For Quick Alerts
  ALLOW NOTIFICATIONS  
  For Daily Alerts

  ಕೊಲ್ಕತ್ತಾ ನೈಟ್ ರೈಡರ್ಸ್ ಬಳಿಕ ಮತ್ತೊಂದು ಕ್ರಿಕೆಟ್ ತಂಡ ಖರೀದಿಸಿದ ಶಾರೂಖ್ ಖಾನ್

  |

  ಬಾಲಿವುಡ್ ನಟ ಶಾರೂಖ್ ಖಾನ್ ಸಿನಿಮಾದ ಜೊತೆ ಜೊತೆಗೆ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಬ್ಯ್ರಾಂಡ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶಾರೂಖ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಎರಡು ಆವೃತ್ತಿಯಲ್ಲಿ ಚಾಂಪಿಯನ್ ಆಗಿದೆ.

  ಐಪಿಎಲ್ ಇತಿಹಾಸದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಯಶಸ್ವಿ ತಂಡ ಎನಿಸಿಕೊಂಡಿದೆ. ಐಪಿಎಲ್ ರೀತಿಯಲ್ಲಿ ವೆಸ್ಟ್ ಇಂಡಿಸ್‌ನಲ್ಲಿ ಕೆರಿಬಿಯನ್ ಲೀಗ್ ನಡೆಯುತ್ತದೆ. ಈ ಲೀಗ್‌ನಲ್ಲೂ ಶಾರೂಖ್ ಖಾನ್ ಒಂದು ತಂಡದ ಮಾಲೀಕರಾಗಿದ್ದಾರೆ.

  ಶಾರುಖ್ ಖಾನ್ ಮನೆಯಲ್ಲಿ ಒಂದು ದಿನ ಅತಿಥಿಯಾಗುವ ಸುವರ್ಣಾವಕಾಶ!ಶಾರುಖ್ ಖಾನ್ ಮನೆಯಲ್ಲಿ ಒಂದು ದಿನ ಅತಿಥಿಯಾಗುವ ಸುವರ್ಣಾವಕಾಶ!

  ಕಿರೋನ್ ಪೊಲ್ಲಾರ್ಡ್ ನಾಯಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಶಾರೂಖ್ ಓನರ್. 2020 ಸೀಸನ್‌ನಲ್ಲಿ ಈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

  ಇದೀಗ, ಯುಎಸ್‌ ಕ್ರಿಕೆಟ್ ಲೀಗ್‌ನಲ್ಲೂ ಶಾರೂಖ್ ತಂಡವೊಂದನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅಮೆರಿಕಾ ಕ್ರಿಕೆಟ್ ಲೀಗ್ ಆಯೋಜನೆಯಾಗುತ್ತಿದ್ದು, ಈ ಟೂರ್ನಿಯಲ್ಲಿ ಲಾಸ್ ಏಂಜಲೀಸ್ ತಂಡವನ್ನು ಕಿಂಗ್ ಖಾನ್ ಕೊಂಡುಕೊಂಡಿದ್ದಾರಂತೆ.

  2 ವರ್ಷದ ಬಳಿಕ ಚಿತ್ರೀಕರಣಕ್ಕೆ ಮರಳಿದ ಬಾಲಿವುಡ್ ನಟ ಶಾರುಖ್ ಖಾನ್2 ವರ್ಷದ ಬಳಿಕ ಚಿತ್ರೀಕರಣಕ್ಕೆ ಮರಳಿದ ಬಾಲಿವುಡ್ ನಟ ಶಾರುಖ್ ಖಾನ್

  ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಎಂದು ಹೆಸರಿಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸ್ವತಃ ಶಾರೂಖ್ ಖಾನ್ ಮತ್ತು ನೈಟ್ ರೈಡರ್ಸ್ ನಿರ್ವಹಣಾ ಮಂಡಳಿ ಖಚಿತಪಡಿಸಿದೆ.

  ವರದಿಗಳ ಪ್ರಕಾರ, ಅಮೆರಿಕಾ ಟೂರ್ನಿಯಲ್ಲಿ ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ, ವಾಷಿಂಗ್ಟನ್ ಡಿಸಿ, ಡಲ್ಲಾಸ್, ಚಿಕಾಗೊ ಮತ್ತು ಲಾಸ್ ಏಂಜಲೀಸ್ ಆರು ತಂಡಗಳು ಭಾಗಿಯಾಗಲಿದೆ.

  English summary
  America cricket league: Kolkata Knight Riders Owner, actor Shah Rukh Khan buys the Los Angeles franchise, and names it LA Knight Riders.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X