For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ SRK; ದಳಪತಿ ವಿಜಯ್ ಬಗ್ಗೆ ಶಾರುಖ್ ಖಾನ್ ಹೇಳಿದ್ದೇನು?

  |

  ಬಾಲಿವುಡ್‌ನ ಸೂಪರ್ ಸ್ಟಾರ್, ಕಿಂಗ್ ಖಾನ್ ಶಾರುಖ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 29 ವರ್ಷಗಳು ಕಳೆದಿವೆ. ಇಂದು (ಜೂನ್ 25) ಶಾರುಖ್ 29 ವರ್ಷಗಳ ಚಿತ್ರರಂಗದ ಪಯಣವನ್ನು ಸಂಭ್ರಮಿಸುತ್ತಿದ್ದಾರೆ. ಜೊತೆಗೆ 29 ವರ್ಷಗಳ ಪಯಣದ ನೆನಪನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ ಶಾರುಖ್ ಖಾನ್ ಟ್ರೆಂಡಿಂಗ್‌ನಲ್ಲಿದ್ದು ಅಭಿಮಾನಿಗಳು ತಮ್ಮ ನೆಚ್ಚಿನ ಶಾರುಖ್ ಫೋಟೋ, ವಿಡಿಯೋ ಶೇರ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

  ಇನ್ನು ಈ ವಿಶೇಷ ದಿನದ ಸಂಭ್ರವನ್ನು ಅಭಿಮಾನಿಗಳ ಜೊತೆ ಆಚರಿಸುತ್ತಿದ್ದಾರೆ. ಅಭಿಮಾನಿಗಳ ಜೊತೆ ಸಂವಾದಕ್ಕೆ ಇಳಿದಿರುವ ಶಾರುಖ್ ಟ್ವಿಟ್ಟರ್‌ನಲ್ಲಿ ಏನಾದರು ಪ್ರಶ್ನೆಗಳನ್ನು ಕೇಳಿ ಎಂದು ಹೇಳಿದ್ದಾರೆ. 'AskSRK' ಹ್ಯಾಷ್ ಟ್ಯಾಗ್‌ನಲ್ಲಿ ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಭಿಮಾನಿಗಳ ಆಯ್ದ ಪ್ರಶ್ನೆಗಳಿಗೆ ಶಾರುಖ್ ಉತ್ತರ ನೀಡುತ್ತಿದ್ದಾರೆ. ಮುಂದೆ ಓದಿ..

  ಶಾರುಖ್-ಅಟ್ಲೀ ಸಿನಿಮಾಗೆ ನಾಯಕಿಯಾಗ್ತಾರಾ ದಕ್ಷಿಣದ ಈ ಸ್ಟಾರ್ ನಟಿ?ಶಾರುಖ್-ಅಟ್ಲೀ ಸಿನಿಮಾಗೆ ನಾಯಕಿಯಾಗ್ತಾರಾ ದಕ್ಷಿಣದ ಈ ಸ್ಟಾರ್ ನಟಿ?

  ದಳಪತಿ ವಿಜಯ್ ಬಗ್ಗೆ ಶಾರುಖ್ ಮಾತು

  ದಳಪತಿ ವಿಜಯ್ ಬಗ್ಗೆ ಶಾರುಖ್ ಮಾತು

  ಅಭಿಮಾನಿಯೊಬ್ಬ ಸೌತ್ ಸ್ಟಾರ್ ದಳಪತಿ ವಿಜಯ್ ಬಗ್ಗೆ ಹೇಳಿ ಎಂದು ಪ್ರಶ್ನೆ ಶಾರುಖ್ ಖಾನ್‌ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಾರುಖ್ "ವೆರಿ ಕೂಲ್" ಎಂದು ಎಂದು ಹೇಳಿದ್ದಾರೆ. ಶಾರುಖ್ ಪ್ರತಿಕ್ರಿಯೆ ವಿಜಯ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಶಾರುಖ್ ಉತ್ತರವನ್ನು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  ವೇದಿಕೆ ಹಂಚಿಕೊಂಡಿದ್ದ ಸ್ಟಾರ್ ಕಲಾವಿದರು

  ವೇದಿಕೆ ಹಂಚಿಕೊಂಡಿದ್ದ ಸ್ಟಾರ್ ಕಲಾವಿದರು

  ಅಂದಹಾಗೆ ಶಾರುಖ್ ಮತ್ತು ವಿಜಯ್ 2013ರಲ್ಲಿ ಮೊದಲ ಬಾರಿಗೆ ಅವಾರ್ಡ್ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಈ ಸಮಯದಲ್ಲಿ ಶಾರುಖ್ ಜೊತೆ ಹೆಜ್ಜೆ ಹಾಕುವಂತೆ ಒತ್ತಾಯ ಮಾಡಿದ ಬಳಿಕ ವಿಜಯ್ ಕಿಂಗ್ ಖಾನ್ ಜೊತೆ ಸ್ಟೆಪ್ ಹಾಕಿದ್ದರು.ಇಬ್ಬರ ಡ್ಯಾನ್ಸ್ ವಿಡಿಯೋ ಈಗಲೂ ಅಭಿಮಾನಿಗಳಿಗೆ ಥ್ರಿಲ್ ನೀಡುತ್ತೆ.

  ಕಂಗನಾ, ಸೋನಮ್ ಸೇರಿದಂತೆ 4 ನಟಿಯರು ಶಾರುಖ್ ಜೊತೆ ನಟಿಸಲು ನಿರಾಕರಿಸಿದ್ದೇಕೆ?ಕಂಗನಾ, ಸೋನಮ್ ಸೇರಿದಂತೆ 4 ನಟಿಯರು ಶಾರುಖ್ ಜೊತೆ ನಟಿಸಲು ನಿರಾಕರಿಸಿದ್ದೇಕೆ?

  ಶಾರುಖ್ ಬಳಿ ಇರುವ ಸಿನಿಮಾಗಳು

  ಶಾರುಖ್ ಬಳಿ ಇರುವ ಸಿನಿಮಾಗಳು

  ಶಾರುಖ್ ಖಾನ್ ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದುವರೆಗೂ ಯಾವುದೇ ಸಿನಿಮಾದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ, ರಾಜ್ ಕುಮಾರ್ ಹಿರಾನಿ ಮತ್ತು ಸಿದ್ಧಾರ್ಥ್ ಆನಂದ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.

  ಪಠಾಣ್ ಸಿನಿಮಾದಲ್ಲಿ ಶಾರುಖ್ ನಟನೆ

  ಪಠಾಣ್ ಸಿನಿಮಾದಲ್ಲಿ ಶಾರುಖ್ ನಟನೆ

  ಸದ್ಯ ಶಾರುಖ್, ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಚಿತ್ರದಲ್ಲಿ ಶಾರುಖ್ ಗೆ ಜೋಡಿಯಾಗಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಆಗಿ ಜಾನ್ ಅಬ್ರಾಹಂ ಕೂಡ ಬಣ್ಣ ಹಚ್ಚಿದ್ದಾರೆೆ. ಈ ಸಿನಿಮಾದ ಬಗ್ಗೆಯೂ ಶಾರುಖ್ ಅಭಿಮಾನಿಗಳ ಪ್ರಶ್ನೆಯಲ್ಲಿ ಸುಳಿವು ನೀಡಿದ್ದಾರೆ.

  ಅಟ್ಲೀ ನಿರ್ದೇಶನದ ಚಿತ್ರದಲ್ಲಿ ಶಾರುಖ್

  ಅಟ್ಲೀ ನಿರ್ದೇಶನದ ಚಿತ್ರದಲ್ಲಿ ಶಾರುಖ್

  ಇನ್ನು ತಮಿಳಿನ ಹಿಟ್ ನಿರ್ದೇಶಕ ಎನಿಸಿಕೊಂಡಿರುವ ಅಟ್ಲಿ ಜೊತೆಯೂ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ಸಿನಿಮಾ ಬಗ್ಗೆ ಮಾತುಕತೆ ನಡೆದಿದ್ದು ಶಾರುಖ್ ನಟಿಸುವುದು ಬಹುತೇಕ ಖಚಿತ. ಆದರೆ ಈ ಬಗ್ಗೆ ಶಾರುಖ್ ಆಗಲಿ ಅಥವಾ ಅಟ್ಲೀ ಎಲ್ಲೂ ಬಹಿರಂಗ ಪಡಿಸಿಲ್ಲ. ಶಾರುಖ್ ಈ ಸಿನಿಮಾದಲ್ಲಿ ರಾ ಏಜೆಂಟ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  Sudha Murty ಪ್ರಕಾರ ಸಿನಿಮಾವನ್ನ ಥಿಯೇಟರ್ನಲ್ಲೇ ನೋಡ್ಬೇಕು ಯಾಕೆ ಗೊತ್ತಾ? | Oneindia Kannada
  ಅಟ್ಲೀ ಸಿನಿಮಾದ ಬಗ್ಗೆ ಸುಳಿವು ನೀಡಿದ್ರಾ ಶಾರುಖ್?

  ಅಟ್ಲೀ ಸಿನಿಮಾದ ಬಗ್ಗೆ ಸುಳಿವು ನೀಡಿದ್ರಾ ಶಾರುಖ್?

  ಅಟ್ಲೀ ಜೊತೆ ಸಿನಿಮಾ ಮಾಡುವ ಬಗ್ಗೆ ಶಾರುಖ್ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಶಾರುಖ್ ನಿರ್ಮಾಣದ "ರೆಡ್ ಚಿಲ್ಲೀಸ್ ಸಂಸ್ಥೆಯ ಕಿಚನ್ ನಲ್ಲಿ ಏನು ತಯಾರಾಗುತ್ತಿದೆ" ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ ಕಿಂಗ್ ಖಾನ್, "ಸ್ಪೈಸಿ ಸಿನಿಮಾ" ಎಂದಿದ್ದಾರೆ. ಇದು ಅಟ್ಲೀ ಸಿನಿಮಾದ ಬಗ್ಗೆ ನೀಡಿದ ಸುಳಿವು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

  English summary
  Bollywood Actor Shah Rukh Khan calls Tamil Actor Vijay very cool; Gives Hints about his next movie with Atlee?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X