»   » 'ಟ್ಯೂಬ್ ಲೈಟ್' ನಂತರ ಮತ್ತೆ ಒಂದೇ ಚಿತ್ರದಲ್ಲಿ ಶಾರುಖ್-ಸಲ್ಮಾನ್ ಅಬ್ಬರ

'ಟ್ಯೂಬ್ ಲೈಟ್' ನಂತರ ಮತ್ತೆ ಒಂದೇ ಚಿತ್ರದಲ್ಲಿ ಶಾರುಖ್-ಸಲ್ಮಾನ್ ಅಬ್ಬರ

Posted By:
Subscribe to Filmibeat Kannada

ಬಾಲಿವುಡ್ ನ ಖಾನ್ ಗಳನ್ನು ಒಂದೇ ಚಿತ್ರದಲ್ಲಿ ನೋಡುವುದು ಅಂದ್ರೆ ಅಭಿಮಾನಿಗಳಿಗೆ ಹಬ್ಬ ಮಾಡಿದಷ್ಟೇ ಸಂತೋಷ. ಕಳೆದ ವಾರ ಬಿಡುಗಡೆ ಆದ ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರದಲ್ಲಿ ಶಾರುಖ್ ಖಾನ್ ಜಾದುಗಾರ 'ಗೊಗೋ ಪಾಷ' ಪಾತ್ರದಲ್ಲಿ ಅಭಿನಯಿಸಿದ್ದರು. ಈಗ ಸಲ್ಮಾನ್ ಖಾನ್, ಶಾರುಖ್ ಚಿತ್ರವೊಂದರಲ್ಲಿ ಗೆಸ್ಟ್ ರೋಲ್ ನಲ್ಲಿ ನಟಿಸಲಿದ್ದಾರೆ ಎಂದು ತಿಳಿದಿದೆ.

ಸಲ್ಲು ತಮ್ಮ ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಸ್ವತಃ ಶಾರುಖ್ ಖಾನ್ ಹೇಳಿದ್ದಾರೆ. ಹಾಗಿದ್ರೆ ಆ ಸಿನಿಮಾ ಯಾವುದು? ಕಿಂಗ್ ಖಾನ್ ಹೇಳಿದ್ದೇನು.. ಎಂಬುದರ ಡೀಟೇಲ್ಸ್‌ಗಾಗಿ ಮುಂದೆ ಓದಿರಿ..

ಶಾರುಖ್ ಚಿತ್ರದಲ್ಲಿ ಸಲ್ಮಾನ್

ಸಲ್ಮಾನ್ ಖಾನ್ ಗೆಸ್ಟ್ ರೋಲ್ ನಲ್ಲಿ ಅಭಿನಯಿಸಲಿರುವ ಶಾರುಖ್ ಖಾನ್ ಚಿತ್ರ 'ಡ್ವಾರ್ಫ್‌'. ಈ ಚಿತ್ರಕ್ಕೆ ಆನಂದ್ ಎಲ್ ರೈ ಆಕ್ಷನ್ ಕಟ್ ಹೇಳಲಿದ್ದಾರೆ.

ಸಲ್ಲು ನಟಿಸುವುದು ಪಕ್ಕಾ

"ಆನಂದ್ ಎಲ್ ರೈ ಫಿಲ್ಮ್ ಗೆ ಸಲ್ಮಾನ್ ಖಾನ್ ರನ್ನು ಗೆಸ್ಟ್ ರೋಲ್ ಗೆ ನಿಶ್ಚಯ ಮಾಡಲಾಗಿದೆ. ಇದರ ಬಗ್ಗೆ ಇನ್ನೂ ವರ್ಕ್ ಮಾಡುತ್ತಿದ್ದೇವೆ. ಆದರೆ ಸಲ್ಮಾನ್ ರವರೇ ಗೆಸ್ಟ್ ರೋಲ್ ಮಾಡಲು ನಾನು ಬಯಸಿದ್ದೇನೆ" ಎಂದು ಶಾರುಖ್ ಖಾನ್ 'ಲೀಡಿಂಗ್ ಡೈಲಿ' ಜೊತೆ ಹೇಳಿದ್ದಾರೆ.

ಪಾತ್ರ ಯಾವುದು?

ಶಾರುಖ್ ಖಾನ್ ರವರು ಸಲ್ಲು 'ಡ್ವಾರ್ಫ್' ಚಿತ್ರದಲ್ಲಿ ನಟಿಸಲಿರುವ ಪಾತ್ರ ಯಾವುದು ಎಂದು ಬಿಟ್ಟುಕೊಟ್ಟಿಲ್ಲ. ಇನ್ನೊಂದು ವಿಶೇಷ ಅಂದ್ರೆ ಈ ಬಗ್ಗೆ ಸಲ್ಮಾನ್ ಖಾನ್ ಜೊತೆ ಇನ್ನೂ ಮಾತನಾಡಿಲ್ಲವಂತೆ. ಸಲ್ಲು ಫ್ರೀ ಆದಾಗ ಹೋಗಿ ಮಾತನಾಡಬೇಕು. ನಾವಿಬ್ಬರು ಸಾಮಾನ್ಯವಾಗಿ ಬೆಳಿಗ್ಗೆ 3 ಗಂಟೆ ವೇಳೆಗೆ ಮೀಟ್ ಆಗುವುದು. ಆ ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ ಶಾರುಖ್.

ರೊಮ್ಯಾಂಟಿಕ್ ನಟಿಯರ ಜೊತೆ ಕಿಂಗ್ ಖಾನ್ ಡ್ಯುಯೆಟ್

'ಡ್ವಾರ್ಪ್' ಚಿತ್ರದಲ್ಲಿ ನಟಿ ಅನುಷ್ಕ ಶರ್ಮಾ ಮತ್ತು ಕತ್ರಿನಾ ಕೈಫ್ ನಟಿಸಲಿದ್ದು, ಈ ಇಬ್ಬರ ಜೊತೆಗೂ ಶಾರುಖ್ ಡ್ಯುಯೆಟ್ ಆಡಲಿದ್ದಾರೆ. ಈ ಹಿಂದೆ ಈ ಇಬ್ಬರು ನಟಿಯರು 'ಜಬ್ ತಕ್ ಹೈ ಜಾನ್' ಚಿತ್ರದಲ್ಲಿ ಶಾರುಖ್ ಜೊತೆ ಅಭಿನಯಿಸಿದ್ದರು.

ಭರವಸೆಯಲ್ಲಿ ಬಾದ್ ಶಾ

'ಟ್ಯೂಬ್‌ ಲೈಟ್' ಚಿತ್ರದಲ್ಲಿ ನೀವು ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದೀರಂತೆ ಎಂದು ಈ ಹಿಂದೆ ಶಾರುಖ್ ಗೆ ಕೇಳಿದಾಗ, 'ಸಲ್ಮಾನ್ ಖಾನ್ ಚಿತ್ರದಲ್ಲಿ ನಟಿಸಲು ಯಾರು 'No' ಎನ್ನುವುದಿಲ್ಲ' ಎಂದಿದ್ದರು. ಈಗ ಹಾಗೆಯೇ ಸಲ್ಲು ಸಹ ತಮ್ಮ ಚಿತ್ರಕ್ಕೆ 'No' ಎನ್ನುವುದಿಲ್ಲ ಎಂಬ ಭರವಸೆಯಲ್ಲಿ ಶಾರುಖ್ ಇದ್ದಾರೆ.

English summary
After Shah Rukh Khan's cameo in Tubelight, looks like Salman Khan is all set to return the favour and make a guest appearance in SRK's next. According to reports, SRK has even confirmed Salman's presence in the Aanand L Rai film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada