ಶಾರುಖ್ ಮಗಳಿಗೆ ಮದುವೆ ಪ್ರಪೋಸಲ್: ಹುಡುಗನ ತಿಂಗಳ ಸಂಬಳ ಎಷ್ಟು?
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪುತ್ರಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ 21ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಕಿಂಗ್ ಖಾನ್ ಪುತ್ರಿ ಸುಹಾನಾ ಖಾನ್ ಈಗ ಮದುವೆ ಪ್ರಪೋಸಲ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಶಾರುಖ್ ಪುತ್ರಿಗೆ ಅಭಿಮಾನಿಯೊಬ್ಬ ಮದುವೆ ಪ್ರಪೋಸಲ್ ಕಳುಹಿಸಿ, ತಿಂಗಳ ಸಂಬಳ ಎಷ್ಟು ಎನ್ನುವುದನ್ನು ಬಹಿರಂಗ ಪಡಿಸಿದ್ದಾನೆ. ಸುಹಾನಾ ಹುಟ್ಟುಹಬ್ಬದ ವಿಶೇಷವಾಗಿ ಶಾರುಖ್ ಪತ್ನಿ ಗೌರಿ ಖಾನ್ ಇತ್ತೀಚಿಗೆ ಮಗಳ ಸುಂದರವಾದ ಫೋಟೋ ಶೇರ್ ಮಾಡಿ, ಶುಭಾಶಯ ತಿಳಿಸಿದ್ದರು.
ಸುಹಾನಾ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ರೆ, ಒಬ್ಬ ಅಭಿಮಾನಿ ಮಾತ್ರ ಮದುವೆ ಆಗುವಂತೆ ಕೇಳಿಕೊಂಡಿದ್ದಾನೆ. ಸುಹೈಲ್ ಹೆಸರಿನ ವ್ಯಕ್ತಿ ಮದುವೆ ಪ್ರಪೋಸಲ್ ಕಳುಹಿಸಿ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದ್ದಾನೆ. ಮುಂದೆ ಓದಿ...

ಸುಹಾನಾ ಜೊತೆ ಮದುವೆ ಮಾಡಿಸಿ ಎಂದ ಅಭಿಮಾನಿ
'ಗೌರಿ ಮೆಡಮ್ ನನ್ನ ಮದುವೆಯನ್ನು ಸುಹಾನಾ ಜೊತೆ ಮಾಡಿ ನನ್ನ ತಿಂಗಳ ಸಂಬಳ 1 ಲಕ್ಷಕ್ಕೂ ಅಧಿಕವಾಗಿದೆ' ಎಂದಿದ್ದಾರೆ. ಸುಹೈಲ್ ಕಾಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಹಾನಾ ದಿನದ ಖರ್ಚು 1 ಲಕ್ಷ ಇರಬಹುದು ಹಾಗಿರುವಾಗ ತಿಂಗಳಿಗೆ 1 ಲಕ್ಷ ಹೇಗೆ ಸಾಕಾಗುತ್ತೆ ಎಂದು ಸುಹೈಲ್ ಕಾಲೆಳೆಯುತ್ತಿದ್ದಾರೆ.

ಮಗಳ ಭವಿಷ್ಯದ ಗೆಳೆಯನಿಗೆ 7 ಷರತ್ತು ಹಾಕಿದ್ದ ಶಾರುಖ್
ಶಾರುಖ್ ಖಾನ್ ಗೆ ಮಗಳೆಂದರೆ ತುಂಬಾ ಪ್ರೀತಿ. ಮಗಳನ್ನು ಪ್ರೀತಿ ಮಾಡುವ ಹುಡುಗ ಹೇಗಿರಬೇಕೆಂದು ಶಾರುಖ್ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು. ಸಹಾನಾ ಭವಿಷ್ಯದ ಬಾಯ್ ಫ್ರೆಂಡ್ 7 ಷರತ್ತುಗಳನ್ನು ವಿಧಿಸಿ ಅಚ್ಚರಿ ಮೂಡಿಸಿದ್ದರು. ಮಗಳಿಗಾಗಿ ಜೈಲಿಗೂ ಹೋಗಲು ಹಿಂಜರಿಯಲ್ಲ ಎಂದು ಶಾರುಖ್ ಹೇಳಿದ್ದರು.

ವಿದೇಶದಲ್ಲಿ ಓದುತ್ತಿರುವ ಸಹಾನಾ
ಹೀಗಿದ್ದರು ಕಿಂಗ್ ಖಾನ್ ಮಗಳಿಗೆ ಧೈರ್ಯವಾಗಿ ಮದುವೆ ಪ್ರಪೋಸಲ್ ಕಳುಹಿಸಿ ಸದ್ದು ಮಾಡುತ್ತಿದ್ದಾನೆ ಸುಹೈಲ್. ಸುಹಾನಾ ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಓದು ಮುಗಿಯುತ್ತಿದ್ದಂತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ.
Recommended Video

ಮ್ಯಾಗಜಿನ್ ಮುಖಪುಟದಲ್ಲಿ ಮಿಂಚಿದ್ದ ಶಾರುಖ್ ಪುತ್ರಿ
ಸುಹಾನಾ ಸಿನಿಮಾ ಎಂಟ್ರಿ ಕೊಡುವ ಮಾತುಗಳು ಆಗಾಗ ಕೇಳಿಬರುತ್ತಲೇ ಇದೆ. ಇತ್ತೀಚಿಗೆ ಪ್ರಸಿದ್ಧ ಮ್ಯಾಗಜಿನ್ ಮುಖಪುಟದಲ್ಲಿ ಮಿಂಚಿದ್ದ ಸುಹಾನಾ ಸದ್ಯದಲ್ಲೇ ಬಣ್ಣದ ಲೋಕಕ್ಕೆ ಬರುವ ಸುಳಿವು ನೀಡಿದ್ದಾರೆ. ಆದರೆ ಮಗಳ ಸಿನಿಮಾ ಜೀವನದ ಬಗ್ಗೆ ಶಾರುಖ್ ಇನ್ನು ಅಧಿಕೃತಗೊಳಿಸಿಲ್ಲ.


Click it and Unblock the Notifications











