ಕಾರ್ ತಂದಿಟ್ಟ ಪಜೀತಿ; ಶಾರುಖ್ ಖಾನ್, ದೀಪಿಕಾ ಪಡುಕೋಣೆ ವಿರುದ್ಧ FIR ದಾಖಲು
ಹುಂಡೈ ಮೋಟಾರ್ ಇಂಡಿಯಾದ ಬ್ರ್ಯಾಂಡ್ ಅಂಬಾಸಿಡರ್‌ಗಳಾದ ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಸೇರಿ ನಾಲ್ಕು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭರತ್‌ಪುರ್ ಪೊಲೀಸರು ನಟರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ತಮ್ಮ ಕಾರಿನ ತಾಂತ್ರಿಕ ದೋಷಗಳಿಂದ ಸಮಸ್ಯೆಗೆ ಸಿಲುಕಿರುವ ಗ್ರಾಹಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
50 ವರ್ಷದ ವಕೀಲ ಕೀರ್ತಿ ಸಿಂಗ್ ಎಂಬುವವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ದೂರು ದಾಖಲಿಸಿದ್ದಾರೆ. 2022ರಲ್ಲಿ ಹರಿಯಾಣದ ಸೋನಿಪತ್‌ನಲ್ಲಿರುವ ಡೀಲರ್‌ಶಿಪ್‌ನಿಂದ ₹23,97,353 ಮೌಲ್ಯದ ಹ್ಯುಂಡೈ ಅಲ್ಕಾಜರ್ ಕಾರನ್ನು ಖರೀದಿಸಿದ್ದೆ. ಅಂದಿನಿಂದಲೂ ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಕಾರು ಖರೀದಿಸುವ ವೇಳೆ ಸೋನಿಪತ್‌ನ ಹ್ಯುಂಡೈ ಡೀಲರ್‌ಗಳು, ಕಾರನ್ನು ಓಡಿಸಲು ಮತ್ತು ಯಾವುದೇ ಸಮಸ್ಯೆಗಳು ಆಗಲ್ಲ, ಒಂದು ವೇಳೆ ಸಮಸ್ಯೆ ಬಂದರೂ ತಾವೇ ಜವಾಬ್ದಾರರು ಎಂದಿದ್ದರು. ಕಾರು ಖರೀದಿಸಿದ ಸ್ವಲ್ಪ ಸಮಯದ ನಂತರ, ತಾಂತ್ರಿಕ ದೋಷಗಳು ಕಾಣಿಸಿಕೊಂಡವು. ಕಾರ್ ಚಾಲನೆ ಮಾಡುವಾಗ ವೇಗವನ್ನು ಹೆಚ್ಚಿಸಲು ಅಥವಾ ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ, ಕಾರು ಕಂಪಿಸಲು ಪ್ರಾರಂಭಿಸುತ್ತದೆ, ಆದರೆ ವೇಗ ಮಾತ್ರ ಹೆಚ್ಚಾಗುವುದಿಲ್ಲ. ಎಂಜಿನ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ದೋಷವನ್ನು ತೋರಿಸುತ್ತದೆ. ಇದರಿಂದ ತಮ್ಮ ಕುಟುಂಬ ಹಲವು ಬಾರಿ ಅಪಾಯಕ್ಕೆ ಸಿಲುಕಿಸಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕಾರಿನ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಡೀಲರ್‌ಗಳನ್ನು ಸಂಪರ್ಕಿಸಿದಾಗ, ಇದು ಹ್ಯುಂಡೈ ಕಂಪನಿಯ ಉತ್ಪಾದನಾ ದೋಷ ಎಂದರು. ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದರು. ಆದರೆ ತಾತ್ಕಾಲಿಕವಾಗಿ ಪರಿಹರಿಸಲು ಒಂದು ಸಲಹೆ ನೀಡಿದ್ದರೂ ಆದರೂ ಪದೇ ಪದೆ ಇದೇ ಸಮಸ್ಯೆ ಎದುರಾಗುತ್ತಿದೆ ಎಂದು ಸಿಂಗ್ ವಿವರಿಸಿದ್ದಾರೆ.

ಕೊನೆಯದಾಗಿ ಡೀಲರ್‌ಶಿಪ್‌ಗೆ ಸಮಸ್ಯೆ ವಿವರಿಸಿ ಪರಿಹರಿಸಲು ಅಥವಾ ಕಾರನ್ನು ಬದಲಾಯಿಸಲು ಕೇಳಿದಾಗ, ಅವರು ಒಪ್ಪಲಿಲ್ಲ. ಡೀಲರ್‌ಗಳು ವಂಚನೆ ಮತ್ತು ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ ಸಿಂಗ್, ದೋಷದ ಬಗ್ಗೆ ಅವರಿಗೆ ಮೊದಲೇ ತಿಳಿದಿದ್ದರೂ ಅದನ್ನು ತಮ್ಮಿಂದ ಮರೆಮಾಚಿದ್ದಾರೆ ಎಂದಿದ್ದಾರೆ. ಇದರಿಂದ ನಾನು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇನೆ ಎಂದು ಸಿಂಗ್ ತಿಳಿಸಿದ್ದಾರೆ.
ಗ್ರಾಹಕ ಸಂರಕ್ಷಣಾ ಕಾಯಿದೆ, 2019ರ ಅಡಿಯಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಕಾನೂನು ಸಮಸ್ಯೆಗೆ ಸಿಲುಕಿದ್ದಾರೆ. ಈ ಕಾಯಿದೆಯು ತಪ್ಪು ಅಥವಾ ದಾರಿ ತಪ್ಪಿಸುವ ಜಾಹೀರಾತುಗಳಿಗಾಗಿ ಬ್ರ್ಯಾಂಡ್ ಪ್ರಮೋಟ್ ಮಾಡುವವರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ದೂರುದಾರ ಭರತ್‌ಪುರದ ಸಿಜೆಎಂ ನ್ಯಾಯಾಲಯ ಸಂಖ್ಯೆ 2ರಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯವು ಮಥುರಾ ಗೇಟ್ ಪೊಲೀಸ್ ಠಾಣೆಗೆ FIR ದಾಖಲಿಸಲು ಸೂಚಿಸಿತ್ತು. ನ್ಯಾಯಾಲಯದ ಆದೇಶದ ನಂತರ, ಪೊಲೀಸರು ಸೆಕ್ಷನ್ 420 ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


Click it and Unblock the Notifications











