ಶಾರುಖ್ ಖಾನ್ ಮತ್ತೆ ಸಿನಿಮಾ ಮಾಡುವಂತೆ ಅಭಿಮಾನಿಗಳ ಅಭಿಯಾನ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾಗಳು ತೆರೆ ಕಾಣದೆ ವರ್ಷವೆ ಆಗಿದೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಡೆಟ್ಟಿರುವ ಶಾರುಖ್ ಯಾವುದೆ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಸೈಲೆಂಟ್ ಆಗಿದ್ದಾರೆ. ಆದ್ರೆ ಅಭಿಮಾನಿಗಳು ಮಾತ್ರ ಶಾರುಖ್ ನನ್ನು ನೋಡದೆ ಭಾರಿ ಬೇಸರ ಪಟ್ಟುಕೊಳ್ಳುತ್ತಿದ್ದಾರೆ.

'ಝೀರೋ' ಚಿತ್ರದ ನಂತರ ಕಿಂಗ್ ಖಾನ್ ಯಾವುದೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ದೊಡ್ಡ ಪರದೆಯ ಮೇಲೆ ಮಿಂಚದೆ ಸುಮಾರು ವರ್ಷದ ಮೇಲಾಗಿದೆ. ಹಾಗಾಗಿ ಅಭಿಮಾನಿಗಳು ಶಾರುಖ್ ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳೀಗ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ.

ಟ್ವಿಟ್ಟರ್ ನಲ್ಲಿ 'We Miss SRK On Big Screen' ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಪ್ರಾರಂಭಿಸಿದ್ದಾರೆ. ಈ ಅಭಿಯಾನಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಾರುಖ್ ಖಾನ್ ಫೋಟೋಗಳು, ಬೆಸ್ಟ್ ವಿಡಿಯೋವನ್ನು ಶೇರ್ ಮಾಡಿ ಅಭಿಮಾನಿಗಳ ಆಸೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರಹಾಕುತ್ತಿದ್ದಾರೆ.

Shah Rukh Khan Fans Are Trending In Social Media WesmaRK BigScreen In The Hashtag

'ನೀವು ನಟಿಸಿದಂತಹ ಅದ್ಭುತ ಪಾತ್ರಗಳನ್ನು ಇನ್ನೊಬ್ಬ ಸ್ಟಾರ್ ಮಾಡಲು ಸಾದ್ಯವಿಲ್ಲ" ಎಂದು ಹೇಳುತ್ತಿದ್ದಾರೆ. ಇನ್ನು ಸಾಕಷ್ಟು ಅಭಿಮಾನಿಗಳು "ವಿಶ್ವದ ಬಹುದೊಡ್ಡ ನಟನಾಗಿರುವ ಶಾರುಖ್ ಖಾನ್ ದಯವಿಟ್ಟು ಸಿನಿಮಾ ಅನೌನ್ಸ್ ಮಾಡಿ" ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

"ಚಾಂಪಿಯನ್ ನಿಮ್ಮನ್ನು ನೋಡಲು ಕಾಯುತ್ತಿದ್ದೇವೆ. ಬೇಗ ವಾಪಾಸ್ ಬನ್ನಿ" ಎನ್ನುವ ಮಾತುಗಳು ಟಿಟ್ಟರ್ ನಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳ ಮಾತಿಗೆ ಮಣಿದು ಶಾರುಖ್ ಸಿನಿಮಾ ಒಪ್ಪಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

ಇತ್ತೀಚಿಗೆ ಶಾರುಖ್, ರಾಕೇಶ್ ಶರ್ಮ ಬಯೋಪಿಕ್ ಮಾಡುತ್ತಾರೆ, ಸಂಜಯ್ ಲೀಲಾ ಬನ್ಸಾಲಿ ಜೊತೆ ಸಿನಿಮಾ ಮಾಡ್ತಾರೆ, ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೆ ಈ ಬಗ್ಗೆ ಶಾರುಖ್ ಯಾವುದೆ ಪ್ರತಿಕ್ರಿಯೆ ನೀಡಿರಲಿಲ್ಲ. ಅಭಿಮಾನಿಗಳ ಅಭಿಮಾನದ ಕೂಗು ಶಾರುಖ್ ಗೆ ತಲುಪುತ್ತ, ಶಾರುಖ್ ಮತ್ತೆ ವಾಪಾಸ್ ಆಗ್ತಾರಾ ಎನ್ನುವುದು ಸಧ್ಯದಲ್ಲೇ ಗೊತ್ತಾಗಲಿದೆ.

More from Filmibeat

English summary
Shah Rukh Khan fans Are trending in social media WesmaRK BigScreen in the hashtag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X