For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಮನವಿ ಪುರಸ್ಕರಿಸಿದ ಅಯಾನ್: 'ಅಸ್ತ್ರಾವರ್ಸ್'ನಲ್ಲಿ ಶಾರುಖ್ ಖಾನ್‌ಗಾಗಿ ದೊಡ್ಡ ಪ್ಲ್ಯಾನ್

  |

  ಹಿಟ್‌ ಸಿನಿಮಾಗಳಲ್ಲಿದೆ ಸೊರಗಿದ್ದ ಬಾಲಿವುಡ್‌ಗೆ 'ಬ್ರಹ್ಮಾಸ್ತ್ರ' ಸಿನಿಮಾ ಜೀವಜಲ ನೀಡಿದೆ. ಅಯಾನ್ ಮುಖರ್ಜಿ ನಿರ್ದೇಶಿಸಿ ರಣ್ಬೀರ್ ಕಪೂರ್-ಆಲಿಯಾ ಭಟ್ ನಟಿಸಿರುವ ಈ ಸಿನಿಮಾ ಮಿಶ್ರ ವಿಮರ್ಶೆಗಳ ನಡುವೆಯೂ ಉತ್ತಮ ಕಲೆಕ್ಷನ್ ಮಾಡಿ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ.

  ಅಯಾನ್ ಮುಖರ್ಜಿ ಈ ಹಿಂದೆಯೇ ಹೇಳಿದ್ದಂತೆ 'ಬ್ರಹ್ಮಾಸ್ತ್ರ' ಸಿನಿಮಾ ಕೇವಲ ಒಂದು ಸಿನಿಮಾ ಮಾತ್ರವೇ ಆಗಿರುವುದಿಲ್ಲ ಹಲವು ಸಿನಿಮಾಗಳ ಸರಣಿ ಆಗಿರುತ್ತದೆ. ರಣ್ಬೀರ್-ಆಲಿಯಾ ಹೊರತಾಗಿ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಕಾಣಿಸಿಕೊಂಡ ಇತರೆ ಪಾತ್ರಗಳನ್ನು ಪ್ರಧಾನವಾಗಿರಿಸಿಕೊಂಡು ಮುಂದಿನ ದಿನಗಳಲ್ಲಿ ಸಿನಿಮಾ ಬರಲಿವೆ.

  ಇದೀಗ ಬಿಡುಗಡೆ ಆಗಿರುವ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಶಾರುಖ್ ಖಾನ್‌ರ ಅತಿಥಿ ಪಾತ್ರದ ಬಗ್ಗೆ ದೊಡ್ಡ ಮಟ್ಟಿಗಿನ ಚರ್ಚೆ ಆಗುತ್ತಿದೆ. ಶಾರುಖ್ ಖಾನ್ ಎಂಟ್ರಿ ಸೀನ್ ಸಿನಿಮಾದ ಪ್ರಮುಖ ಅಂಶ ಎಂದು ಸಿನಿಮಾ ನೋಡಿದವರು ಮಾತನಾಡಿಕೊಳ್ಳುತ್ತಿದ್ದಾರೆ. ಸಿನಿಮಾದ ಇತರೆ ಪಾತ್ರಗಳಿಗಿಂತಲೂ ಶಾರುಖ್ ಪಾತ್ರ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಸಿನಿಮಾದಲ್ಲಿ ವಿಜ್ಞಾನಿ ಮೋಹನ್ ಭಾರ್ಗವ್ ಪಾತ್ರದಲ್ಲಿ ಶಾರುಖ್ ನಟಿಸಿದ್ದು, ಅವರು ವಾನರಾಸ್ತ್ರವನ್ನು ಹೊಂದಿರುತ್ತಾರೆ.

  ಅಯಾನ್ ಮುಖರ್ಜಿಗೆ ಶಾರುಖ್ ಅಭಿಮಾನಿಗಳ ಮನವಿ

  ಅಯಾನ್ ಮುಖರ್ಜಿಗೆ ಶಾರುಖ್ ಅಭಿಮಾನಿಗಳ ಮನವಿ

  ಇದೇ ಕಾರಣಕ್ಕೆ ಇದೀಗ 'ಬ್ರಹ್ಮಾಸ್ತ್ರ' ನಿರ್ದೇಶಕ ಅಯಾನ್ ಮುಖರ್ಜಿಗೆ ಶಾರುಖ್ ಅಭಿಮಾನಿಗಳು ಮನವಿ ಮಾಡಿದ್ದು, 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿನ ಶಾರುಖ್ ಖಾನ್ ಪಾತ್ರವನ್ನೇ ಪ್ರಧಾನವಾಗಿರಿಸಿಕೊಂಡು ಸಿನಿಮಾ ಮಾಡಿ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿದ್ದಾರೆ ಅಯಾನ್ ಮುಖರ್ಜಿ. ''ಅಭಿಮಾನಿಗಳು ಕೇಳುವ ಮುಂಚೆಯೇ, 2019 ರಲ್ಲಿ ಶಾರುಖ್ ಖಾನ್‌ರ ಪಾತ್ರದ ಚಿತ್ರೀಕರಣ ಮಾಡುವಾಗಲೇ ನಾವು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಸ್ವತಃ ಶಾರುಖ್ ಖಾನ್ ಸಹ ಈ ಬಗ್ಗೆ ಆಸಕ್ತಿ ಹೊಂದಿದ್ದಾರೆ'' ಎಂದಿದ್ದಾರೆ ಅಯಾನ್.

  ''ಶಾರುಖ್ ಪಾತ್ರ, ಅತಿಥಿ ಪಾತ್ರಕ್ಕೆ ಸೀಮಿತವಾಗಬಾರದು''

  ''ಶಾರುಖ್ ಪಾತ್ರ, ಅತಿಥಿ ಪಾತ್ರಕ್ಕೆ ಸೀಮಿತವಾಗಬಾರದು''

  ''ಶಾರುಖ್ ಖಾನ್ ಪಾತ್ರ ಕೇವಲ ಅತಿಥಿ ಪಾತ್ರಕ್ಕೆ ಸೀಮಿತವಾಗಬಾರದು. ನಾವು ಅವರ ಪಾತ್ರದ ಪೂರ್ತಿ ಕತೆ ಹೇಳಬೇಕು. ವಿಜ್ಞಾನಿಯ ಪೂರ್ಣ ವ್ಯಕ್ತಿತ್ವವನ್ನು, ಆತ ವಿಜ್ಞಾನಿಯಾಗಿದ್ದಕ್ಕೆ ಕಾರಣವನ್ನು ತಿಳಿಸಬೇಕು. ಆ ಪಾತ್ರದ ವಿವಿಧ ಶೇಡ್‌ಗಳ ಪರಿಚಯ ಮಾಡಿಸಬೇಕು. ನಾನು ಹಾಗೂ ನನ್ನ ನಿರ್ದೇಶಕರ ತಂಡ ಈ ಬಗ್ಗೆ ಸತತವಾಗಿ ಚರ್ಚೆ ಮಾಡುತ್ತಿದ್ದೇವೆ. 'ಬ್ರಹ್ಮಾಸ್ತ್ರ' ಸಿನಿಮಾದ ವಿವಿಧ ಕವಲುಗಳ ಬಗ್ಗೆ ಚಿಂತಿಸುತ್ತಲೇ ಇದ್ದೇವೆ. ಹಲವರ ಸಲಹೆಗಳನ್ನು ಸ್ವೀಕರಿಸುತ್ತಿದ್ದೇವೆ. ಹೊಸ ಯೋಜನೆಗಳನ್ನು ಮಾಡುತ್ತಿದ್ದೇವೆ. ಹೊಸ ಹೊಸ ಕತೆಗಳೊಟ್ಟಿಗೆ ನಾವು ಪ್ರೇಕ್ಷಕರ ಮುಂದೆ ಬರಲಿದ್ದೇವೆ'' ಎಂದಿದ್ದಾರೆ ಅಯಾನ್ ಮುಖರ್ಜಿ.

  ಭರ್ಜರಿ ಹಿಟ್ ಆದ 'ಬ್ರಹ್ಮಾಸ್ತ್ರ' ಸಿನಿಮಾ

  ಭರ್ಜರಿ ಹಿಟ್ ಆದ 'ಬ್ರಹ್ಮಾಸ್ತ್ರ' ಸಿನಿಮಾ

  'ಬ್ರಹ್ಮಾಸ್ತ್ರ' ಸಿನಿಮಾ ಕಳೆದ ಗುರುವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಬಂದಿಲ್ಲವಾದರೂ ಸಿನಿಮಾ ಹಿಟ್ ಎನಿಸಿಕೊಂಡಿದೆ. ಭಾರತದಲ್ಲಿ ಐದು ದಿನಕ್ಕೆ 175 ಕೋಟಿ ಗಳಿಸಿರುವ 'ಬ್ರಹ್ಮಾಸ್ತ್ರ' ವಿಶ್ವದಾದ್ಯಂತ 250 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾವು ಅತಿಮಾನುಷ ಶಕ್ತಿಯ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ರಣ್ಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಮೌನಿ ರಾಯ್ ಇನ್ನೂ ಹಲವು ಖ್ಯಾತ ನಟರು ನಟಿಸಿದ್ದಾರೆ.

  ಮೂರು ಸಿನಿಮಾಗಳಲ್ಲಿ ಶಾರುಖ್ ಖಾನ್ ಬ್ಯುಸಿ

  ಮೂರು ಸಿನಿಮಾಗಳಲ್ಲಿ ಶಾರುಖ್ ಖಾನ್ ಬ್ಯುಸಿ

  ಇನ್ನು ಶಾರುಖ್ ಖಾನ್ ಪ್ರಸ್ತುತ ಮೂರು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯ ಸಿನಿಮಾ 'ಪಠಾಣ್' ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ಜಾನ್ ಅಬ್ರಹಾಂ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ತಮಿಳಿನ ಅಟ್ಟಿಲಿ ನಿರ್ದೇಶನದ 'ಜವಾನ್' ಸಿನಿಮಾದಲ್ಲಿಯೂ ಶಾರುಖ್ ನಟಿಸುತ್ತಿದ್ದು ಈ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿದ್ದಾರೆ. ಭಾರತದ ಅತ್ಯುತ್ತಮ ಸ್ಟೋರಿ ಟೆಲ್ಲರ್ ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾದಲ್ಲಿಯೂ ಶಾರುಖ್ ನಟಿಸುತ್ತಿದ್ದು ಈ ಸಿನಿಮಾದಲ್ಲಿ ತಾಪ್ಸಿ ಪನ್ನು ಸಹ ಇದ್ದಾರೆ.

  English summary
  Shah Rukh Khan fans request director Ayan Mukerji to made individual movie about Shah Rukh Khan's character of Brahmastra movie.
  Wednesday, September 14, 2022, 13:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X