»   » ಭೂಪಾಲ್ ವ್ಯಕ್ತಿಯಿಂದ ಶಾರುಖ್ ಖಾನ್ ವಿರುದ್ಧ ದೂರು

ಭೂಪಾಲ್ ವ್ಯಕ್ತಿಯಿಂದ ಶಾರುಖ್ ಖಾನ್ ವಿರುದ್ಧ ದೂರು

Posted By:
Subscribe to Filmibeat Kannada

ಭೂಪಾಲ್ ನ ವ್ಯಕ್ತಿಯೊಬ್ಬ VJ-John ಸೇವಿಂಗ್ ಕ್ರೀಮ್ ಬಳಸಿದ ನಂತರ ಸೇವಿಂಗ್ ಕ್ರೀಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಶಾರುಖ್ ಖಾನ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ VJ-John ಸೇವಿಂಗ್ ಕ್ರೀಮ್ ಬಳಸಿದ ನಂತರ ರಾಜ್‌ಕುಮಾರ್ ಪಾಂಡೆ ಎಂಬ ವ್ಯಕ್ತಿ ಭೂಪಾಲ್ ಗ್ರಾಹಕರ ನ್ಯಾಯಾಲಯದಲ್ಲಿ "ನಟ ಶಾರುಖ್ ಖಾನ್ VJ-John ಸೇವಿಂಗ್ ಕ್ರೀಮ್ ಜಾಹಿರಾತಿನಲ್ಲಿ ಕಾಣಿಸಿಕೊಂಡು 'ಭಾರತದ ನಂಬರ್ ಒನ್' ಎಂದು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ' ಎಂದು ದೂರು ದಾಖಲಿಸಿದ್ದಾರೆ. ಈ ಕ್ರೀಮ್ ಬಳಸಿ ಸೇವಿಂಗ್ ಮಾಡಿದ ನಂತರ ನಾನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ಸಹ ದೂರಿನಲ್ಲಿ ಹೇಳಿದ್ದಾರೆ.

Shah Rukh Khan gets legal notice after Bhopal man develops rashes using a shaving cream

ರಾಜ್‌ಕುಮಾರ್ ಪಾಂಡೆ ಅವರ ದೂರನ್ನು ಪರಿಶೀಲಿಸಿರುವ ಗ್ರಾಹಕರ ನ್ಯಾಯಾಲಯದ ನ್ಯಾಯಾದೀಶ ಕಾಶೀನಾಥ್ ಸಿಂಗ್ ರವರು ಶಾರುಖ್ ಖಾನ್, VJ-John ಸೇವಿಂಗ್ ಕ್ರೀಮ್ ಉತ್ಪಾದನ ಕಂಪನಿ, ಮತ್ತು ಮಧ್ಯ ಪ್ರದೇಶದ 'ಆಹಾರ ಮತ್ತು ಔಷಧಿಗಳ ಇಲಾಖೆ'ಗೆ ನೋಟಿಸ್ ನೀಡಿದ್ದಾರೆ ಎಂದು 'ಹಿಂದುಸ್ತಾನ್ ಟೈಮ್ಸ್' ವರದಿ ಮಾಡಿದೆ. ಆದರೆ ಶಾರುಖ್ ಖಾನ್ ಸೇವಿಂಗ್ ಕ್ರೀಮ್ ನ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆಯೇ ಎಂಬುದನ್ನು ನಾವು ಪರಿಶೀಲನೆ ಮಾಡಿಲ್ಲ ಎಂದು 'ಹಿಂದುಸ್ತಾನ್ ಟೈಮ್ಸ್' ಹೇಳಿದೆ.

ಶಾರುಖ್ ಖಾನ್ ಪ್ರಸ್ತುತ ಇಮ್ತಿಯಾಜ್ ಅಲಿ ನಿರ್ದೇಶನದ 'ಜಬ್ ಹ್ಯಾರಿ ಮೆಟ್ ಸೀಜಲ್' ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.

English summary
Bollywood Actor Shah Rukh Khan gets legal notice after Bhopal man develops rashes using a shaving cream.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada