ವ್ಯಕ್ತಿಯ ಜೀವ ನಷ್ಟ: 2017 ರ ಪ್ರಕರಣದಿಂದ ಶಾರುಖ್ ಖುಲಾಸೆ

ನಟ ಶಾರುಖ್ ಖಾನ್‌ ಇಂದಾಗಿ ಪರೋಕ್ಷವಾಗಿ ವ್ಯಕ್ತಿಯೊಬ್ಬರ ಜೀವ ನಷ್ಟವಾಗಿದ್ದ ಪ್ರಕರಣ ದಲ್ಲಿ ಶಾರುಖ್ ನಿರಾಳರಾಗಿದೆ. ನ್ಯಾಯಾಲವು ಅವರ ವಿರುದ್ಧದ ಕ್ರಿಮಿನಲ್ ಪ್ರಕರಣದಿಂದ ಖುಲಾಸೆಗೊಳಿಸಿದೆ.

2017 ರ ಸಮಯದಲ್ಲಿ ನಟ ಶಾರುಖ್ ಖಾನ್ ತಮ್ಮ ಹೊಸ ಸಿನಿಮಾ 'ರಯೀಸ್' ಪ್ರಚಾರದ ಸಂದರ್ಭ ಗುಜರಾತ್‌ನ ವಡೋದರಾದ ರೈಲ್ವೆ ನಿಲ್ದಾಣಕ್ಕೆ ಬಂದಾಗ, ಶಾರುಖ್ ಖಾನ್ ರೈಲ್ವೆ ನಿಲ್ದಾಣಕ್ಕೆ ಬಂದ ವಿಷಯ ತಿಳಿದು ಸಾವಿರಾರು ಜನ ಶಾರುಖ್ ರನ್ನು ನೋಡಲು ಮುಗಿಬಿದ್ದ ಪರಿಣಾಮ ದೊಡ್ಡ ಪ್ರಮಾಣದ ಕಾಲ್ತುಳಿತ ಉಂಟಾಗಿತ್ತು.

'ರಯೀಸ್' ಸಿನಿಮಾದ ಪ್ರಚಾರಕ್ಕಾಗಿ ಮುಂಬೈನಿಂದ ದೆಹಲಿಗೆ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ರೈಲು ವಡೋಧರಾಕ್ಕೆ ಬಂದಾಗ ಶಾರುಖ್ ಖಾನ್ ಅನ್ನು ನೋಡಲು ಜನ ಮುಗಿಬಿದ್ದರು. ಈ ಸಮಯ ಶಾರುಖ್ ಖಾನ್ ರೈಲಿನಿಂದ ಸ್ಮೈಲಿ ಬಾಲ್‌ಗಳು, ಟಿ ಶರ್ಟ್‌ಗಳನ್ನು ಜನರತ್ತ ಎಸೆದರು. ಅದನ್ನು ಎತ್ತಿಕೊಳ್ಳಲು ಹೋಗಿ ಇನ್ನಷ್ಟು ಕಾಲ್ತುಳಿತವಾಯ್ತು. ಅದೇ ಸಮಯದಲ್ಲಿ ಫರ್ಹೀದ್ ಖಾನ್ ಪಠಾಣ್ ಎಂಬ ಸ್ಥಳೀಯ ರಾಜಕಾರಣಿಯೊಬ್ಬರು ಸಹ ಕಾಲ್ತುಳಿಕ್ಕೆ ಸಿಲುಕಿದ್ದರು.

Shah Rukh Khan Gets Relief In Raees Stamped Case

ಕಾಲ್ತುಳಿತದಿಂದಾಗಿ ಹಲವರು ಗಾಯಗೊಂಡಿದ್ದರು, ಈ ಘಟನೆಯಲ್ಲಿ ಫರ್ಹೀದ್ ಖಾನ್ ಪಠಾಣ್ ಹೆಸರಿನ ಸ್ಥಳೀಯ ರಾಜಕೀಯ ಮುಖಂಡರೊಬ್ಬರು ಕಾಲ್ತುಳಿತಕ್ಕೆ ಸಿಲುಕಿ ಅವರಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದರು.

ಘಟನೆ ಸಂಬಂಧ ಜಿತೇಂಧರ್ ಸೋಲಂಕಿ ಎಂಬುವರು ಶಾರುಖ್ ಖಾನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಯತ್ನಿಸಿದ್ದರು. ಆದರೆ ಅವರ ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ. ಆಗ ವಡೋಧರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಜಿತೇಂಧರ್, ಶಾರುಖ್ ಖಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸುವಂತೆ ಮನವಿ ಸಲ್ಲಿಸಿದ್ದರು. ಅಂತೆಯೇ ಖಾನ್ ವಿರುದ್ಧ ಸೆಕ್ಷನ್ 336, 337, 338 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತಮ್ಮ ಮೇಲಿ ದಾಖಲಾಗಿಸಿರುವ ಪ್ರಕರಣವನ್ನು ರದ್ದು ಮಾಡಬೇಕೆಂದು ಶಾರುಖ್ ಖಾನ್ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಶಾರುಖ್ ಖಾನ್ ಪರ ವಾದ ಮಂಡಿಸಿದ ಮಿಹಿರ್ ಟೋಕ್ರೆ, ''ಸ್ಮೈಲಿ ಬಾಲ್‌ಗಳನ್ನು ಎಸೆಯುವುದು, ಟಿ ಶರ್ಟ್‌ಗಳನ್ನು ಎಸೆಯುವುದನ್ನು ಬೇಜವಾಬ್ದಾರಿ ಅಥವಾ ಜನರಿಗೆ ತೊಂದರೆ ನೀಡುವ ಉದ್ದೇಶದಿಂದ ಮಾಡಿದ್ದು ಎನ್ನಲಾಗದು'' ಎಂದು ವಾದಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ನ್ಯಾಯಾಲಯ ಶಾರುಖ್ ಖಾನ್ ಅನ್ನು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ.

More from Filmibeat

English summary
Shah Rukh Khan gets relief in Raees stamped case. In 2017 when Shah Rukh Khan visited Vadodhara Railway station for movie promotion one man died in the stamped happened that day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X