ಶಾರುಖ್ ಖಾನ್ ಹೊಸ ಸಿನಿಮಾ 'ಡಂಕಿ', ರಾಜ್‌ಕುಮಾರ್ ಹಿರಾನಿ ಸಾರಥ್ಯ!

ನಟ ಶಾರುಖ್ ಖಾನ್ ಬ್ರೇಕ್ ಬಳಿಕ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಶಾರುಖ್ ಖಾನ್ ಸದ್ಯ ಸಾಲು, ಸಾಲು ಚಿತ್ರಗಳನ್ನು ಮಾಡುವ ಮನಸ್ಸು ಮಾಡಿದ ಹಾಗೆ ಕಾಣುತ್ತಿದೆ. ಈಗ ನಟ ಶಾರುಖ್ ಖಾನ್ ಮತ್ತೊಂದು ಹೊಸ ಚಿತ್ರ ಪ್ರಕಟ ಆಗಿದೆ. ಯಾವುದೇ ಸಣ್ಣ ಸುಳಿವು ಬಿಟ್ಟು ಕೊಡದೆ ಏಕಾಏಕಿ ಶಾರುಖ್ ಖಾನ್ ಮುಂದಿನ ಚಿತ್ರ ಪ್ರಕಟಗೊಂಡಿದೆ. ಚಿತ್ರದ ಟೈಟಲ್ ಕೂಡ ಅನೌನ್ಸ್ ಆಗಿ ಬಿಟ್ಟಿದೆ.

ಶಾರುಖ್ ಖಾನ್ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ. ಇದು ಬಾಲಿವುಡ್ ಪಾಲಿಗೆ ದೊಡ್ಡ ಘೋಷಣೆಯಾಗಿದೆ. ಈ ಹಿಂದೆ 'ಪಠಾಣ್' ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಬಿಡುಗಡೆಯಾದಾಗ ದೊಡ್ಡ ಬಿರುಗಾಳಿಯೇ ಸೃಷ್ಟಿ ಆಗಿತ್ತು. ಈಗ ಮತ್ತೊಂದು ಚಿತ್ರ ಪ್ರಕಟ ಆಗಿದ್ದು ಅಭಿಮಾನಿಗಳು ಫುಲ್ ದಿಲ್ ಖುಷ್ ಆಗಿದ್ದಾರೆ.

ಶಾರುಖ್, ರಾಜ್‌ಕುಮಾರ್ ಹಿರಾನಿ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಎಂಬ ವರದಿಗಳು ಬಹಳ ಸಮಯದಿಂದ ಹರಿದಾಡುತ್ತಾ ಇದ್ದವು. ಈಗ ಆ ಊಹಾ ಪೋಹಗಳಿಗೆ ಬ್ರೇಕ್ ಬಿದ್ದಿದ್ದು, ಕೊನೆಗೂ ಈ ಇಬ್ಬರ ಸಮಾಗಮದಲ್ಲಿ ಸಿನಿಮಾ ಬರುವುದು ಪಕ್ಕಾ ಆಗಿದೆ. ಈ ಚಿತ್ರಕ್ಕೆ 'ಡಂಕಿ' ಎಂದು ಟೈಟಲ್ ಇಟ್ಟಿದ್ದು, ಶಾರುಖ್ ಮತ್ತು ರಾಜ್‌ಕುಮಾರ್ ಹಿರಾನಿ ಇಬ್ಬರೂ ಒಟ್ಟಿಗೆ ವಿಡಿಯೋ ಮೂಲಕ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ.

Shah Rukh Khan Movie With Rajkumar Hirani Titled Dunki

ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ 'ಪಠಾಣ್' ಚಿತ್ರದ ಮೂಲಕ ದೊಡ್ಡ ಪರದೆಗೆ ಮರಳುತ್ತಿದ್ದಾರೆ. 'ಪಠಾಣ್' ಮುಂದಿನ ವರ್ಷ ಜನವರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಖ್ಯಾತ ನಿರ್ದೇಶಕರಾದ ಅಟ್ಲಿ ಜೊತೆಗೂ ಕೂಡ ಶಾರುಖ್ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಬಳಿಕ 'ಡಂಕಿ' ಚಿತ್ರವನ್ನು ಶಾರುಖ್ ಕೈಗೆತ್ತಿಕೊಳ್ಳಲಿದ್ದಾರೆ.

ಈ ಬಗ್ಗೆ ಬಾಲಿವುಡ್ ಮಾಧ್ಯಮಕ್ಕೆ ಮಾತನಾಡಿದ ರಾಜ್‌ಕುಮಾರ್ ಹಿರಾನಿ, "ನನ್ನ ವೃತ್ತಿ ಜೀವನದ ಪಟ್ಟಿಯಲ್ಲಿ ಶಾರುಖ್ ಖಾನ್ ಇದ್ದರು. ಈ ಹಿಂದೆ ಹಲವಾರು ಬಾರಿ ಚಿತ್ರ ಮಾಡಲು ಪ್ರಯತ್ನಿಸಿದ್ದೆವು. ಈಗ ಅಂತಿಮವಾಗಿ 'ಡಂಕಿ' ಚಿತ್ರದೊಂದಿದೆ ನಮ್ಮ ಉದ್ದೇಶ ಪೂರ್ಣಗೊಂಡಿದೆ. ಶಾರುಖ್ ಈ ಚಿತ್ರಕ್ಕೆ ತುಂಬುವ ಶಕ್ತಿ, ವರ್ಚಸ್ಸು, ಹಾಸ್ಯ ಮತ್ತು ಮೋಡಿ ಪ್ರಮುಖವಾಗಿದೆ. ಆ ಮ್ಯಾಜಿಕ್ ಅನ್ನು ದೊಡ್ಡ ಪರದೆಯ ಮೇಲೆ ತರಲು ನಾನು ಎದುರು ನೋಡುತ್ತಿದ್ದೇನೆ." ಎಂದಿದ್ದಾರೆ.

ಇನ್ನು ಈ ಚಿತ್ರದಲ್ಲಿ ಶಾರುಖ್ ಖಾನ್‌ಗೆ ಜೊತೆಯಾಗಿ ನಟಿ ತಾಪ್ಸಿ ಪನ್ನು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. 'ಡಂಕಿ' ಟೀಸರ್‌ ಹಾಗೂ ಚಿತ್ರದಲ್ಲಿ ಏನೇನು ಇರಲಿದೆ ಎನ್ನುವ ಬಗ್ಗೆ ಸಣ್ಣದೊಂದು ಸುಳಿವು ನೀಡಲಾಗಿದೆ. ಎಲ್ಲಕ್ಕಿಂತ ಹಚ್ಚಾಗಿ ಈ ಚಿತ್ರದಲ್ಲಿ ಕಾಮಿಡಿ ಅಂಶಗಳೇ ಹೆಚ್ಚಿರುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Shah Rukh Khan Movie With Rajkumar Hirani Titled Dunki, It Will Release In 2023 December
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X