'ಜವಾನ್' ಸಿನಿಮಾ ಮೇಲೆ ನಯನತಾರಾ ಕೋಪ!: ಶಾರುಖ್ ಖಾನ್ ಹೇಳಿದ್ದೇನು?

ಲೇಡಿ ಸೂಪರ್ ಸ್ಟಾರ್ ನಯನತಾರಾ ಜವಾನ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ನಟ ಶಾರುಖ್ ಖಾನ್ ಜೊತೆಗೆ ಮೊದಲ ಬಾರಿಗೆ ನಯನತಾರಾ ತೆರೆ ಹಂಚಿಕೊಂಡಿದ್ದಾರೆ. ಇಬ್ಬರ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ, ನಯನತಾರಾ ಪಾತ್ರಕ್ಕೆ ಚಿತ್ರದಲ್ಲಿ ಅಷ್ಟಾಗಿ ಜಾಗ ದೊರೆತಿಲ್ಲ ಎಂದು ಪ್ರೇಕ್ಷಕರ ಒಂದು ವರ್ಗ ಅಭಿಪ್ರಾಯಪಟ್ಟಿದೆ.

ನಿಜ ಹೇಳಬೇಕೆಂದರೆ, ಜವಾನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಅತಿಥಿ ಪಾತ್ರಕ್ಕೆ ಹೆಚ್ಚು ಜಾಗ ಸಿಕ್ಕಿದ್ದು ಈ ಬಗ್ಗೆ ನಯನತಾರಾ ಅಸಮಾಧಾನಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ನಯನತಾರಾ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ನಟ ಶಾರುಖ್ ಖಾನ್ ಟ್ವಿಟರ್‌ನಲ್ಲಿ ಮೌನ ಮುರಿದಿದ್ದಾರೆ.

shah-rukh-khan-reaction-on-nayanthara

ನಯನತಾರಾ ಅವರ ಸ್ಕ್ರೀನ್ ಟೈಮ್ ಬಗ್ಗೆ ಶಾರುಖ್ ಮಾತು!

'ಎಸ್‌ಆರ್‌ಕೆಯನ್ನು ಕೇಳಿ' ಸೆಷನ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಶಾರುಖ್ ಖಾನ್, ಅವರ ಪಾತ್ರಕ್ಕೆ ಇನ್ನು ಹೆಚ್ಚು ಸಮಯ ಸಿಗಬೇಕಿತ್ತು ಎಂದಿದ್ದಾರೆ. ಅಭಿಮಾನಿಯೊಬ್ಬರು ಶಾರುಖ್ ಖಾನ್ ಮತ್ತು ಚಿತ್ರದಲ್ಲಿ ನಟಿಸಿರುವ ಮಗು ಸೂಜಿ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದು, ಸೂಜಿ ಮತ್ತು ಆಜಾದ್ ಪಾತ್ರ ಇಷ್ಟಪಟ್ಟೆ ಎಂದು ಹೇಳಿದ್ದಾರೆ.

"ಸಿನಿಮಾದಲ್ಲಿ ಒಂಟಿ ತಾಯಿಯ ಕಥಾಹಂದರವನ್ನು ತುಂಬಾ ಸೂಕ್ಷ್ಮವಾಗಿ ಇಡಲಾಗಿದೆ. ನಿಜವಾಗಿಯೂ ಸೂಜಿ ಅವರೊಂದಿಗಿನ ಆಜಾದ್ ಅವರ ಬಾಂಧವ್ಯವನ್ನು ನಾನು ಇಷ್ಟಪಟ್ಟೆ. ಎಲ್ಲಾ ವರ್ಗದ ಮಹಿಳೆಯರನ್ನು ಪ್ರತಿನಿಧಿಸಿದ್ದಕ್ಕಾಗಿ ಧನ್ಯವಾದಗಳು. ಲವ್ ಯು ಶಾರುಖ್ ಖಾನ್" ಎಂದು ಅಭಿಮಾನಿ ಹೇಳಿದ್ದಾರೆ.

shah-rukh-khan-reaction-on-nayanthara

ಇದಕ್ಕೆ ಉತ್ತರಿಸಿರುವ ಅವರು, "ನರ್ಮದಾ ಒಂಟಿ ತಾಯಿಯ ಕಥೆ ಅದ್ಭುತವಾಗಿದೆ ಎಂದು ನನಗೂ ಅನಿಸಿತು. ದುರದೃಷ್ಟವಶಾತ್ ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಸ್ಕ್ರೀನ್ ಟೈಮ್ ಕೊಡಲಾಗಲಿಲ್ಲ. ಆದರೂ ಅವರ ಪ್ರೆಸೆನ್ಸ್ ಅದ್ಭುತವಾಗಿದೆ" ಎಂದು ಹೇಳಿದ್ದಾರೆ.

'ಜವಾನ್' ನಲ್ಲಿ ಕಡಿಮೆ ಸ್ಕ್ರೀನ್ ಟೈಮ್, ನಯನತಾರಾ ಅಸಮಾಧಾನಗೊಂಡಿದ್ದಾರೆಯೇ?

ನಯನತಾರಾ 'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ, ಚಿತ್ರದಲ್ಲಿನ ತನ್ನ ಪಾತ್ರವನ್ನು ಹೆಚ್ಚು ಕತ್ತರಿಸಿರುವುದು ಮತ್ತು ಅವರ ಪಾತ್ರವನ್ನು ಕಡಿಮೆ ಮಾಡಿರುವ ಕಾರಣ ನಿರ್ದೇಶಕ ಅಟ್ಲಿ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿ ಎಲ್ಲೇಡೆ ಹರಡಿದೆ.

"ಚಿತ್ರದಲ್ಲಿ ತನ್ನ ಪಾತ್ರವನ್ನು ಹಲವೆಡೆ ಕತ್ತರಿಸಿದ ಕಾರಣ ಅವರು ಅಟ್ಲಿ ಮೇಲೆ ತುಂಬಾ ಅಸಮಾಧಾನಗೊಂಡಿದ್ದಾರೆ. ಅಲ್ಲದೆ, ದೀಪಿಕಾ ಪಡುಕೋಣೆ ಅವರ ಪಾತ್ರವನ್ನು ಹೆಚ್ಚು ಹೈಲೆಟ್ ಮಾಡಲಾಗಿದೆ. ನಯನತಾರಾ ಅವರ ಭಾಗವನ್ನು ಹೆಚ್ಚು ಸೈಡ್ ಲೈನ್ ಮಾಡಲಾಗಿದೆ" ಎಂದು ಮೂಲವೊಂದು ತಿಳಿಸಿದೆ. ಈ ಬಗ್ಗೆ ನಯನತಾರಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

More from Filmibeat

English summary
Shah Rukh Khan reaction on Nayanthara's less screen time in Jawan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X