»   » ಶಾರುಖ್ ರಿಲೀಸ್ ಮಾಡಿದ್ರು 'ಇಟ್ ಹ್ಯಾಪೆಂಡ್ ಒನ್ ನೈಟ್' ಫಸ್ಟ್ ಲುಕ್

ಶಾರುಖ್ ರಿಲೀಸ್ ಮಾಡಿದ್ರು 'ಇಟ್ ಹ್ಯಾಪೆಂಡ್ ಒನ್ ನೈಟ್' ಫಸ್ಟ್ ಲುಕ್

Posted By:
Subscribe to Filmibeat Kannada

ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ 'ಇಟ್ ಹ್ಯಾಪೆಂಡ್ ಒನ್ ನೈಟ್' ಚಿತ್ರದ ಫಸ್ಟ್ ಲುಕ್ ಅನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಬಿಡುಗಡೆ ಮಾಡಿದ್ದಾರೆ.

1969 ರ ಯಶ್ ಚೋಪ್ರಾ ರವರ ನಿರ್ದೇಶನದ ಮರ್ಡರ್ ಮಿಸ್ಟರಿ ಕುರಿತ 'ಇತ್ತೆಫಾಕ್' ಚಿತ್ರದ ರಿಮೇಕ್ ಹಕ್ಕನ್ನು ಶಾರುಖ್ ಖಾನ್ ಖರೀದಿಸಿದ್ದರು. ಈ ಚಿತ್ರಕ್ಕೆ ಈಗ 'ಇಟ್ ಹ್ಯಾಪೆನ್ಡ್ ಒನ್ ನೈಟ್' ಎಂಬ ಟೈಟಲ್ ನೀಡಿ ಈಗಿನ ಜನರೇಷನ್‌ಗೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿ ಶಾರುಖ್ ಖಾನ್ ರವರು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Shah Rukh Khan released 'It Happened One Night' movie first look

ಯಶ್ ಚೋಪ್ರಾ ರವರು ನಿರ್ದೇಶನ ಮಾಡಿದ್ದ 'ಇತ್ತೆಪಾಕ್' ಚಿತ್ರದಲ್ಲಿ ಹಿರಿಯ ನಟ ರಾಜೇಶ್ ಖನ್ನಾ, ನಂದ, ಸುಜಿತ್ ಕುಮಾರ್ ರವರು ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು. ಈ ಚಿತ್ರ ಒಂದು ಕೊಲೆ ಹಿಂದಿನ ರಹಸ್ಯದ ಕುರಿತದ್ದಾಗಿದ್ದು, ಕ್ಷಣ ಕ್ಷಣಕ್ಕೂ ಪ್ರೇಕ್ಷಕನಿಗೆ ಕುತೂಹಲ ಹುಟ್ಟಿಸುವ ಸಿನಿಮಾ ಆಗಿತ್ತು.

ವಿಭಿನ್ನ ಕಥೆಯನ್ನೊಳಗೊಂಡ ಈ ಚಿತ್ರದ ಫಸ್ಟ್ ಲುಕ್ ಸಹ ಅಷ್ಟೇ ವಿಭಿನ್ನವಾಗಿದ್ದು ಎಂತಹವರಿಗೂ ಕುತೂಹಲ ಕೆರಳಿಸುತ್ತದೆ. 'ಇಟ್ ಹ್ಯಾಪನ್ಡ್ ಒನ್ ನೈಟ್' ನವೆಂಬರ್ 3 ರಂದು ಬಿಡುಗಡೆ ಆಗಲಿದೆ ಎಂದು ತಿಳಿಯಲಾಗಿದೆ. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಕ್ಷಯ್ ಖನ್ನಾ ರವರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದಿದೆ.

English summary
Shah Rukh Khan has taken his twiiter account to release Sidharth Malhotra and Sonakshi Sinha starrer 'It Happened One Night' film first look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada