»   » ಶಾರೂಖ್ ಖಾನ್ ಮಗಳ ಈ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್

ಶಾರೂಖ್ ಖಾನ್ ಮಗಳ ಈ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್

Written By:
Subscribe to Filmibeat Kannada

ಬಾಲಿವುಡ್ ನಟ ಶಾರೂಖ್ ಖಾನ್ ಅವರ ಮುದ್ದು ಮಗಳು ಸುಹಾನಾ ಖಾನ್ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಅದಕ್ಕೆ ಕಾರಣ ಆಗಿರುವುದು ಸುಹಾನಾ ಖಾನ್ ಅವರ ಈ ಪೋಟೋ.

ಸೋಷಿಯಲ್ ಮೀಡಿಯಾದಲ್ಲಿ ಈಗ ಸುಹಾನಾ ಅವರ ಒಂದು ಫೋಟೋ ಸಖತ್ ವೈರಲ್ ಆಗಿದೆ. ಈಜುಕೊಳದಲ್ಲಿ ನೇರಳೆ ಬಣ್ಣದ ಸ್ವಿಮ್ ಸೂಟ್ ಧರಿಸಿರುವ ಸುಹಾನಾ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಅಂದಹಾಗೆ, ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಸುಹಾನ ಫ್ಯಾನ್ ಕ್ಲಬ್‌ವೊಂದು ಈ ಫೋಟೋವನ್ನು ಶೇರ್ ಮಾಡಿತ್ತು. ನಂತರ ಈ ಫೋಟೋ ಎಲ್ಲ ಕಡೆ ಹರಿದಾಡಿದೆ.

 Shah Rukh Khan's Daughter Suhana's Pool Pic Goes Viral

ಸುಹಾನಾ ಖಾನ್ ಅವರ ಈ ಫೋಟೋ ನೋಡಿದವರು ಅಪ್ಪನ ರೀತಿ ಅವರು ಸಿನಿಮಾರಂಗಕ್ಕೆ ಬರಬೇಕು ಎನ್ನುತ್ತಿದ್ದಾರೆ. ಆದರೆ ಸದ್ಯ ಸುಹಾನಾ ಮುಂಬೈನ ಧೀರೂಬಾಯ್ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. ಮಗಳ ಚಿತ್ರರಂಗದ ಎಂಟ್ರಿಯ ಬಗ್ಗೆ ಈಗಾಗಲೇ ಶಾರೂಖ್ ಖಾನ್ ಕೂಡ ಮಾತನಾಡಿದ್ದು, ಮಗಳ ಆಸೆಗೆ ನನ್ನ ಆಕ್ಷೇಪ ಇಲ್ಲ ಎಂದಿದ್ದಾರೆ.

English summary
Actor Shah Rukh Khan's Daughter Suhana Khan's Pool Pic Goes Viral.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X