ಗಲ್ಲಾಪೆಟ್ಟಿಗೆಯಲ್ಲಿ 'ಡುಮ್ಕಿ' ಹೊಡೆದ 'ಡಂಕಿ' ಒಟಿಟಿಗೆ ; ಪ್ರೇಮಿಗಳ ದಿನಕ್ಕೆ ಕಿಂಗ್ ಖಾನ್ ಗಿಫ್ಟ್ ..!

ಸಲಾರ್ ಮುಂದೆ ಬಂದ ಡಂಕಿ ಡುಮ್ಕಿ ಹೊಡೆಯಿತು ಎಂಬ ಮಾತನ್ನ ಅನೇಕರು ಹಿಂದೆ ಮಾತನಾಡಿದ್ದು ಇದೆ. ಆದರೆ ವಾಸ್ತವದಲ್ಲಿ ಡಂಕಿ Profitable Venture ಅನ್ನುವುದು ಹಿಂದಿ ಪಂಡಿತರ ಹಾಗೂ ಚಿತ್ರತಂಡದವರ ಅಂಬೋಣ. ಈ ವಾದ-ವಿವಾದ ಏನೇ ಇರಲಿ, ಗಲ್ಲಾಪೆಟ್ಟಿಗೆಯಲ್ಲಿ ಹತ್ ಹತ್ರ ಐನ್ನೂರು ಕೋಟಿಯನ್ನ ಲೂಟಿ ಮಾಡಿದ್ದ ಡಂಕಿ ಸದ್ಯಕ್ಕೆ ಒಟಿಟಿಗೆ ಲಗ್ಗೆ ಇಟ್ಟಿದೆ. ಪ್ರೇಮಿಗಳ ದಿನದ ಪ್ರಯುಕ್ತ, ನೆಟ್ ಪ್ಲಿಕ್ಸ್ ನಲ್ಲಿ ಪ್ರಸಾರವಾಗಿದೆ.

ಚಿತ್ರಮಂದಿರಗಳಲ್ಲಿ ಸಿಗಬೇಕಿದ್ದ ಪ್ರೀತಿ, ಡಂಕಿ ಚಿತ್ರಕ್ಕೆ ಒಟಿಟಿಯಲ್ಲಿ ಸಿಗುತ್ತೆ ಅನ್ನುವ ವಿಶ್ವಾಸ ಚಿತ್ರತಂಡಕ್ಕೆ ಇದೆ. ಈ ನಂಬಿಕೆ ನಿಜವಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆಯಾದರೂ, ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಡಂಕಿ ಕುರಿತು ಚರ್ಚೆಯಂತೂ ನಡೆಯುತ್ತಿದೆ.

Shah Rukh Khan’s Dunki is now streaming on this OTT platform

ಡಂಕಿ ಕಥೆ ಏನು..?

ರಾಜ್‌ಕುಮಾರ್ ಹಿರಾನಿ, ಅಭಿಜಾತ್ ಜೋಷಿ, ಕನ್ನಿಕಾ ದಿಲ್ಲೋನ್ ಅವರ ಲೇಖನಿಯಲ್ಲಿ ಹೊರ ಬಂದ ಡಂಕಿಯಲ್ಲಿ ಅಕ್ರಮ ವಲಸೆಯ ಕಥೆಯನ್ನ ಹೇಳಲಾಗಿದೆ. ಇದರ ನಡುವೆ ದೇಶಪ್ರೇಮ, ಪ್ರೀತಿ, ಸ್ನೇಹಿತರ ನಡುವಿನ ಬಾಂಧವ್ಯ ಎಲ್ಲವನ್ನೂ ಸಮವಾಗಿ ಬೆರೆಸಲಾಗಿದೆ. ಪಂಜಾಬ್ ನ ಸುತ್ತ ಮುತ್ತ ತೆರೆದುಕೊಳ್ಳುವ ಕಥೆಯಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್, ಅನಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

2023 ಶಾರುಖ್ ಪಾಲಿಗೆ ಲಕ್ಕಿ ವರ್ಷ

ಜೀರೋ ಚಿತ್ರದ ಸೋಲಿನ ನಂತರ ಹೆಚ್ಚು ಕಡಿಮೆ ಐದು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಶಾರುಖ್ ಖಾನ್, 2023ರಲ್ಲಿ ಮೈ ಕೊಡವಿ ಎದ್ದು ನಿಂತರು. ಪಠಾಣ್ ಹಾಗೂ ಜವಾನ್ ಚಿತ್ರಗಳ ಮೂಲಕ ಹೊಚ್ಚ ಹೊಸ ದಾಖಲೆ ಬರೆದರು. ಸಾವಿರ ಕೋಟಿಯ ಒಡೆಯ ಅನಿಸಿಕೊಂಡರು.

Shah Rukh Khan’s Dunki is now streaming on this OTT platform

ಈ ಕಾರಣಕ್ಕೆ ಡಂಕಿ ಮೇಲೆ ಕೂಡ ಇಂಥಹದ್ದೇ ನಿರೀಕ್ಷೆ ಇತ್ತು. ಪಠಾಣ್ ಹಾಗೂ ಜವಾನ್ ಚಿತ್ರದಂತೆಯೇ ಡಂಕಿ ಕೂಡ 1000 ಕೋಟಿ ಗಳಿಸುವ ಭರವಸೆ ಹಿಂದಿ ಉದ್ಯಮಕ್ಕೆ ಇತ್ತು. ಆದರೆ ಮಾಸ್ ಅಂಗಳದಿಂದ ಶಾರುಖ್ ಕ್ಲಾಸ್ ಅಂಗಳಕ್ಕೆ ಜಿಗಿದಿದ್ದರು.

ಸಲಾರ್ ಎದುರು ತಮ್ಮ ಚಿತ್ರವನ್ನ ಬಿಡುಗಡೆ ಮಾಡಿದರು. ಎಡವಿದರು. ಸಲಾರ್ ಜೊತೆ ಬಿಡುಗಡೆ ಮಾಡುವ ಧೈರ್ಯವನ್ನ ಮಾಡದೇ ಇದ್ದಿದ್ದರೆ ಚಿತ್ರದ ಗಳಿಕೆ 500 ಕೋಟಿಯ ಗಡಿಯನ್ನ ಪಾರು ಮಾಡುವ ಸಾಧ್ಯತೆ ಇತ್ತು.

More from Filmibeat

English summary
In a surprise announcement at midnight of February 15, Netflix India declared that Shah Rukh Khan’s Dunki has started streaming on its OTT platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X