ಶಾರುಖ್ ಖಾನ್ 'ಫ್ಯಾನ್' ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರ 'ಫ್ಯಾನ್' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ದಾಖಲೆ ಸೃಷ್ಟಿಸಿದೆ.
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರು ದ್ವಿಪಾತ್ರದಲ್ಲಿ ನಟಿಸಿರುವ 'ಫ್ಯಾನ್' ಸಿನಿಮಾ ಮೊದಲ ದಿನವೇ ಬರೋಬ್ಬರಿ 19.9 ಕೋಟಿ ಸಂಪಾದಿಸುವ ಮೂಲಕ ಬಾಕ್ಸಾಫೀಸ್ ಉಡೀಸ್ ಮಾಡಿದೆ.[ಶಾರುಖ್ 'ಫ್ಯಾನ್'ಗೆ ಫ್ಯಾನ್ ಆಗಿ ಚಪ್ಪಾಳೆ ತಟ್ಟಿದ್ದಾರೆ ವಿಮರ್ಶಕರು!]

ಪ್ರಚಾರ ಮತ್ತು ಜಾಹೀರಾತು ಸೇರಿದಂತೆ ಸುಮಾರು 105 ಕೋಟಿ ವೆಚ್ಚದಲ್ಲಿ ತಯಾರಾದ 'ಫ್ಯಾನ್' ಸಿನಿಮಾ ದೇಶದಾದ್ಯಂತ 3500 ಸ್ಕ್ರೀನ್ ಗಳಲ್ಲಿ ಹಾಗೂ ಜಾಗತಿಕವಾಗಿ 4600 ಸ್ಕ್ರೀನ್ ಗಳಲ್ಲಿ ತೆರೆ ಕಂಡಿತ್ತು.
'ಯಶ್ ರಾಜ್ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಮೂಡಿಬಂದಿದ್ದ ಈ ಸಿನಿಮಾ ಸ್ಟಾರ್ ನಟ ಆರ್ಯನ್ ಖನ್ನಾ ಮತ್ತವನ ಹುಚ್ಚು ಅಭಿಮಾನಿ ಗೌರವ್ ನಡುವಿನ ಪ್ರೀತಿ-ಘರ್ಷಣೆಯ ಕಥೆ ಹೊಂದಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ.[ಚಿತ್ರಗಳಲ್ಲಿ: ಶಾರುಖ್ 'ಫ್ಯಾನ್' ನೋಡಿ ಫ್ಯಾನ್ಸ್ ಆದ ಬಾಲಿವುಡ್ ಸ್ಟಾರ್ಸ್]
ಬರೀ ಶಾರುಖ್ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ನ ಸ್ಟಾರ್ ನಟರೂ ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ಟಾರ್ ನಟರೂ ಶಾರುಖ್ 'ಫ್ಯಾನ್' ಗೆ 'ಫ್ಯಾನ್ಸ್' ಆಗಿದ್ದಾರೆ.[ಶಾರುಖ್ ಖಾನ್ 'ಫ್ಯಾನ್' ಬಗ್ಗೆ ಬಾಲಿವುಡ್ ತಾರೆಯರ ಟ್ವೀಟ್]
ಶಾರುಖ್ ಖಾನ್ ಅವರ ಜೊತೆ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದ ವಾಲ್ಯುಷ ಡಿ ಸೋಜಾ ಅವರ ಕಣ್ಣು ಕುಕ್ಕುವ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ..
-ನಟಿ ವಾಲ್ಯುಷ ಡಿ ಸೋಜಾ ಅವರ ಫೋಟೋ ಗ್ಯಾಲರಿ


Click it and Unblock the Notifications











