ಶಾರುಖ್ ಖಾನ್ ಎಂಟ್ರಿ ಕೊಟ್ಮೇಲೆ ಮಂಕಾಗುತ್ತಂತೆ ಸೌತ್?

ನಟ ಕಿಂಗ್ ಖಾನ್ ಶಾರುಖ್ ಖಾನ್ ದೊಡ್ಡ ಬ್ರೇಕ್ ಬಳಿಕ ಮತ್ತೆ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಒಮ್ಮೆಲೆ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ ನಟ ಶಾರುಖ್ ಖಾನ್. ಸೋಲುಗಳನ್ನು ಉಂಡ ಬಳಿಕ ಶಾರುಖ್ ಬ್ರೇಕ್ ತೆಗೆದುಕೊಂಡಿದ್ದರು.

ಹಾಗಾಗಿ ಈಗ ಮುನ್ನೆಚ್ಚರಿಕೆಯಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹಾಗಾಗಿ ಶಾರುಖ್ ಖಾನ್ ಚಿತ್ರಗಳ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು ಹುಟ್ಟಿಕೊಂಡಿವೆ.

ಇನ್ನೂ ಶಾರುಖ್ ಖಾನ್ ಮೂರು ಸಿನಿಮಾಗಳು ಪ್ರಕಟಗೊಂಡಿವೆ. ಭರ್ಜರಿ ತಯಾರಿ ಜೊತೆಗೆ ಶಾರುಖ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ಹಾಗಾಗಿ ಒಮ್ಮೆ ಶಾರುಖ್ ಸಿನಿಮಾಗಳು ಸದ್ದು ಮಾಡಲು ಶುರು ಮಾಡಿದರೆ ಸೌತ್ ಸಿನಿಮಾಗಳು ಸೈಲೆಂಟ್ ಆಗಿ ಬಿಡುತ್ತವೆ ಎನ್ನಲಾಗುತ್ತಿದೆ.

ಸೌತ್ ಫಿಲ್ಮ್ vs ಶಾರುಖ್ ಖಾನ್!

ಸೌತ್ ಫಿಲ್ಮ್ vs ಶಾರುಖ್ ಖಾನ್!

ನಟ ಶಾರುಖ್ ಖಾನ್ ದೊಡ್ಡ ಬ್ರೇಕ್ ಬಳಿಕ ವಾಪಾಸ್ ಆಗಿರುವುದು, ಅವರ ಅಭಿಮಾನಿಗಳಲ್ಲಿ, ಸಿನಿಮಾರಂಗದಲ್ಲಿ ಸಂತಸವನ್ನುಂಟು ಮಾಡಿದೆ. ಇನ್ನು ಶಾರುಖ್ ಸಿನಿಮಾಗಳು ಪ್ರಕಟವಾಗುತ್ತಲೇ ಶಾರುಖ್ ಖಾನ್ ವರ್ಸಸ್ ಸೌತ್ ಸಿನಿಮಾಗಳು ಎನ್ನುವ ವಿಚಾರ ಟ್ರೆಂಡಿಂಗ್ ಆಗುತ್ತಿದೆ. ಅಂದರೆ ಶಾರುಖ್ ಖಾನ್ ಸಾಲು-ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಾಗಾಗಿ, ಸೌತ್ ಸಿನಿಮಾಗಳನ್ನು ಹೆಡೆಮುರಿ ಕಟ್ಟುತ್ತಾರೆ ಎನ್ನುವ ಟ್ರೋಲ್‌ಗಳು ಹುಟ್ಟಿಕೊಂಡಿವೆ. 'ನಿಜವಾದ ರಾಜ ಬರುವ ತನಕ ಮಾತ್ರವೇ, ಎಲ್ಲರೂ ರಾಜರಾಗಿರುತ್ತಾರೆ' ಎನ್ನುವ ಕಾಮೆಂಟ್ ವೈರಲ್ ಆಗುತ್ತಿದ್ದು, 'ಪುಷ್ಪ', 'ಕೆಜಿಎಫ್ 2', 'RRR' ಚಿತ್ರದ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ.

ಶಾರುಖ್ ಖಾನ್‌ಗೆ ಗೆಲುವು ಅನಿವಾರ್ಯ!

ಶಾರುಖ್ ಖಾನ್‌ಗೆ ಗೆಲುವು ಅನಿವಾರ್ಯ!

ಇನ್ನು ಮತ್ತೊಂದು ಕಡೆ ನಟ ಶಾರುಖ್ ಖಾನ್‌ಗೆ ಗೆಲುವು ಅನಿವಾರ್ಯ ಆಗಿದೆ. ಶಾರುಖ್ ಖಾನ್ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳುವುದಕ್ಕೂ ಮೊದಲು ಸಾಲು ಸಾಲು ಸೋಲಿನ ರುಚಿಯನ್ನು ಕಂಡಿದ್ದಾರೆ. ಹಾಗಾಗಿ ಕಮ್‌ ಬ್ಯಾಕ್ ಮಾಡಿದ ಬಳಿಕ ಅವರಿಗೆ ಗೆಲುವಿನ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಾರಿ ಶಾರುಖ್ ಖಾನ್ ಸೋತರೆ ಮತ್ತೆ ಎಲ್ಲಾ ನಿರೀಕ್ಷೆಗಳು ಕೂಡ ಹುಸಿಯಾಗಿ ಬಿಡುತ್ತವೆ.

ಜವಾನ್, ಡಂಕಿ, ಪಠಾಣ್ ಕಥೆಯೇನು?

ಜವಾನ್, ಡಂಕಿ, ಪಠಾಣ್ ಕಥೆಯೇನು?

ಒಂದು ಸಿನಿಮಾ ರಿಲೀಸ್ ಮುನ್ನವೇ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡುತ್ತಿದ್ದಾರೆ ಶಾರುಖ್. ಈವರೆಗೆ ಒಟ್ಟು ಮೂರು ಸಿನಿಮಾಗಳು ಅನೌನ್ಸ್ ಆಗಿವೆ. ಅದರಲ್ಲಿ 'ಪಠಾಣ್' ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ರಿಲೀಸ್ ದಿನಾಂಕವನ್ನು ಕೂಡ ನಿಗದಿ ಮಾಡಿಕೊಂಡಿದೆ. 2023 ಜನವರಿ 25ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ರಾಜಕುಮಾರ್ ಹಿರಾನಿ ಜೊತೆಗೆ 'ಡಂಕಿ' ಎನ್ನುವ ಚಿತ್ರವನ್ನು ಘೋಷಿಸಲಾಗಿದೆ. ಹಾಗೆ ಸೌತ್ ಸ್ಟಾರ್ ನಿರ್ದೇಶಕ ಅಟ್ಲಿ ಜೊತೆಗೆ 'ಜವಾನ್' ಸಿನಿಮಾ ಪ್ರಕಟಗೊಂಡಿದೆ.

'ಕೆಜಿಎಫ್' ಮುಂದೆ ಜೀರೋ ಆಗಿದ್ದ ಶಾರುಖ್!

'ಕೆಜಿಎಫ್' ಮುಂದೆ ಜೀರೋ ಆಗಿದ್ದ ಶಾರುಖ್!

ಹಾಗಂತ ಶಾರುಖ್ ಖಾನ್ ಸಿನಿಮಾಗಳು ಬರಲು ಶುರುವಾದರೆ ಸೌತ್ ಸಿನಿಮಾರಂಗ ಮಂಕಾಗುತ್ತದೆ ಎನ್ನುವುದು ಸುಳ್ಳು. ಯಾಕೆಂದರೆ ಈ ಹಿಂದೆ ಶಾರುಖ್ ಖಾನ್ ಸೌತ್ ಚಿತ್ರರಂಗ ಅದರಲ್ಲೂ ಕನ್ನಡದ 'ಕೆಜಿಎಫ್' ಸಿನಿಮಾದ ಮುಂದೆ ಮಂಡಿಯೂರಿದ್ದು ಗೊತ್ತೇ ಇದೆ. 'ಕೆಜಿಎಫ್' ಮೊದಲ ಚಾಪ್ಟರ್ ರಿಲೀಸ್ ಆದಾಗ ಶಾರುಖ್ ಅಭಿನಯದ ಝೀರೋ ಅಕ್ಷರಶಃ ಝೀರೋ ಆಗಿಬಿಟ್ಟಿತ್ತು. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದೆ ಪ್ರೇಕ್ಷಕರ ಮನ ಗೆಲ್ಲಲು ಒದ್ದಾಡಿತ್ತು ಶಾರುಖ್ ಸಿನಿಮಾ. ಹಾಗಾಗಿ ಶಾರುಖ್ ಖಾನ್ ಅಖಾಡಕ್ಕೆ ಇಳಿದರೆ ಸೌತ್ ಸಿನಿಮಾಗಳ ಜೊತೆಗೆ ಸ್ಪರ್ಧೆ ಮಾಡಬೇಕು ಅಷ್ಟೇ.

More from Filmibeat

English summary
Shah Rukh Khan's Jawaan, Dunki, Pathaan Is On The Way To Beat South films, Is It Possible, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X