ಹ್ಯಾಟ್ರಿಕ್ ಹಿಟ್ ಕೊಟ್ಟು 3 ವರ್ಷಗಳ ಬಳಿಕ ತೆರೆಮೇಲೆ ಶಾರುಖ್; 'ಕಿಂಗ್' ರಿಲೀಸ್ ಡೇಟ್ ಫಿಕ್ಸ್

ಸ್ಟಾರ್ ನಟರ ಸಿನಿಮಾಗಳು ಈಗ ತೆರೆಗೆ ಬರುವುದು ಅಷ್ಟು ಸುಲಭವಲ್ಲ. ವರ್ಷಗಳ ಶ್ರಮ ಅದರ ಹಿಂದೆ ಇರುತ್ತದೆ. ಹಿಟ್ ಸಿನಿಮಾ ಕೊಟ್ಟವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಾರೆ. ಆದರೆ ಶಾರುಖ್ ಖಾನ್ ಮಾತ್ರ ವರ್ಷಕ್ಕೆ ಒಂದು ಸಿನಿಮಾ ಎನ್ನುವ ನಿಯಮವನ್ನು ಮರೆತುಬಿಟ್ಟಿದ್ದಾರೆ.

'ಜೀರೊ' ಸಿನಿಮಾ ಸೋಲಿನ ಬಳಿಕ 4 ವರ್ಷ ಸೈಲೆಂಟ್ ಆಗಿಬಿಟ್ಟಿದ್ದರು. ಬಳಿಕ ಒಂದೇ ವರ್ಷದಲ್ಲಿ 3 ಸಿನಿಮಾ ಕೊಟ್ಟಿದ್ದರು. 'ಪಠಾಣ್', 'ಜವಾನ್' ಹಾಗೂ 'ಡಂಕಿ' ಚಿತ್ರಗಳು ಒಂದೇ ವರ್ಷದಲ್ಲಿ ತೆರೆಗಪ್ಪಳಿಸಿ ಗೆದ್ದಿದ್ದವು. ನಂತರ ಮತ್ತೆ ಕಿಂಗ್ ಖಾನ್ ಸುಮ್ಮನಾಗಿಬಿಟ್ಟರು. ಅಂತೂ ಇಂತೂ ತಮ್ಮ ಮುಂದಿನ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿದ್ದಾರೆ. ಆದರೆ ಸದ್ಯಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿಲ್ಲ.

Shah Rukh Khan s King Set to Rule Christmas 2026 SRK Siddharth Reunite for a Mega Action Thriller

ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಕಿಂಗ್' ಎಂಬ ಚಿತ್ರದಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದಾರೆ. ತಮ್ಮದೇ ಬ್ಯಾನರ್ ಅಡಿಯಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಮಗಳು ಸುಹಾನಾ ಖಾನ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಜಾಕಿ ಶ್ರಾಫ್, ರಾಣಿ ಮುಖರ್ಜಿ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ ಅಂದರೆ ಡಿಸೆಂಬರ್ 24ಕ್ಕೆ 'ಕಿಂಗ್' ರಾಜ್ಯಭಾರ ಶುರುವಾಗಲಿದೆ.

ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ 'ಕಿಂಗ್' ಸಿನಿಮಾ ನಿರ್ಮಾಣವಾಗ್ತಿದೆ. ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವುದು ವಿಶೇಷ. ಕಳೆದ ವರ್ಷ ಮೇನಲ್ಲೇ 'ಕಿಂಗ್' ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ಮುಂಬೈ ಹಾಗೂ ವರ್ಸಾವ್‌ ಲೊಕೇಶನ್‌ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಕ್ರಿಸ್‌ಮಸ್ ಹೊಸ ವರ್ಷ ದೊಡ್ಡ ಸಿನಿಮಾಗಳ ಬಿಡುಗಡೆಗೆ ಹೇಳಿ ಮಾಡಿಸಿದ ಸಮಯ. ಪ್ರತಿ ಬಾರಿ ಬಾಲಿವುಡ್ ದೊಡ್ಡ ಸಿನಿಮಾಗಳು ಕ್ರಿಸ್‌ಮಸ್ ಸಂಭ್ರಮ ಹೆಚ್ಚಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದ್ದವು. ಇತ್ತೀಚೆಗೆ ಅದು ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ಶಾರುಖ್ ಆ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

'ಕಿಂಗ್' ಚಿತ್ರದ ಮೂಲಕ ಶಾರುಖ್ ಪುತ್ರಿ ಸುಹಾನ ದೊಡ್ಡಮಟ್ಟದಲ್ಲಿ ಬೆಳ್ಳಿಪರದೆಗೆ ಪರಿಚಿತರಾಗುತ್ತಿದ್ದಾಳೆ. 'ದಿ ಆರ್ಚೀಸ್' ಎಂಬ ಚಿತ್ರದಲ್ಲಿ ಆಕೆ ಈಗಾಗಲೇ ನಟಿಸಿದ್ದಾಳೆ. ಆ ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಹಾಗಾಗಿ 'ಕಿಂಗ್' ಸಿನಿಮಾ ಮೂಲಕ ಬೆಳ್ಳಿಪರದೆಗೆ ಪರಿಚಿತಳಾಗುತ್ತಿದ್ದಾಳೆ. 'ಪಠಾನ್' ಬಳಿಕ ದೀಪಿಕಾ ಮತ್ತೆ ಕಿಂಗ್‌ ಖಾನ್ ಜೋಡಿಯಾಗಿದ್ದಾರೆ.

ಶಾರುಖ್- ಡಿಪ್ಪಿ ಜೋಡಿಯ ಸಿನಿಮಾಗಳೆಲ್ಲಾ ಗೆದ್ದಿವೆ. 'ಓಂ ಶಾಂತಿ ಓಂ', 'ಹ್ಯಾಪಿ ನ್ಯೂ ಇಯರ್', 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿಗೆ ಮೋಡಿ ಮಾಡಿದ್ದರು. 'ಜವಾನ್' ಚಿತ್ರದಲ್ಲಿ ಕೂಡ ದೀಪಿಕಾ ಅತಿಥಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಹಾಗಾಗಿ ಇವರಿಬ್ಬರ ಕಾಂಬಿನೇಷನ್ 'ಕಿಂಗ್' ಸಿನಿಮಾ ಕೂಡ ಕುತೂಹಲ ಕೆರಳಿಸಿದೆ.

ಬಾಲಿವುಡ್ ಸಿನಿಮಾಗಳ ಕಥೆ ಮುಗಿದೇ ಹೋಯ್ತು ಎನ್ನುವ ಸಮಯದಲ್ಲಿ 'ಧುರಂಧರ್' ಹಾಗೂ 'ಬಾರ್ಡರ್-2' ರೀತಿಯ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡ್ತಿವೆ. ಮುಂದೆ 'ಧುರಂಧರ್'-2 ಸೇರಿ ದೊಡ್ಡ ದೊಡ್ಡ ಸಿನಿಮಾಗಳು ಈ ವರ್ಷ ಬಿಡುಗಡೆಗೆ ಸಜ್ಜಾಗುತ್ತಿವೆ. ವರ್ಷದ ಕೊನೆಗೆ 'ಕಿಂಗ್' ಶಾರುಖ್ ಖಾನ್ ಆಗಮನವಾಗಲಿದೆ.

'ಬ್ಯಾಂಗ್ ಬ್ಯಾಂಗ್', 'ವಾರ್', 'ಪಠಾನ್', 'ಫೈಟರ್' ಹೀಗೆ ಹಿಟ್ ಸಿನಿಮಾಗಳನ್ನು ಕೊಟ್ಟ ಸಿದ್ದಾರ್ಥ್ ಮತ್ತೊಮ್ಮೆ ಶಾರುಖ್ ಜೊತೆ ಕೈಜೋಡಿಸಿದ್ದಾರೆ. ಹಾಗಾಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.

More from Filmibeat

Read more about: shahrukh khan deepika padukone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X