For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್; ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ ನಕಲಿ ಶಾರುಖ್ ಖಾನ್

  |

  ತಮ್ಮ ನೆಚ್ಚಿನ ನಟನ ಹಾಗೆ ಕಾಣಿಸಬೇಕೆಂದು ಅಭಿಮಾನಿಗಳು ಕಸರತ್ತು ಮಾಡುತ್ತಿರುತ್ತಾರೆ. ಹೇರ್ ಸ್ಟೈಲ್, ಡ್ರೆಸ್ ಹೀಗೆ ಪ್ರತಿಯೊಂದು ವಿಚಾರದಲ್ಲೂ ಅವರ ಇಷ್ಟದ ನಟರ ಸ್ಟೈಲ್ ಕಾಪಿ ಮಾಡಿ ಅವರ ಹಾಗೆ ಕಾಣಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಅಷ್ಟೆಲ್ಲ ಕಷ್ಟ ಪಡುವುದೇ ಬೇಡ. ನೋಡೋಕೆ ಥೇಟ್ ಶಾರುಖ್ ಖಾನ್ ಹಾಗೆ ಕಾಣಿಸುತ್ತಿದ್ದಾರೆ. ಬಾಲಿವುಡ್ ಗೆ ಒಬ್ಬರೇ ಕಿಂಗ್ ಖಾನ್ ಶಾರುಖ್ ಖಾನ್. ಆದರೀಗ ಶಾರುಖ್ ಹಾಗೆ ಹೋಲುವ ಮತ್ತೊಬ್ಬ ವ್ಯಕ್ತಿ ಪತ್ತೆಯಾಗಿದ್ದಾರೆ.

  ನೋಡಲು ಥೇಟ್ ಶಾರುಖ್ ಹಾಗೆ ಇರುವ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ನೋಡಿದ ಅಭಿಮಾನಿಗಳು ಇದು ನಕಲಿಯೂ ಅಸಲಿಯೋ ಎಂದು ಅಚ್ಚರಿ ಪಡುತ್ತಿದ್ದಾರೆ. ಅಂದಹಾಗೆ ಈ ವ್ಯಕ್ತಿಯ ಹೆಸರು ಇಬ್ರಾಹಿಂ ಖಾದ್ರಿ. ನೋಡಲು ಯತಾವತ್ತು ಶಾರುಖ್ ಹಾಗೆ ಕಾಣಿಸುತ್ತಿದ್ದಾರೆ. ಇಬ್ರಾಹಿಂ ಫೋಟೋಗಳನ್ನು ನೋಡಿದ್ರೆ ಇದು ಶಾರುಖ್ ಅಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಗೆ ಹೋಲಿಕೆ ಇದೆ.

  ಪಾಕಿಸ್ತಾನದಲ್ಲಿ ಸಿಕ್ಕಿದ್ದಾರೊಬ್ಬ ಐಶ್ವರ್ಯಾ ರೈ!ಪಾಕಿಸ್ತಾನದಲ್ಲಿ ಸಿಕ್ಕಿದ್ದಾರೊಬ್ಬ ಐಶ್ವರ್ಯಾ ರೈ!

  ಇಬ್ರಾಹಿಂ ಈಗ ಶಾರುಖ್ ಅಭಿಮಾನಿಗಳ ಅಚ್ಚರಿಗೆ ಕಾರಣರಾಗಿದ್ದಾರೆ. ಇಬ್ರಾಹಿಂ ಫೋಟೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಶಾರುಖ್ ಖಾನ್ ಹೋಲುವ ಹಾಗೆ ಇರುವ ಅಭಿಮಾನಿಯೊಬ್ಬನ ಬಗ್ಗೆ ಕಾಲ್ಪನಿಕ ಕಥೆಯ 'ಫ್ಯಾನ್' ಎನ್ನುವ ಸಿನಿಮಾ ಮಾಡಿದ್ದರು.

  ಶಾರುಖ್ ನಿಮ್ಮನ್ನು ಭೇಟಿ ಮಾಡಿದ್ರೆ ನಿಜಕ್ಕೂ ಅಚ್ಚರಿ ಪಡುತ್ತಾರೆ. ಫ್ಯಾನ್ ಚಿತ್ರಕ್ಕೆ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಇಬ್ರಾಹಿಂ ಫಾಲೊವರ್ಸ್ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

  ಪ್ರಾಣಿಗಳಿಗೂ ಕೊರೊನಾಗೂ ಏನ್ ಸಂಬಂಧ ಅಂತ ಹೇಳಿದ Darshan | Filmibeat Kannada

  ಶಾರುಖ್ ಸದ್ಯ ಪಠಾಣ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಝೀರೋ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ಬಣ್ಣ ಹಚ್ಚಿರಲಿಲ್ಲ. ಸುಮಾರು 3 ವರ್ಷಗಳ ಬಳಿಕ ಶಾರುಖ್ ಸಿನಿಮಾದಲ್ಲಿ ಮಿಂಚಲು ತಯಾರಾಗುತ್ತಿದ್ದಾರೆ. ಸದ್ಯ ಶಾರುಖ್, ಪಠಾಣ್ ಸಿನಿಮಾ ಜೊತೆಗೆ ಇನ್ನು ಎರಡು ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Actor Shah Rukh Khan's lookalike Ibrahim Qadri photo goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X