25 ಲಕ್ಷ ಮೌಲ್ಯದ ಶಾರುಖ್ ಖಾನ್ ಮನೆಯ ನೇಮ್ ಬೋರ್ಡ್ ಮಾಯ!

ಶಾರುಖ್ ಖಾನ್ ಅನ್ನು ಕಿಂಗ್ ಖಾನ್ ಎಂದೇ ಕರೆಯಲಾಗುತ್ತದೆ. ಬದುಕನ್ನು 'ಕಿಂಗ್ ಸೈಜ್'ನಲ್ಲಿಯೇ ಬದುಕುತ್ತಿರುವವರು ಶಾರುಖ್ ಖಾನ್.

ಮುಂಬೈನ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಶಾರುಖ್ ಖಾನ್‌ರ ಮನೆ 'ಮನ್ನತ್' ಅನ್ನೂ ಸೇರಿಸುತ್ತಾರೆ ಅಲ್ಲಿನ ಸ್ಥಳೀಯ ಟೂರಿಸ್ಟ್‌ ಗೈಡ್‌ಗಳು. ಅಷ್ಟು ಪ್ರಖ್ಯಾತಿ ಶಾರುಖ್‌ರ 'ಮನ್ನತ್‌'ಗೆ.

ಭಾರಿ ಐಶಾರಾಮಿ, ಅದ್ಧೂರಿಯಾದ 'ಮನ್ನತ್'ನಲ್ಲಿ ಶಾರುಖ್ ವಾಸಿಸುತ್ತಾರೆ. ಆ ಮನೆಯ ಬಗ್ಗೆ ಶಾರುಖ್‌ರಿಗೆ ವಿಶೇಷ ಮಮತೆ. ಬಹಳ ಕಷ್ಟ ಪಟ್ಟು ಕಟ್ಟಿದ ಮನೆ ಅದೆಂದು ಶಾರುಖ್ ಹಲವು ಬಾರಿ ಹೇಳಿಕೊಂಡಿದ್ದಿದೆ. ಈ ಮನೆ ಅದೆಷ್ಟು ಐಶಾರಾಮಿ ಎಂದರೆ ಮನೆಯ ಮುಂದೆ ಹಾಕಲಾಗಿರುವ ನೇಮ್ ಬೋರ್ಡ್ನ ಬೆಲೆ ಬರೋಬ್ಬರಿ 25 ಲಕ್ಷ ರುಪಾಯಿ!

ಭಾರಿ ದುಬಾರಿ ನೇಮ್‌ ಬೋರ್ಡ್

ಭಾರಿ ದುಬಾರಿ ನೇಮ್‌ ಬೋರ್ಡ್

ಶಾರುಖ್ ಖಾನ್ ಮನೆ 'ಮನ್ನತ್'ನ ಮುಂದೆ ಗೇಟ್‌ನ ಬಳಿ ಅಳವಡಿಸಲಾಗಿದ್ದ 'ಮನ್ನತ್' ಎಂಬ ನೇಮ್ ಬೋರ್ಡ್ ಭಿನ್ನವಾದ ಲೈಟಿಂಗ್, ಸ್ಟೈಲ್ ನಿಂದ ಗಮನ ಸೆಳೆಯುತ್ತಿತ್ತು. ಹೊಳೆವ ಕಲ್ಲುಗಳನ್ನು ಸಹ ಆ ನೇಮ್ ಬೋರ್ಡ್ನಲ್ಲಿ ಅಳವಡಿಸಲಾಗಿತ್ತು. ಹಾಗಾಗಿಯೇ ಆ ನೇಮ್ ಬೋರ್ಡ್ನ ಬೆಲೆ ಅಷ್ಟು ದುಬಾರಿಯಾಗಿತ್ತು.

ನೇಮ್ ಬೋರ್ಡ್ ಕಾಣೆಯಾಗಿದೆ

ನೇಮ್ ಬೋರ್ಡ್ ಕಾಣೆಯಾಗಿದೆ

ಈಗ ಈ ದುಬಾರಿ ನೇಮ್ ಬೋರ್ಡ್ ಕಾಣೆಯಾಗಿದೆ. ಶಾರುಖ್ ಮನೆಯ ಮುಂದೆ ಈ ನೇಮ್ ಬೋರ್ಡ್ ಇಲ್ಲ. ಹಾಗೆಂದು ಈ ದುಬಾರಿ ನೇಮ್ ಬೋರ್ಡ್ ಅನ್ನು ಕದ್ದಿಲ್ಲ, ಬದಲಿಗೆ ಶಾರುಖ್ ಅವರೇ ಈ ನೇಮ್ ಬೋರ್ಡ್ ತೆಗೆಸಿದ್ದಾರೆ. ಈ ದುಬಾರಿ ನೇಮ್ ಬೋರ್ಡ್ನಲ್ಲಿದ್ದ ಹರಳೊಂದು ಉದುರಿ ಹೋಗಿತ್ತಂತೆ ಹಾಗಾಗಿ ನೇಮ್ ಬೋರ್ಡ್ನ ಅಂದ ಹಾಳಾಗಿತ್ತು. ಹಾಗಾಗಿ ಅದನ್ನು ರಿಪೇರಿಗೆ ಕಳಿಸಲಾಗಿದೆ. ಕೆಲವೇ ದಿನಗಳಲ್ಲಿ ನೇಮ್ ಬೋರ್ಡ್ ಅನ್ನು ಮತ್ತೆ ಅದೇ ಜಾಗದಲ್ಲಿ ಇರಿಸಲಾಗುತ್ತದೆ.

ಮುಂಬೈನ ದುಬಾರಿ ಮನೆಗಳಲ್ಲಿ ಒಂದು

ಮುಂಬೈನ ದುಬಾರಿ ಮನೆಗಳಲ್ಲಿ ಒಂದು

ಶಾರುಖ್ ಖಾನ್‌ರ 'ಮನ್ನತ್' ಮನೆ ಮುಂಬೈನ ಐಶಾರಾಮಿ ಮನೆಗಳಲ್ಲಿ ಒಂದು. ಮುಖೇಶ್ ಅಂಬಾನಿ, ಹಾಗೂ ಬಿರ್ಲಾ ಹೌಸ್ ನಂತರ ಅತಿ ದುಬಾರಿ ಮನೆ ಶಾರುಖ್ ಖಾನ್‌ರದ್ದು. 'ಮನ್ನತ್'ನ ಈಗಿನ ಮೌಲ್ಯ ಸುಮಾರು 300 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. ಆರು ಮಹಡಿಗಳುಳ್ಳ ಶಾರುಖ್ ಖಾನ್‌ರ ಈ ಮನೆಯಲ್ಲಿ ಖಾಸಗಿ ಚಿತ್ರಮಂದಿರ, ಒಳಾಂಗಣ ಈಜುಕೊಳ, ತಾರಸಿ ಕೈತೋಟ, ಜಿಮ್ಮು, ಹಲವು ಬೆಡ್‌ರೂಮ್‌ಗಳು, ದೊಡ್ಡ ಪಾರ್ಕಿಂಗ್ ತಾಣ ಇನ್ನೂ ಹಲವು ಸೌಲಭ್ಯಗಳಿವೆ.

ಸತತ ಸೋಲು ಕಂಡಿರುವ ಶಾರುಖ್ ಖಾನ್

ಸತತ ಸೋಲು ಕಂಡಿರುವ ಶಾರುಖ್ ಖಾನ್

ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಶಾರುಖ್ ಖಾನ್ ಸಹ ಒಬ್ಬರು. ಆದರೆ ಕೆಲವು ವರ್ಷಗಳಿಂದ ಸತತ ಸೋಲು ಕಾಣುತ್ತಿದ್ದಾರೆ ಶಾರುಖ್ ಖಾನ್. ಪ್ರಸ್ತುತ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಗೂಢಚಾರಿಯ ಕತೆ ಹೊಂದಿರುವ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ. ಅದರ ಜೊತೆಗೆ ತಮಿಳಿನ ಅಟ್ಟಿಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದಾರೆ. ಬಳಿಕ ಸೋಲೆ ಕಾಣದ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆಗೆ 'ಡಂಕಿ' ಸಿನಿಮಾದಲ್ಲಿ ನಟಿಸಲಿದ್ದಾರೆ.

More from Filmibeat

English summary
Shah Rukh Khan's Mannat house name board missing. This board cost aroung 25 lakh rupees. House authority removed it for repair work.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X