ಕನ್ನಡ ಬಿಟ್ಟ ಶಾರುಖ್ ಖಾನ್ 'ಪಠಾಣ್' ಪ್ಯಾನ್ ಇಂಡಿಯಾ ಫಿಲ್ಮ್ ಅಲ್ಲವೇ ಅಲ್ಲಾ!

ಶಾರುಖ್ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ನೀಡಿದ್ದಾರೆ. ಅವರು ತಮ್ಮ ಮುಂಬರುವ ಚಿತ್ರ 'ಪಠಾಣ್' ಚಿತ್ರದ ಹೊಸ ಪೋಸ್ಟರ್​ನ್ನು ಹಂಚಿಕೊಂಡಿದ್ದಾರೆ.

ಪಠಾಣ್ ಸಿನಿಮಾದ ಮೂಲಕ ನಟ ಶಾರುಖ್ ಖಾನ್ ಬ್ರೇಕ್ ಬಳಿಕ ವಾಪಸ್ ಆಗಿದ್ದಾರೆ. ಹಾಗಾಗಿ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳಲಾಗುತ್ತಿದೆ. ಹಿಂದಿ ಜೊತೆಗೆ ಈ ಸಿನಿಮಾ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗ್ತಿದೆ.

ಶಾರುಖ್ ಖಾನ್‌ರ ಈ ಸಿನಿಮಾ ಕನ್ನಡಿಗರ ಕಣ್ಣು ಕೆಂಪಾಗಿಸಿದೆ. ಯಾಕೆಂದರೆ ಈ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ. ಹಾಗಾಗಿ ಇದು ಪ್ಯಾನ್ ಇಂಡಿಯಾ ಹೇಗೆ ಆಗುತ್ತೆ, ಹೀಗೆ ಕನ್ನಡವನ್ನು ಕಡೆಗಣಿಸಿದರೆ ಕನ್ನಡದಲ್ಲಿ ಈ ಚಿತ್ರದ ಬ್ಯುಸಿನೆಸ್ ಕೂಡ ಆಗುವುದಿಲ್ಲ ಎನ್ನುತ್ತಿದ್ದಾರೆ.

ಪಠಾಣ್ ಲುಕ್ ರಿಲೀಸ್!

ನಟ ಶಾರುಖ್ ಖಾನ್ ಪಠಾಣ್ ಸಿನಿಮಾದ ಫಸ್ಟ್ ಲುಕ್ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ವಿಡಿಯೋವಂದನ್ನು ಸಹ ಹಂಚಿಕೊಂಡಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದಾರೆ. ಈ ವೇಳೆ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿರುವ ಅವರು, "30 ವರ್ಷಗಳು ನಿಮ್ಮ ಪ್ರೀತಿ ಮತ್ತು ನಗು ಅಪರಿಮಿತವಾಗಿದೆ. ಇಲ್ಲಿ ಮೂಲಕ 'ಪಠಾಣ್' ಮುಂದುವರೆಯುತ್ತದೆ. ಜನವರಿ 25, 2023 ರಂದು ಪಠಾಣ್ ರಿಲೀಸ್. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಈ ವರ್ಷ ಯಶ್ ರಾಜ್ ಫಿಲ್ಮ್ಸ್ 50 ವರ್ಷಗಳನ್ನು ಪೂರೈಸಲಿದೆ" ಎಂದು ಬರೆದುಕೊಂಡಿದ್ದಾರೆ.

ಕನ್ನಡ, ಮಲಯಾಳಂನಲ್ಲಿ ಇಲ್ಲ ಪಠಾಣ್!

ಕನ್ನಡ, ಮಲಯಾಳಂನಲ್ಲಿ ಇಲ್ಲ ಪಠಾಣ್!

ನಟ ಶಾರುಖ್ ಖಾನ್ ಪಠಾಣ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಬಳಿಕ, ಕನ್ನಡಿಗರು ಈ ಚಿತ್ರದ ವಿರುದ್ಧ ಗರಂ ಆಗದ್ದಾರೆ. ಕನ್ನಡದಲ್ಲಿ ಈ ಚಿತ್ರದ ರಿಲೀಸ್ ಯಾಕೆ ಇಲ್ಲ ಎಂದು ಕೇಳುತ್ತಿದ್ದಾರೆ. ಕನ್ನಡದಲ್ಲಿ ದೊಡ್ಡ ಮಾರ್ಕೆಟ್ ಸೃಷ್ಟಿ ಆಗಿದೆ. ಆದರೂ ಈ ಚಿತ್ರ ಕನ್ನಡವನ್ನು ಕಡೆಗಣಿಸಿದೆ. ಹಾಗಾಗಿ ಈ ಚಿತ್ರವನ್ನು ಕನ್ನಡಿಗರು ನೋಡುವುದಿಲ್ಲ. ಕರ್ನಾಟಕದಲ್ಲಿ ಈ ಚಿತ್ರದ ಬ್ಯುಸಿನೆಸ್ ಆಗುವುದಿಲ್ಲ ಎನ್ನುತ್ತಿದ್ದಾರೆ.

ಶಾರುಖ್ ಜೊತೆ ದೀಪಿಕಾ!

ಶಾರುಖ್ ಜೊತೆ ದೀಪಿಕಾ!

ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಅವರ ಈ ವಿಡಿಯೋವನ್ನು ಶಾರುಖ್ ಖಾನ್ ಕೂಡ ಟ್ಯಾಗ್ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ 'ಪಠಾಣ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಸಲ್ಮಾನ್ ಖಾನ್ ವಿಶೇಷ ಅತಿಥಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಶಾರುಖ್ ಸಿನಿಮಾ ಜರ್ನಿಗೆ 30 ವರ್ಷ!

ಶಾರುಖ್ ಸಿನಿಮಾ ಜರ್ನಿಗೆ 30 ವರ್ಷ!

ಶಾರುಖ್ ಖಾನ್ ಸಿನಿಮಾ ಜರ್ನಿಗೆ 30 ವರ್ಷಗಳ ಆಗಿದೆ. ಸುದೀರ್ಘ 30 ವರ್ಷದ ಸಿನಿಮಾ ಪಯಣವನ್ನು ಮುಗಿಸಿದ್ದಾರೆ ಶಾರುಖ್ ಖಾನ್. ಮೊದಲ ಚಿತ್ರ 'ದೀವಾನಾ' 25 ಜೂನ್ 1992 ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಿಷಿ ಕಪೂರ್ ಮುಖ್ಯ ನಾಯಕನಾಗಿದ್ದರೂ. ಮೊದಲ ಚಿತ್ರದಲ್ಲೇ ಶಾರುಖ್ ಖಾನ್‌ಗೆ ಬ್ರೇಕ್ ಸಿಕ್ಕಿತು. ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದ್ದಿದ್ದಾರೆ ಶಾರುಖ್.

More from Filmibeat

English summary
Shah Rukh Khan's Pathaan Is Not Pan India Film, Because It Skip Kannada, Kannadigas Upset With Shah Rukh Khan, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X