For Quick Alerts
  ALLOW NOTIFICATIONS  
  For Daily Alerts

  'ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ಏನು ಗಿಫ್ಟ್ ಕೊಟ್ರಿ' ಎಂದ ಅಭಿಮಾನಿಗೆ ಶಾರುಖ್ ಹೇಳಿದ್ದೇನು?

  |

  ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ದಂಪತಿ ಇತ್ತೀಚಿಗಷ್ಟೆ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಶಾರುಖ್ ಖಾನ್, ಪತ್ನಿ ಗೌರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು 29 ವರ್ಷಗಳಾಗಿದೆ. 29ನೇ ವಾರ್ಷಿಕೋತ್ಸವದ ಸಮಯದಲ್ಲಿ ಶಾರುಖ್ ಖಾನ್ ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿದಿದ್ದರು.

  ಸಮಾಜಿಕ ಜಾಲತಾಣದಲ್ಲಿ ಶಾರುಖ್ ಖಾನ್, ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅಭಿಮಾನಿಯೊಬ್ಬ 29ನೇ ಮದುವೆ ವಾರ್ಷಿಕೋತ್ಸವದಲ್ಲಿ ಪತ್ನಿ ಗೌರಿ ಖಾನ್ ಅವರಿಗೆ ಏನು ಉಡುಗೊರೆ ನೀಡಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶಾರುಖ್ ನೀಡಿರುವ ಉತ್ತರ ಅಭಿಮಾನಿಗಳ ಮನಗೆದ್ದಿದೆ.

  ಕಾಜೋಲ್ ಮಗಳ ಜೊತೆ ಶಾರುಖ್ ಖಾನ್ ಪುತ್ರನ ಮದುವೆ ಸುದ್ದಿ ವೈರಲ್ಕಾಜೋಲ್ ಮಗಳ ಜೊತೆ ಶಾರುಖ್ ಖಾನ್ ಪುತ್ರನ ಮದುವೆ ಸುದ್ದಿ ವೈರಲ್

  ಗೌರಿ ಖಾನ್ ಅವರೇ ನನ್ನ ಜೀವನದ ಅತೀ ದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ. 'ನನ್ನ ಜೀವನದ ಅತೀ ದೊಡ್ಡ ಉಡುಗೊರೆಗೆ ನಾನು ಯಾವ ಗಿಫ್ಟ್ ನೀಡಬಲ್ಲೇ?' ಎಂದು ಉತ್ತರ ನೀಡಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ 1991ರಲ್ಲಿ ಅಕ್ಟೋಬರ್ 15ರಂದು ವಿವಾಹವಾಗಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಎನ್ನುವ ಮೂರು ಮುದ್ದಾದ ಮಕ್ಕಳಿದ್ದಾರೆ.

  ಗೌರಿ ಖಾನ್ ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಮುಂಬೈನಲ್ಲಿ ತನ್ನದೆ ಆದ ಸಂಸ್ಥೆ ಸ್ಥಾಪಿಸಿದ್ದಾರೆ. ದೊಡ್ಡ ರೆಸ್ಟೋರೆಂಟ್ ಗಳು ಪ್ರಸಿದ್ಧ ಮನೆಗಳ ಇಂಟೀರಿಯರ್ ಡಿಸೈನ್ ಮಾಡುತ್ತಾರೆ. ಬಾಲಿವುಡ್ ಕಲಾವಿದರಾದ ಅಲಿಯಾ ಭಟ್, ವರುಣ್ ಧವನ್, ರಣಬೀರ್ ಕಪೂರ್, ಕರಣ್ ಜೋಹರ್ ಸೇರಿದಂತೆ ಅನೇಕ ಸ್ಟಾರ್ ನಟರ ಮನೆಗಳನ್ನು ವಿನ್ಯಾಸಗೊಳಿಸಿದ್ದಾರೆ.

  ಸಿನಿಮಾ ನಿರ್ಮಾಪಕಿ ಕೂಡ ಹೌದು. ಇದೆಲ್ಲದರ ಜೊತೆಗೆ ಗೌರಿ ಖಾನ್ ಮೈ ಲೈಫ್ ಈಸ್ ಡಿಸೈನ್ ಎನ್ನುವ ಪುಸ್ತಕ ಮೂಲಕ ಲೇಖಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಐಪಿಎಲ್ ಪ್ರಯುಕ್ತ ಶಾರುಖ್ ಖಾನ್ ಸದ್ಯ ದುಬೈನಲ್ಲಿದ್ದಾರೆ. ಝೀರೋ ಸಿನಿಮಾ ನಂತರ ಶಾರುಖ್ ಮತ್ತೆ ಬಣ್ಣ ಹಚ್ಚಿಲ್ಲ. ಶಾರುಖ್ ಸಿನಿಮಾದಲ್ಲಿ ನಟಿಸದೆ ಸುಮಾರು 2 ವರ್ಷದ ಮೇಲಾಗಿದೆ. ಇದೀಗ ಶಾರುಖ್ ಬಳಿ 3 ಸಿನಿಮಾಗಳಿವೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.

  English summary
  bollywood Actor Shah Rukh Khan’s reply on being quizzed about his anniversary gift to Gauri proves why he is King of Romance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X