twitter
    For Quick Alerts
    ALLOW NOTIFICATIONS  
    For Daily Alerts

    ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ ಆರ್ಯನ್ ಖಾನ್

    |

    ಎನ್‌ಸಿಬಿಯಿಂದ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇಂದು ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ್ದರು.

    ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡುವಾಗ ವಾರಕ್ಕೊಮ್ಮೆ ಎನ್‌ಸಿಬಿ ಕಚೇರಿಗೆ ಭೇಟಿ ನೀಡಿ ಹಾಜರಿ ಸಲ್ಲಿಸಬೇಕು ಎಂಬ ಷರತ್ತನ್ನು ವಿಧಿಸಿತ್ತು ಹಾಗಾಗಿ ಆರ್ಯನ್ ಖಾನ್ ಇಂದು ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ್ದರು.

    ಆರ್ಯನ್ ಖಾನ್ ಇಂದು ತನ್ನ ಬಾಡಿಗಾರ್ಡ್ ರವಿ ಸಿಂಗ್ ಜೊತೆಗೆ ಎನ್‌ಸಿಬಿ ಕಚೇರಿಗೆ ತೆರಳಿದ್ದರು. ಆರ್ಯನ್ ಖಾನ್ ಅನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದ ದಿನವೂ ಸಹ ಇದೇ ರವಿ ಸಿಂಗ್ ಆರ್ಯನ್ ಖಾನ್ ಜೊತೆಗೆ ಇದ್ದರು.

    ಆರ್ಯನ್ ಖಾನ್ ಎನ್‌ಸಿಬಿ ಕಚೇರಿಗೆ ಬರುವ ವೇಳೆಗೆ ಭಾರಿ ಸಂಖ್ಯೆಯ ಜನ, ಮಾಧ್ಯಮದವರು ಸೇರಿದ್ದರು. ಎಲ್ಲರನ್ನೂ ನಿರ್ಲಕ್ಷಿಸಿ ತಲೆ ಬಗ್ಗಿಸಿಕೊಂಡು ಎನ್‌ಸಿಬಿ ಕಚೇರಿಯ ಒಳಗ್ಗೆ ಆರ್ಯನ್ ಖಾನ್ ನಡೆದರು. ಅವರ ಬಾಡಿಗಾರ್ಡ್ ಆರ್ಯನ್‌ಗೆ ರಕ್ಷಣೆ ಒದಗಿಸಿದರು.

    Shah Rukh Khans Son Aryan Khan Visited NCB Office In Mumbai

    ನ್ಯಾಯಾಲಯದ ಮುಂದಿನ ಆದೇಶದ ವರೆಗೆ ಆರ್ಯನ್ ಖಾನ್ ಪ್ರತಿ ಶುಕ್ರವಾರ 11 ಗಂಟೆಯಿಂದ 2 ಗಂಟೆಯ ಒಳಗೆ ಎನ್‌ಸಿಬಿ ಕಚೇರಿಗೆ ತೆರಳಿ ಹಾಜರಿ ಹಾಕಬೇಕು. ಹೀಗೆಂದು ಜಾಮೀನು ನೀಡುವ ವೇಳೆ ಬಾಂಬೆ ಹೈಕೋರ್ಟ್ ಷರತ್ತು ವಿಧಿಸಿತ್ತು. ಇದು ಮಾತ್ರವೇ ಅಲ್ಲದೆ ಇನ್ನೂ ಹಲವು ಷರತ್ತುಗಳನ್ನು ಆರ್ಯನ್‌ಗೆ ಬಾಂಬೆ ಹೈಕೋರ್ಟ್ ವಿಧಿಸಿತ್ತು.

    ಆರ್ಯನ್ ಖಾನ್‌ ಅನ್ನು ಅಕ್ಟೋಬರ್ 02 ರಂದು ಎನ್‌ಸಿಬಿ ವಶಕ್ಕೆ ಪಡೆದಿತ್ತು. ಮುಂಬೈನ ಕ್ರೂಸ್ ಶಿಫ್‌ ಒಂದರಲ್ಲಿ ನಡೆದಿದ್ದ ಪಾರ್ಟಿಗೆ ಆರ್ಯನ್ ಖಾನ್ ಅತಿಥಿಯಾಗಿ ಪಾಲ್ಗೊಳ್ಳಲು ತೆರಳಿದ್ದಾಗ ಅವರನ್ನು ತಡೆದ ಎನ್‌ಸಿಬಿ ವಶಕ್ಕೆ ಪಡೆದಿತ್ತು. ನಂತರ ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅವರ ಗೆಳೆಯ ಅರ್ಬಾಜ್ ಸೇಠ್ ಮತ್ತು ಮಾಡೆಲ್ ಮುನ್-ಮುನ್ ಧಮೇಚಾ ಅವರನ್ನು ಬಂಧಿಸಿತ್ತು.

    ಅಕ್ಟೋಬರ್ 30 ರವರೆಗೆ ಆರ್ಯನ್ ಖಾನ್ ಜೈಲಿನಲ್ಲಿ ದಿನ ದೂಡಿದ್ದು, ಬಾಂಬೆ ಹೈಕೋರ್ಟ್‌ನಲ್ಲಿ ಆರ್ಯನ್‌ಗೆ ಜಾಮೀನು ಮಂಜೂರಾಯಿತು.

    ಆದರೆ ಇದೀಗ ಪ್ರಕರಣಕ್ಕೆ ದೊಡ್ಡ ತಿರುವು ಲಭಿಸಿದ್ದು, ಎನ್‌ಸಿಬಿ ಹಣ ವಸೂಲಿಯ ಉದ್ದೇಶದಿಂದ ಆರ್ಯನ್ ಅನ್ನು ಬಂಧಿಸಿತ್ತು ಎಂಬ ಅನುಮಾನಗಳು ವ್ಯಕ್ತವಾಗಿವೆ. ಎನ್‌ಸಿಬಿಯು ಸ್ವತಂತ್ರ್ಯ ಸಾಕ್ಷಿ ಎಂದು ದಾಖಲಿಸಿಕೊಂಡಿದ್ದ ಪ್ರಭಾಕರ್ ಸಾಯಿಲ್ ಎಂಬಾತ ತನ್ನ ಬಾಸ್ ಕಿರಣ್ ಗೋಸಾವಿ (ಆರ್ಯನ್ ಜೊತೆ ಎನ್‌ಸಿಬಿ ಕಚೇರಿಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾತ) ಹಾಗೂ ಸ್ಯಾಮ್ ಡಿಸೋಜಾ ಎಂಬಾತ ಇಬ್ಬರೂ ಸೇರಿ ಶಾರುಖ್ ಖಾನ್ ಮ್ಯಾನೇಜರ್ ಬಳಿಯಿಂದ ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಲಕ್ಷ ಹಣ ಪಡೆದಿದ್ದರು ಎಂದು ಹೇಳಿದ್ದಾನೆ. ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿಯಿಂದ 50 ಲಕ್ಷ ಹಣ ಪಡೆದಿರುವುದನ್ನು ಸ್ಯಾಮ್ ಡಿಸೊಜಾ ಸಹ ಒಪ್ಪಿಕೊಂಡಿದ್ದಾನೆ.

    ಆರ್ಯನ್ ಖಾನ್ ಅನ್ನು ಬಂಧಿಸಿದ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧವೂ ಲಂಚದ ಆರೋಪ ಕೇಳಿ ಬಂದಿದ್ದು, ಎನ್‌ಸಿಬಿಯ ದೆಹಲಿಯ ಕೇಂದ್ರ ಕಚೇರಿಯು ವಿಶೇಷ ತನಿಖಾ ತಂಡವೊಂದನ್ನು ರಚಿಸಿ, ಸಮೀರ್ ವಾಂಖೆಡೆ, ಗೋಸಾವಿ, ಸ್ಯಾಮ್ ಡಿಸೋಜಾ, ಪ್ರಭಾಕರ್ ಸಾಯಿಲ್, ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಅವರುಗಳ ವಿಚಾರಣೆ ನಡೆಸುತ್ತಿದೆ.

    English summary
    Shah Rukh Khan's son Aryan Khan visited NCB office in Mumbai today. He was out on bail now. He was arrested by NCB in drugs case on October 03 released on bail on October 30.
    Friday, November 5, 2021, 18:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X