For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಇಬ್ಬರು ಸ್ಟಾರ್ ನಟರ ಮಕ್ಕಳು ವಶಕ್ಕೆ

  |

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಮಗ ಆರ್ಯನ್‌ನನ್ನು ಎನ್‌ಸಿಬಿ ವಿಚಾರಣೆ ನಡೆಸುತ್ತಿದೆ.

  ಅಕ್ಟೋಬರ್ ಎರಡರಂದು ಮುಂಬೈ ಪೊಲೀಸರು ಶಿಪ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದರ ಮೇಲೆ ರೇಡ್ ಮಾಡಿದ್ದರು. ಆ ಪಾರ್ಟಿಯಲ್ಲಿ ಶಾರುಖ್ ಖಾನ್ ಪುತ್ರನೂ ಇದ್ದ ಎಂದು ಹೇಳಲಾಗುತ್ತಿದೆ.

  ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ನಡೆಯುತ್ತಿತ್ತೆನ್ನುವ ಆರೋಪ ಇದ್ದು, ಶಾರುಖ್ ಖಾನ್ ಮಗನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದು ಎನ್‌ಸಿಬಿಯು ಆರ್ಯನ್‌ನನ್ನು ವಿಚಾರಣೆ ನಡೆಸುತ್ತಿದೆ.

  ಶಾರುಖ್ ಖಾನ್ ಮಗನು ಮಾತ್ರವೇ ಅಲ್ಲದೆ ಮತ್ತೊಬ್ಬ ಸ್ಟಾರ್ ನಟನ ಮಗನನ್ನೂ ಸಹ ಇದೇ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

  ಮೂಲಗಳ ಪ್ರಕಾರ ಶಾರುಖ್ ಖಾನ್ ಪುತ್ರ ಡ್ರಗ್ಸ್ ಸೇವನೆ ಮಾಡರಿಲಿಲ್ಲವೆಂದು, ಆರ್ಯನ್‌ನನ್ನು ಕೇವಲ ವಿಚಾರಣೆಗೆ ಮಾತ್ರವೇ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆರ್ಯನ್‌ನ ಫೋನ್‌ ಅನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಡ್ರಗ್ಸ್‌ ಸೇವನೆಯ ಸುಳಿವು ಅಥವಾ ಡ್ರಗ್ಸ್ ಜಾಲದೊಂದಿಗೆ ಸಂಪರ್ಕ ಇದ್ದ ಬಗ್ಗೆ ಸುಳಿವು ಸಿಗಬಹುದೇ ಎಂದು ಹುಡುಕಾಟ ನಡೆಸುತ್ತಿದ್ದಾರೆ.

  ನಿನ್ನೆ ನಡೆದ ರೇಡ್‌ನಲ್ಲಿ ಸುಮಾರು 10 ಮಂದಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದು, ಎಲ್ಲರ ವಿಚಾರಣೆ ನಡೆಯುತ್ತಿದೆ.

  English summary
  Shah Rukh Khan's son detained by NCB in drugs related case. Narcotics Control Bureau detained at least 10 persons during a raid conducted at a party being held on a cruise in Mumbai yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X