ಈ ಕಾರಣಕ್ಕಾಗಿ ಅಕ್ಷಯ್ ಕುಮಾರ್ ಜೊತೆ ನಟಿಸುವುದಿಲ್ಲ ಎಂದಿದ್ದ ಶಾರುಖ್ ಖಾನ್

ಅಕ್ಷಯ ಕುಮಾರ್ ಮತ್ತು ಶಾರುಖ್ ಖಾನ್ ಇಬ್ಬರು ಬಾಲಿವುಡ್ ನ ಖ್ಯಾತ ನಟರು. ತಮ್ಮದೆ ಆದ ಅಭಿಮಾನಿ ಬಳಗ ಹೊಂದಿರುವ ಸ್ಟಾರ್ ಕಲಾವಿದರು. ಅಕ್ಷಯ್ ಕುಮಾರ್ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳನ್ನು ಮಾಡುತ್ತಾ, ಸಖತ್ ಬ್ಯುಸಿಯಾಗಿರುವ ನಟ. ಇನ್ನೂ ಶಾರುಖ್ ಕಳೆದ ಎರಡು ವರ್ಷಗಳಿಂದ ಬಣ್ಣಹಚ್ಚಿಲ್ಲ. ಸತತ ಸೋಲಿನಿಂದ ಕಂಗೆಟ್ಟಿರುವ ಶಾರುಖ್ ಸಿನಿಮಾದಿಂದ ಬ್ರೇಕ್ ಪಡೆದಿದ್ದಾರೆ. ಹಾಗಂತ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ.

ಶಾರುಖ್ ಗೆ ಸಿನಿಮಾ ಮಾಡಲು ನಿರ್ಮಾಪಕರು ಕಾಯುತ್ತಿದ್ದಾರೆ. ಸದ್ಯ ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಅದೇನೆ ಇರಲಿ ಶಾರುಖ್ ಮತ್ತು ಅಕ್ಷಯ್ ಕುಮಾರ್ ನನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದೆಡೆ ಮೂವರು ಖಾನ್ ಗಳು ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿರುತ್ತಾರೆ. ಈ ನಡುವೆ ಅಕ್ಷಯ್ ಮತ್ತು ಶಾರುಖ್ ಒಟ್ಟಿಗೆ ಸಿನಿಮಾ ಮಾಡುವುದು ಯಾವಾಗ ಎನ್ನುವುದು ಸಹ ಕುತೂಹಲ ಮೂಡಿಸಿದೆ.

Shah Rukh Khan Said Akshay Kumar And He Can Never Work Together For This Reason

ಆದರೆ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲು ಸಾಧ್ಯವಿಲ್ಲವಂತೆ. ಹೀಗಂತ ಸ್ವತಃ ಶಾರುಖ್ ಖಾನ್ ಅವರೇ ಹೇಳಿದ್ದಾರೆ. ಈ ಹಿಂದೆ ಸಂದರ್ಶವೊಂದರಲ್ಲಿ ಶಾರುಖ್ ಖಾನ್ ಗೆ, ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡಲು ಬಯಸುತ್ತೀರಾ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಶಾರುಖ್, 'ನಾನು ಇದಕ್ಕೆ ಏನು ಹೇಳಲಿ? ನಾನು ಅಕ್ಷಯ್ ಕುಮಾರ್ ಅಷ್ಟು ಬೇಗ ಬೆಳಗ್ಗೆ ಏಳುವುದಿಲ್ಲ. ಹಾಗಾಗಿ ಅವರ ಜೊತೆ ಕೆಲಸ ಮಾಡಲು ಕಷ್ಟವಾಗಿತ್ತೆ' ಎಂದಿದ್ದಾರೆ.

'ಇಬ್ಬರು ಸೆಟ್ ನಲ್ಲಿ ಒಟ್ಟಿಗೆ ಸೇರಲು ಸಾಧ್ಯವೇ ಇಲ್ಲ. ಅಕ್ಷಯ್ ಜೊತೆ ನಟಿಸುವುದು ತಮಾಷೆಯಾಗಿರುತ್ತೆ. ಆದರೆ ಅಕ್ಷಯ್ ಸೆಟ್ ನಿಂದ ಹೊರಡುತ್ತಿರುವಾಗ ನಾನು ಸೆಟ್ ಗೆ ಎಂಟ್ರಿ ಕೊಡುತ್ತೇನೆ. ಅಕ್ಷಯ್ ಜೊತೆ ಕೆಲಸ ಮಾಡಲು ಬಯಸುತ್ತೇನೆ. ಆದರೆ ಇಬ್ಬರ ಸಮಯ ಹೊಂದಿಕೆಯಾಗುವುದಿಲ್ಲ' ಎಂದು ಶಾರುಖ್ ಹೇಳಿದ್ದಾರೆ.

ಅಂದಹಾಗೆ ಅಕ್ಷಯ್ ಕುಮಾರ್ ಬೆಳಗ್ಗೆ ಬೇಗ ಎದ್ದೇಳುತ್ತಾರೆ. ಸಂಜೆ ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಾರೆ. ಆದರೆ ಶಾರುಖ್ ತಡರಾತ್ರಿ ಕೆಲಸ ಮಾಡಲು ಬಯಸುತ್ತಾರೆ. ಹಾಗಾಗಿ ಇಬ್ಬರಿಗೂ ಸಮಯದ ಹೊಂದಾಣಿಕೆ ತುಂಬಾ ಕಷ್ಟಸಾಧ್ಯ ಎನ್ನುವುದು ಶಾರುಖ್ ಮಾತು.

ಆದರೆ ಇದು ಅನೇಕ ವರ್ಷಗಳ ಹಿಂದೆ ಹೇಳಿರುವ ಮಾತು. ಆದರೀಗ ಶಾರುಖ್ ಮತ್ತು ಅಕ್ಷಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕು. ಅಕ್ಷಯ್ ಸದ್ಯ ಲಕ್ಷ್ಮೀ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
Bollywood Actor Shah Rukh Khan Said Akshay Kumar and he can Never work togather for this reason.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X